Do this for Pm kisan fund credit ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿನ ಹಣ ಜಮೆಗೆ ಕ್ಷಣಗಣನೆ ಶುರವಾಗಿದೆ. ಇದೇ ತಿಂಗಳ ಅಂತ್ಯ ಅಥವಾ ಜನವರಿ 1 ರಂದು ಪಿಎಂ ಕಿಸಾನ್ ಹಣ ಜಮೆಯಾಗಲಿದೆ. ಆದರೆ ಈ ಸಲ ಬಹಳಷ್ಟು ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ. ಏಕೆಂದರೆ ಇನ್ಮೂ ಬಹಳಷ್ಟು ರೈತರು ಇಕೆವೈಸಿ ಮಾಡಿಸಿಲ್ಲ. ಹಾಗಾಗಿ ರೈತರು ನಾಲ್ಕೈದು ದಿನಗಳಲ್ಲಿ ಇಕೆವೈಸಿ ಮಾಡಿಸಿಕೊಳ್ಳಬೇಕು. ಹಾಗಾದರೆ ನಿಮ್ಮ ಆಧಾರ್ ಕಾರ್ಡ್ ಇಕೆವೈಸಿ ಆಗಿದೆಯೋ ಇಲ್ಲವೋ ಮೊಬೈಲ್ನಲ್ಲಿ ಚೆಕ್ ಮಾಡಬಹುದು.
Do this for Pm kisan fund credit ಮೊಬೈಲ್ ನಲ್ಲೇ ಇಕೆವೈಸಿ ಚೆಕ್ ಮಾಡುವುದು ಹೇಗೆ?
ರೈತರು ಪಿಎಂ ಕಿಸಾನ್ ಯೋಜನೆಯಡಿ ಇಕೆವೈಸಿ ಆಗಿರುವುದನ್ನು ಚೆಕ್ ಮಾಡಲು ಈ
https://exlink.pmkisan.gov.in/aadharekyc.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಇಕೆವೈಸಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕಾಗುತ್ತದೆ. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು, ಆಗ ನೀವು ಇಕೆವೈಸಿ ಮಾಡಿಸಿದ್ದರೆ ಇಕೆವೈಸಿ ಸಕ್ಸೆಸ್ ಫುಲಿ ಡನ್ ಎಂಬ ಮೆಸೇಜ್ ಕಾಣಿಸುತ್ತದೆ.
ಇದನ್ನೂ ಓದಿ : ಈ ಬೆಳೆಗೆ ವಿಮೆ ಮಾಡಿಸಿದರೆ ಹೆಕ್ಟೇರಿಗೆ 86 ಸಾವಿರ ರೂಪಾಯಿಯವರೆಗೆ ಪರಿಹಾರ ಹಣ ಜಮೆ: ಚೆಕ್ ಮಾಡಿ
ಒಂದು ವೇಳೆ ಇಕೆವೈಸಿ ಮಾಡಿಸದಿದ್ದರೆ ನಿಮ್ಮ ಹತ್ತಿರದ ಸಿಎಸ್.ಸಿ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಬೇಕು.
ರೈತರೇಕೆ ಇಕೆವೈಸಿ ಮಾಡಿಸಬೇಕು?
ಇಕೆವೈಸಿ ಮಾಡಿಸದಿದ್ದರೆ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ. ನಿಜವಾದ ಫಲಾನುಭವಿಗಳಿಗೆ ಲಾಭ ಸಿಗಲೆಂದು ಸರ್ಕಾರವು ಇಕೆವೈಸಿಯನ್ನು ಕಡ್ಡಾಯಗೊಳಿಸಿದೆ.
ಇಕೆವೈಸಿ ಮಾಡಿಸುವಂತೆ ಸಾಕಷ್ಟು ಪ್ರಚಾರ ಮಾಡಿದ್ದರೂ ರೈತರೂ ಇನ್ನೂ ಇಕೆವೈಸಿ ಮಾಡಿಸಿಲ್ಲ. ಇಕೆವೈಸಿ ಮಾಡಿಸಲು ಹಲವಾರು ಸಲ ಗಡವು ನೀಡಲಾಗಿತ್ತು. ಆದರೂ ರಾಜ್ಯದಲ್ಲಿ 16 ಲಕ್ಷಕ್ಕೂ ಹೆಚ್ಚಿನ ರೈತರು ಇಕೆವೈಸಿ ಮಾಡಿಸಿಲ್ಲ.
