ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಿ

Written by Ramlinganna

Updated on:

Check your name in election list ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಹೌದು,18 ವರ್ಷ ಪೂರ್ಣಗೊಳಿಸಿದವರು ಮೊಬೈಲ್ ನಲ್ಲೇ ತಮ್ಮ ಹೆಸರನ್ನು ಚುನಾವಣೆ ಪಟ್ಟಿಯಲ್ಲಿ ಸೇರಿಸಲಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

18 ವರ್ಷ ಮೇಲ್ಪಟ್ಟವರೆಲ್ಲರೂ ಈಗ ಮತ ಹಾಕಲು ಅರ್ಹರಾಗಿರುತ್ತಾರೆ. ಆದರೆ ಚುನಾವಣೆ ಘೋಷಣೆಯಾದ ನಂತರ ಮತದಾನ ದಿನ ತಮ್ಮ ಹೆಸರು ಪಟ್ಟಿಯಲ್ಲಿಲ್ಲವೆಂದು ಕೊರಗುವವರು? ಈಗಲೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗಿದೆಯೋ ಅಥವಾ ಕೈಬಿಡಲಾಗಿದೆಯೋ ಎಂಬುದನ್ನು ಚುನಾವಣೆಕ್ಕಿಂತ ಮೊದಲೇ ತಮ್ಮ ಹೆಸರು ಚೆಕ್ ಮಾಡುವುದು ಉತ್ತಮ.

Check your name in election list ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡುವುದು ಹೇಗೆ

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://electoralsearch.in/#!#resultArea

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮ ಹೆಸರು ತಂದೆಯ ಹೆಸರು ಬರೆಯಬೇಕು. ವಯಸ್ಸು ಹಾಗೂ ಜನ್ಮ ದಿನಾಂಕ ಎಂಬ ಎರಡು ಆಯ್ಕೆಗಳಿರುತ್ತವೆ.  ಹುಟ್ಟಿದ ದಿನಾಂಕ ನೆನಪಿಲ್ಲದಿದ್ದರೆ ನಿಮಗೆಷ್ಟು ವಯಸ್ಸು ಎಂಬುದನ್ನುಬರೆಯಬೇಕು. ನಿಮ್ಮ ಹುಟ್ಟಿದ ದಿನಾಂಕ ನೆನಪಿದ್ದರೆ DoB ಆಯ್ಕೆ ಮಾಡಿಕೊಳ್ಳಬೇಕು.  ಅಲ್ಲಿ ನೀವು ಹುಟ್ಟಿದ ವರ್ಷ, ತಿಂಗಳು ಹಾಗೂ ದಿನಾಂಕ ನಮೂದಿಸಬೇಕು. ನಂತರ ಲಿಂಗ ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ಪುರುಷ ಅಥವಾ ಸ್ತ್ರೀ ಎರಡರಲ್ಲಿ ಒಂದು ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ರಾಜ್ಯ, ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ವಿಧಾನಸಭಾ ಕ್ಷೇತ್ರ ಅಂದರೆ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಅಲ್ಲಿ ಕಾಣುವ ಕೋಡ್ ನ್ನು captcha text ಬಾಕ್ಸ್ ಲ್ಲಿ ನಮೂದಿಸಿ search ಮೇಲೆ ಕ್ಲಿಕ್ ಮಾಡಬೇಕು.  ಆದ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ : ಈ ಪಟ್ಟಿಯಲ್ಲಿರುವ ರೈತರಿಗಷ್ಟೇ ಪಿಎಂ ಕಿಸಾನ್ ಹಣ ಜಮೆ- ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಿ

ಚುನಾವಣಾ ಪಟ್ಟಿಯಲ್ಲಿನಿಮ್ಮ ಹೆಸರಿದ್ದರೆ ನಿಮ್ಮ ಮತದಾರರ ಗುರುತಿ ಚೀಟಿ ಸಂಖ್ಯೆ, ನಿಮ್ಮ ಹೆಸರು, ನಿಮ್ಮ ವಯಸ್ಸು, ನಿಮ್ಮತಂದೆಯ ಅಥವಾ ಪತಿಯ ಹೆಸರು, ರಾಜ್ಯ ಮತ್ತು ಜಿಲ್ಲೆ ಕಾಣಿಸುತ್ತದೆ. ಇದರ ಮುಂದುಗಡೆ ಚುನಾವಣಾ ಸ್ಥಳ ಅಂದರೆ ಪೋಲಿಂಗ್ ಸ್ಟೇಶನ್, ವಿಧಾನಸಭಾ ಮತಕ್ಷೇತ್ರ, ಲೋಕಸಭಾ ಕ್ಷೇತ್ರ ಕಾಣಿಸುತ್ತದೆ.

View details

ವೀವ್ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ, ಹೆಸರು, ಗುರುತಿನ ಚೀಟಿ ಸಂಖ್ಯೆ, ತಂದೆಯ ಹೆಸರು, ಚುನಾವಣಾ ಕ್ರಮ ಸಂಖ್ಯೆ, ಸಿರಿಯಲ್ ನಂಬರ್, ಕಾಣಿಸುತ್ತದೆ.  ನಿಮ್ಮ ಪತ್ನಿ ಅಥವಾ 18 ವರ್ಷ ಮೇಲ್ಪಟ್ಟವರಾಗಿದ್ದರೆ ಅವರು ಹೆಸರು ಇರುತ್ತದೆ.

ಚುನಾವಣಾ ಪಟ್ಟಿಯಲ್ಲಿ ನಿಮ್ಮ ಹೆಸರಿರುವದನ್ನು ಹೀಗೂ ಚೆಕ್ ಮಾಡಬಹುದು

ಮತದಾರರು ಚುನಾವಣಾ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಇನ್ನೊಂದು ರೀತಿಯಲ್ಲೂ ಚೆಕ್ ಮಾಡಬಹುದು. ಚೆಕ್ ಮಾಡಲು, voter helpline  ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆ್ಯಪ್ ನಲ್ಲಿ ಎಲೆಕ್ಟ್ರೋಲ್ ಸರ್ಚ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಎಪಿಕ್ ಸಂಖ್ಯೆ ಅಥವಾ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ ತಮ್ಮ ಹೆಸರು ಚುನಾವಣಾ ಪಟ್ಟಿಯಲ್ಲಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Leave a Comment