Insure your summer crop ರೈತರು ಮುಂಗಾರು ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸುವಂತೆ ಬೇಸಿಗೆ ಬೆಳೆಗಳಿಗೆ ವಿಮೆ ಮಾಡಿಸಬಹುದು. ಹೌದು, ರೈತರು ಬೇಸಿಗೆ ಬೆಳೆಗಳಿಗೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಬಹುದು. ಹಾಗಾದರೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬೇಕು? ಯಾವ ಬೆಳೆಗ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Insure your summer crop ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು?
ರೈತರು ಮಂಗಾರು ಹಿಂಗಾರು ಬೆಳೆಗಳಂತೆ ಬೇಸಿಗೆ ಬೆಳೆಗಳಿಗೂ ವಿಮೆ ಮಾಡಿಸಬಹುದು. ಹೌದು, ಸೂರ್ಯಕಾಂತಿ, ನೆಲಗಡಲೆ (ಶೇಂಗಾ), ಈರುಳ್ಳಿ, ಸೂರ್ಯಕಾಂತಿ, ಭತ್ತ, ಟೊಮ್ಯಾಟೋ, ರಾಗಿ ಸೇರಿದಂತೆ ಇತರ ಬೆಳೆಗಳಿಗೆ ವಿಮೆ ಮಾಡಿಸಲು ಫೆಬ್ರವರಿ 28 ರವರೆಗೆ ಕಾಲಾವಕಾಶವಿದೆ.
ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು? ಮೊಬೈಲ್ ನಲ್ಲೇ ಚೆಕ್ ಮಾಡಿ
ಬೇಸಿಗೆ ಬೆಳೆಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಎಲ್ಲಾ ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶವಿರುವುದಿಲ್ಲ. ಒಂದು ಜಿಲ್ಲೆ ಒಂದು ಬೆಳೆಯಾದರೆ ಇನ್ನೊಂದು ಜಿಲ್ಲೆಗೆ ಇನ್ನೊಂದು ಬೆಳೆ ವಿಮೆ ಮಾಡಿಸಲು ಅವಕಾಶವಿರುತ್ತದೆ. ಹಾಗಾಗಿ ರೈತರು ತಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ಈ
https://www.samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಮುಂದೆ/Go ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು Farmers ಕಾಲಂ ಕೆಳಗಡೆ View Cut off Dates ಮೇಲೆ ಕ್ಲಿಕ್ ಮಾಡಬೇಕು. ಅಥವಾ ಈ
https://www.samrakshane.karnataka.gov.in/PublicView/FindCutOff.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಜಿಲ್ಲೆಯಲ್ಲಿ ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಹಾಗೂ ಯಾವ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಬಹುದು ಎಂಬ ಪಟ್ಟಿ ಕಾಣುತ್ತದೆ.
ಉದಾಹರಣೆ ನೀವು ಬಾಗಲಕೋಟೆ ಜಿಲ್ಲೆಯವರಾಗಿದ್ದರೆ ಸೂರ್ಯಕಾಂತಿ, ನೆಲಗಡಲೆ (ಶೇಂಗಾ) ಈರುಳ್ಳಿ ಹಾಗೂ ಸೂರ್ಯಕಾಂತಿ ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶವಿದೆ. ಈ ಬೆಳೆಗಳಿಗೆ ಫೆಬ್ರವರಿ 28 ರವರೆಗೆ ವಿಮೆ ಮಾಡಿಸಬಹುದು.
ಯಾವ ಬೆಳೆಗೆ ಎಷ್ಟು ವಿಮೆ ಹಣ ಕಟ್ಟಬೇಕು? ಎಷ್ಟು ಹಣ ಜಮೆಯಾಗುತ್ತದೆ?
ಶೇಂಗಾ( ನೆಲಗಡಲೆ) ಬೆಳೆಗೆ ಒಂದು ಎಕರೆಗೆ ರೈತರು 346 ರೂಪಾಯಿ ವಂತಿಗೆ ಕಟ್ಟಬೇಕು. ಬೆಳೆ ಹಾನಿಯಾದರೆ ರೈತರಿಗೆ ಒಂದು ಎಕರೆಗೆ 23067 ರೂಪಾಯಿಯವರೆಗೆ ವಿಮೆ ಹಣ ಜಮೆಯಾಗುತ್ತದೆ.
ಅದೇ ರೀತಿ ಈರುಳ್ಳಿ ಬೆಳೆಗ ವಿಮೆ ಮಾಡಿಸಲು ರೈತರು 1517 ರೂಪಾಯಿ ರೈತರ ವಂತಿಗೆ ಪಾವತಿಸಬೇಕು. ಬೆಳೆ ಹಾನಿಯಾದರೆ ರೈತರಿಗೆ ಒಂದು ಎಕರೆಗೆ 30352 ರೂಪಾಯಿಯವರೆಗೆ ಬೆಳೆ ವಿಮೆ ಪರಿಹಾರ ಹಣ ಜಮೆಯಾಗುತ್ತದೆ.
ಇದನ್ನೂ ಓದಿ ನಿಮ್ಮ ಹೆಸರಿಗೆ ಯಂತ್ರೋಪಕರಣ ಪಡೆಯಲಾಗಿದೆಯೇ? ಚೆಕ್ ಮಾಡಿ
ಒಂದು ವೇಳೆ ಭತ್ತಕ್ಕೆ ಬೆಳೆ ವಿಮೆ ಮಾಡಿಸಿದರೆ ರೈತರು ಒಂದು ಎಕರೆಗೆ 522 ರೂಪಾಯಿ ರೈತರ ವಂತಿಗೆ ಪಾವತಿಸಬೇಕು. ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ರೈತರಿಗೆ 34800 ರೂಪಾಯಿಯವರೆಗೆ ಬೆಳೆ ವಿಮೆ ಪರಿಹಾರ ಹಣ ಜಮೆಯಾಗುತ್ತದೆ.
ಇದೇ ರೀತಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಿ ವಿಮಾ ಪಾವತಿಸಿ ವಿಮಾ ಪರಿಹಾರ ಸೌಲಭ್ಯ ಪಡೆಯಬಹುದು.