ಯಾವ ಯಾವ ತಿಂಗಳಲ್ಲಿ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ?
ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ 2 ಸಾವಿರ ರೂಪಾಯಿಯಂತೆ ಒಟ್ಟು ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿ ಜಮೆಯಾಗುತ್ತದೆ. ಏಪ್ರಿಲ್ ಟು ಜುಲೈ ತಿಂಗಳ ಮಧ್ಯದಲ್ಲಿ ಒಂದನೇ ಕಂತು ಜಮೆಯಾಗುತ್ತದೆ. ಆಗಸ್ಟ್ ಟು ನವೆಂಬರ್ ತಿಂಗಳ ಮಧ್ಯದಲ್ಲಿ ಎರಡನೇ ಕಂತು ಜಮೆಯಾಗಲಿದೆ. ಅದೇ ರೀತಿ ಡಿಸೆಂಬರ್ ಟು ಮಾರ್ಚ್ ತಿಂಗಳ ಮಧ್ಯದಲ್ಲಿ ಮೂರನೇ ಕಂತು ಜಮೆಯಾಗಲಿದೆ.
ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಯಾವಾಗ ಜಮೆಯಾಗಲಿದೆ?
ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿನ ಹಣ ಇದೇ ತಿಂಗಳ ಅಂತ್ಯದಲ್ಲಿ ಜಮೆಯಾಗುವ ಸಾಧ್ಯತೆಯಿದೆ. ಈ ತಿಂಗಳ ಅಂತ್ಯದಲ್ಲಿ ಜಮೆಯಾಗಲಿಲ್ಲವೆಂದರೆ ಜನವರಿ 1 ರಂದು ಜಮೆಯಾಗಲಿದೆ ಎನ್ನಲಾಗುತ್ತಿದೆ.
ಪಿಎಂ ಕಿಸಾನ್ ಹಣ 12 ಕಂತುಗಳು ಜಮೆ
ಪಿಎಂ ಕಿಸಾನ್ ಹಣ ಅಕ್ಟೋಬರ್ ತಿಂಗಳಲ್ಲಿ ಜಮೆಯಾಗಿತ್ತು. ಆಗ ಬಹಳಷ್ಟು ರೈತರಿಗೆ ಹಣಜಮೆಯಾಗಿಲ್ಲ. ಏಕೆಂದರೆ ಒಂದೇ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಜನ ಪಿಎಂ ಕಿಸಾನ್ ಹಣ ಸೌಲಭ್ಯ ಪಡೆದಿದ್ದರು. ಸರ್ಕಾರಿ ನೌಕರರು, ತೆರಿಗೆ ಪಾವತಿಸುವವರು ಹಾಗೂ ಪತಿ, ಪತ್ನಿ ಮಕ್ಕಳು ಪಿಎಂ ಕಿಸಾನ್ ಹಣ ಸೌಲಭ್ಯ ಪಡೆಯುತ್ತಿದ್ದರು. ಹಾಗಾಗಿ ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಇಕೆವೈಸಿ ಕಡ್ಡಾಯಗೊಳಿಸಲಾಗಿತ್ತು. ಇದಾದಮೇಲೆ ಬಹಳಷ್ಟು ರೈತರು ಇಕೆವೈಸಿ ಮಾಡಿಸಿದ್ದರು. ಆದರೂ ಇನ್ನೂ ಹಲವಾರು ರೈತರು ಇಕೆವೈಸಿ ಮಾಡಿಸಿಲ್ಲ. ೧೩ನೇ ಕಂತಿನ ಹಣ ಜಮೆಯಾಗಲು ಇನ್ನೂ ಕಾಲಾವಕಾಶವಿದೆ. ಈ ತಿಂಗಳ ಕೊನೆಯವರಿಗೆ ಇಕೆವೈಸಿ ಮಾಡಿಸಿ.