PM Kisan ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ

Written by Ramlinganna

Updated on:

Farmer check PM Kisan  ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಪಟ್ಟಿಯಲ್ಲಿ ತಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳು ಈಗ ಮನೆಯಲ್ಲಿಯೇ ಕುಳಿತು ತಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿರುವುದನ್ನು ಚೆಕ್ ಮಾಡಬಹುದು.

Farmer check PM Kisan  ಪಿಎಂ ಕಿಸಾನ್ ಪಟ್ಟಿಯಲ್ಲಿ ತಮ್ಮ ಹೆಸರು ಚೆಕ್ ಮಾಡುವುದು ಹೇಗೆ?

ರೈತರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಗ್ರಾಮವಾರು ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಲಿಸ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಸಬ್ ಡಿಸ್ಟ್ರಿಕ್ಟ್ ನಲ್ಲಿ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.  ಬ್ಲಾಕ್ ನಲ್ಲಿಯೂ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು.

ಆಗ ನೀವು ಆಯ್ಕೆ ಮಾಡಿದ ಗ್ರಾಮದಲ್ಲಿ ಯಾರ್ಯಾರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿದ್ದಾರೆ ಎಂಬ ಪಟ್ಟಿ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಕೆಳಗಡೆ 1,2 3,4,5 ಹೀಗೆ ಪುಟಗಳಿರುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂಬುದನ್ನು ನೋಡಿಕೊಂಡು ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನುಚೆಕ್ ಮಾಡಿಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಯ ಗ್ರಾಮವಾರು ಪಟ್ಟಿಯಲ್ಲಿದ್ದವರಿಗೆಲ್ಲರಿಗೂ ಹಣ ಜಮೆಯಾಗುವುದೇ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ್ದವರೆಲ್ಲರಿಗೂ ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಜಮೆಯಾಗುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಈಗ ಇಕೆವೈಸಿ ಕಡ್ಡಾಯಗೊಳಿಸಿದ್ದರಿಂದ ಯಾವ ರೈತರು ಇಕೆವೈಸಿ ಮಾಡಿಸಿದ್ದಾರೋ ಅಂತಹ ರೈತರಿಗೆ ಮಾತ್ರ ಜಮೆಯಾಗುತ್ತದೆ. ಇದರೊಂದಿಗೆ ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಜಮೆಯಾಗುತ್ತದೆ. ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚಿನ ಸದಸ್ಯರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ ಈ 13ನೇ ಕಂತಿನಲ್ಲಿ ಎಲ್ಲರಿಗೂ ಹಣ ಜಮೆ ಮಾಡುವುದಿಲ್ಲ. ಆ ಕುಟುಂಬದಲ್ಲಿ ಯಾರಾದರೊಬ್ಬರು ಸರ್ಕಾರಿ ನೌಕರಿಯಲ್ಲಿದ್ದರೆ ಅವರಿಗೆ ಜಮೆಯಾಗುವುದಿಲ್ಲ. ಇದರೊಂದಿಗೆ ಆ ಕುಟುಂಬದಲ್ಲಿ ತೆರಿಗೆ ಪಾವತಿಸುತ್ತಿದ್ದರೆ ಅಂತಹ ರೈತ ಕುಟುಂಬಕ್ಕೆ  ಜಮೆಯಾಗುವುದಿಲ್ಲ.

ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ? ಮೊಬೈಲ್ ನಲ್ಲಿ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆಲ್ಲರಿಗೂ ಜಮೆಯಾಗುವುದಿಲ್ಲ. ಆದರೆ ಖಚಿತವಾಗಿ ಯಾರಿಗೆ ಹಣ ಜಮೆಯಾಗುತ್ತದೆ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ತೆರೆದುಕೊಳ್ಳುವ ಪೇಜ್ ನಲ್ಲಿ ರೈತರು ಮೊಬೈಲ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರ ಮಾಹಿತಿಯಲ್ಲಿ Eligibility  ಎದುರು Yes ಇರಲೇಬೇಕು. eKYC Done ಎದುರುಗಡೆ ಸಹ Yes ಇರಬೇಕು. ಇದಾದ ಮೇಲೆ Land Seeding ಎದುರುಗಡೆಯೂ Yes ಇರಬೇಕು. ಅಂದಾಗ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಜಮೆಯಾಗುತ್ತದೆ. ಇಲ್ಲದಿದ್ದರೆ ಜಮೆಯಾಗುವ ಸಾಧ್ಯತೆ ತುಂಬಾ ಕಡಿಮೆಯಿರುತ್ತದೆ. ಒಂದು ವೇಳೆ ಕಳೆದ ಕಂತಿನಲ್ಲಿ ನಿಮಗೆ ಹಣ ಜಮೆಯಾಗಿಲ್ಲವೆಂದರೆ ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ ನಂಬರ್ 155261 ಅಥವಾ 011-24300606 ಗೆ ಕರೆ ಮಾಡಿ ವಿಚಾರಿಸಬಹುದು.

Leave a Comment