pm kisan money ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಈ ಸಲವೂ ಎಂದಿನಂತೆ ಮೆಸೆಜ್ ಕಳಿಸಲಾಗಿದೆ. ಯಾವ ರೈತರಿಗೆ ಕೇಂದ್ರ ಸಚಿವಾಲಯದಿಂದ ರೈತರ ಮೊಬೈಲಿಗೆ ಮೆಸೆಜ್ ಬಂದಿರುತ್ತೋ ಅವರಿಗೆ ಮಾತ್ರ ಹಣ ಜಮೆಯಾಗಲಿದೆ.
ಹೌದು, ಪಿಎಂ ಕಿಸಾನ್ ಯೋಜನೆಯಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿದೆ. ಇದಕ್ಕಿಂತ ಮುಂಚಿತವಾಗಿ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ನಲ್ಲಿ ರಾಜ್ಯ ಸರ್ಕಾರದಿಂದ ಅಪ್ರೂವಲ್ ಆಗುತ್ತಿತ್ತು. ನಂತರ ಹಣ ಜಮೆಯಾಗಲು ಪ್ರೊಸೆಸ್ ಕಂಪ್ಲೀಟ್ ಎಂಬುದು ಕಾಣಿಸುತ್ತಿತ್ತು. ಆದರೆ ಈ ಸಲ ಅಂದರೆ 13ನೇ ಕಂತಿನ ಸ್ಟೇಟಸ್ ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಾಗಾಗಿ ಸ್ಟೇಟಸ್ ಪೇಜ್ ಆಧಾರದ ಮೇಲೆ ಯಾವ ರೈತರಿಗೆ ಜಮೆಯಾಗುತ್ತದೆ ಯಾವ ರೈತರಿಗೆ 13ನೇ ಕಂತಿನ ಹಣ ಜಮೆಯಾಗುವುದಿಲ್ಲ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ. ಹಾಗಾದರೆ ರೈತರಿಗೆ ಯಾವ ಮೆಸೆಜ್ ಬಂದಿರಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
pm kisan money ಕೇಂದ್ರ ಸಚಿವಾಲಯದಿಂದ ಪಿಎಂ ಕಿಸಾನ್ ಕುರಿತಂತೆ ಮೆಸೆಜ್ ಬಂದಿದೆಯೇ?
ಕೇಂದ್ರ ಸಚಿವಾಲಯದಿಂದ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಅದರಲ್ಲಿ 13ನೇ ಕಂತಿನ ಹಣ ಯಾವ ಯಾವ ರೈತರಿಗೆ ಜಮೆ ಮಾಡಲಾಗುವುದೋ ಆ ರೈತರಿಗೆ
Hon’ble Prime minister will release 13th installment of Pm kisan scheme on 27 February 2023 at 03:00 Pm from Belagavi, Karnataka, you can Join this program by registering yourself by the link
https://pmevents.ncog.gov.in/.
You are cordially invited to participated in the program ಎಂಬ ಮೆಸೆಜ್ ರೈತರ ಮೊಬೈಲಿಗೆ ಕಳಿಸಲಾಗಿರುತ್ತದೆ. ರೈತರು ತಮ್ಮ ಮೊಬೈಲಿನ ಮೆಸೆಜ್ ಬಾಕ್ಸ್ ನಲ್ಲಿ ಈ ಸಂದೇಶ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಒಂದು ವೇಳೆ ನಿಮ್ಮ ಮೆಸೆಜ್ ಬಾಕ್ಸ್ ಫುಲ್ ಆಗಿದ್ದರೆ ಮೆಸೆಜ್ ಡ್ರಾಫ್ ಬಾಕ್ಸ್ ನಲ್ಲಿರುತ್ತದೆ.
ಯಾವಾಗ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ? (when does pm kisan credit)
ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಫೆಬ್ರವರಿ 27 ರಂದು ಮಧ್ಯಾಹ್ನ 3 ಗಂಟೆಗೆ ದೇಶದ ಎಲ್ಲಾ ಫಲಾನಭವಿ ರೈತರಿಗೆ ಏಕಕಾಲದಲ್ಲಿ ಜಮೆಯಾಗಲಿದೆ. ಹೌದು, ದೇಶದ 8 ಕೋಟಿಗಿಂತ ಹೆಚ್ಚಿನ ರೈತರಿಗೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 16,800 ಕೋಟಿ ರೂಪಾಯಿ ಹಣವನ್ನು ರೈತರ ಖಾತೆಗೆ ಜಮೆ ಮಾಡಲಿದ್ದಾರೆ.
ಪಿಎಂ ಕಿಸಾನ್ ಹಣ ಈ ಸಲ ಕರ್ನಾಟಕದಿಂದ ಏಕೆ ಬಿಡುಗಡೆ?(why this time pm kisan money release from Karnataka)
ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣವನ್ನು ಕರ್ನಾಟಕದಿಂದ ದೇಶದ ಎಲ್ಲಾ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಏಕೆಂದರೆ ಫೆಬ್ರವರಿ 27 ರಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜನ್ಮದಿನ. ಅವರ ಜನ್ಮದಿನದಂದೇ ರೈತರ ಖಾತೆಗೆ ಜಮೆ ಮಾಡುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ : ಜಮೀನಿನ ಓರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲಿನಲ್ಲಿ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ
ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಾಗಾಗಿ ಪಿಎಂ ಕಿಸಾನ್ ಹಣವನ್ನು ಅವರ ಹುಟ್ಟು ಹಬ್ಬದ ನೆನಪಿಗಾಗಿ 13ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ.