Aadhar cardಗೆ Mobile number link ಆಗಿದೆಯೇ? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

click here to verify mobile number ಗೆ ಯಾವ ಮೊಬೈಲ್ ನಂಬರ್ ಲಿಂಕ್ ಆಗಿದೆ ಎಂಬುದನ್ನು ಈಗ ಸಾರ್ವಜನಿಕರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಇದಕ್ಕಾಗಿ ಸಾರ್ವಜನಕರು ಯಾವ ನೆಟ್ ಸೆಂಟರ್ ಗಳಿಗೂ ಹೋಗಬೇಕಿಲ್ಲ, ಯಾರ ಸಹಾಯವೂ ಇಲ್ಲದೆ ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಮೊದಲು ಆಧಾರ್ ಕಾರ್ಡ್ ಮಾಡಿಸುವಾಗ ಸಾರ್ವಜನಿಕರು ತಮ್ಮ ಬಳಿ ಫೋನ್ ಇರದಿದ್ದಾಗ ತಮ್ಮ ನೆರೆಹೊರೆಯವರ ಅಥವಾ ಕೆಲವರು ಆಧಾರ್ ಕಾರ್ಡ್ ಮಾಡುವವರ ನಂಬರ್ ಸಹಾಯದಿಂದಾಗಿ ಆಧಾರ್ ಕಾರ್ಡ್ ಮಾಡಿಸಿಕೊಂಡಿರುತ್ತಾರೆ ಇನ್ನೂ ಕೆಲವರು ತಮ್ಮ ಮೊಬೈಲ್ ನಂಬರ್ ಚೆಂಜ್ ಮಾಡಿಸಿಕೊಂಡಿರುತ್ತಾರೆ. ಹೀಗಾಗಿ ಕೆಲವು ಸಲ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವಾಗ ಎಸ್ಎಂಎಸ್ ತಮ್ಮ ಮೊಬೈಲಿಗೆ ಬರದೆ ಸಮಸ್ಯೆ ಎದುರಿಸುತ್ತಿರುತ್ತಾರೆ. ಒಮ್ಮೆ ನೀವು ನಿಮ್ಮ ಆಧಾರ್ ಕಾರ್ಡಿಗೆ ಯಾವ ಮೊಬೈಲ್ ನಂಬರ್ ಲಿಂಕ್ ಆಗಿದೆ ಎಂಬುದನ್ನು ಹೀಗೆ ಚೆಕ್ ಮಾಡಬಹುದು.

click here to verify mobile number ಗೆ  ಯಾವ ಮೊಬೈಲ್ ನಂಬರ್ ಲಿಂಕ್ ಆಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಸಾರ್ವಜನಿಕರು ತಮ್ಮ ಬಳಿಯಿರುವ ಆಧಾರ್ ಕಾರ್ಡ್,  ತಮ್ಮ ಕುಟುಂಬದ ಹಾಗೂ ಮಕ್ಕಳ ಆಧಾರ್ ಕಾರ್ಡಿಗೆ ಯಾವ ಮೊಬೈಲ್ ನಂಬರ್ ಲಿಂಕ್ ಆಗಿದೆ ಎಂಬುದನ್ನು ಚೆಕ್ ಮಾಡಲು ಈ

https://myaadhaar.uidai.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಧಾರ್ ಕಾರ್ಡ್ ವೆಬ್ಸೈಟ್ ಪೇಜ್ ಅಂದರೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ವೆಬ್ಸೈಟ್  ತೆರೆದುಕೊಳ್ಳುತ್ತದೆ. Verify Email/Mobile ಆಪಶನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಬೇಕು. ನಿಮ್ಮ ಮೊಬೈಲ್ ನಂಬರ್ ಹಾಕಿ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ಸೆಂಡ್ ಓಟಿಪಿ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತೀರೋ ಆಗ ನಂಬರಿಗೆ ಓಟಿಪಿ ಬರುತ್ತದೆ. ನೀವು ನಮೂದಿಸಿದ ಮೊಬೈಲ್ ನಂಬರ್ ಸರಿಯಿದ್ದರೆ ವೆರಿಫೈ ಮೆಸೇಜ್ ನಿಮ್ಮ ಮೊಬೈಲಿಗೆ ಬರುತ್ತದೆ.  ಇಲ್ಲವಾದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ ಹಾಗೂ ಈ ಮೇಲೆ ನಮೂದಿಸಿದ್ದಕ್ಕೆ ಮೆಸೆಜ್ ಬರದಿದ್ದಲ್ಲಿ ಲಿಂಕ್ ಆಗಿಲ್ಲವೆಂದರ್ಥ.

ಒಂದು ವೇಳೆ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನೆನಪಿಲ್ಲದಿದ್ದರೆ ವೆರಫೈ ಆಧಾರ್ ಮೇಲೆ ಕ್ಲಿಕ್ ಮಾಡಬೇಕು. ಆಗ ದಾಖಲಾತಿ ಸಮಯದಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಯ ಕೊನೆಯ ಮೂರು ಅಂಕಿಗಳು ಕಾಣಿಸುತ್ತವೆ. ಆಧಾರದ ಮೇಲೆ ನೀವು ಯಾವ ನಂಬರ್ ಕೊಟ್ಟಿದ್ದೀರೆಂದು ತಿಳಿದುಕೊಳ್ಳಬಹುದು.

ಇದನ್ನೂಓದಿ : ಈ ಲಿಸ್ಟ್ ನಲ್ಲಿರುವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ಇಲ್ಲೇ ಚೆಕ್ ಮಾಡಿ

ಒಂದು ವೇಳೆ ನೀವು ಈಗ ನಿಮ್ಮ ಬಳಿಯಿರುವ ಮೊಬೈಲ್ ಗೆ ಆಧಾರ್ ಲಿಂಕ್ ಮಾಡಬೇಕೆಂದುಕೊಂಡಿದ್ದರೆ ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ಮೊಬೈಲ್ , ಇ ಮೇಲ್ ಐಡಿಯನ್ನು ಅಪ್ಡೇಟ್ ಮಾಡಿಸಿಕೊಳ್ಳಬಹುದು.

ನಿಮ್ಮ ಬಳಿಯಿರುವ ಮೊಬೈಲಿಗೆ ಆಧಾರ್ ಲಿಂಕ್ ಮಾಡಿಕೊಂಡರೆ ಉತ್ತಮ. ಏಕೆಂದರೆ ಸರ್ಕಾರಿ ಸೌಲಭ್ಯ ಪಡೆಯಲು ಹಾಗೂ ಇನ್ನಿತರ ಚಟುವಟಿಕೆಗೆ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಆಗ  ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲಿಗೆ ಓಟಿಪಿ ಬರುತ್ತದೆ. ಆಗ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಕೂಡಲೇ ನೀವು ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡಿಸಿಕೊಳ್ಳುವುದು ಉತ್ತಮ.

Leave a Comment