ರೈತರ ಖಾತೆಗೆ 7.80 ಕೋಟಿ ರೂಪಾಯಿ ಪರಿಹಾರ ಜಮೆ

Written by Ramlinganna

Updated on:

Crop compensation to be credited ಮುಂಗಾರು ಹಂಗಾಮಿನಲ್ಲಿ ಅತೀವಷ್ಟಿಯಿಂದ ಹಾಳಾದ ಬೆಳೆಗಳಿಗೆ 6ನೇ ಹಂತದಲ್ಲಿ 7.80 ಕೋಟಿ ರೂಪಾಯಿ ಜಮೆ ಮಾಡಲಾಗಿದೆ. ಹೌದು, ಪ್ರಸಕ್ತ 2022-23 ನೇ ಮುಂಗಾರು ಹಂಗಾಮಿನಲ್ಲಿ ಅತೀವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಭೂಮಿ ತಂತ್ರಾಂಶದಲ್ಲಿ ದಾಖಲಾಗಿರುವವರ  ಪೈಕಿ ಆರನೇ ಹಂತದ ರೂಪದಲ್ಲಿ ಜಿಲ್ಲೆಯ 7,996 ರೈತರಿಗೆ 7.80 ಕೋಟಿ ರೂಪಾಯಿ ಬೆಳೆ ಪರಿಹಾರ ಬಿಡುಗಡೆಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಶನಿವಾರ ಅನುಮೋದನೆ ನೀಡಿದ್ದಾರೆ.

ಕಳೆದ ಜುಲೈ –ಆಗಸ್ಟ್ ತಿಂಗಳಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ 1.70 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯನ್ನು ಜಂಟಿ ಸಮೀಕ್ಷೆ ಮೂಲಕ ಅಂದಾಜಿಸಿ ಬೆಳೆ ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಅನುಮೋದನೆ ನೀಡಿದ ಪರಿಹಾರ ಎರಡು ದಿನದಲ್ಲಿ ರೈತರ ಖಾತೆಗೆ ಹಣ ಜಮೆ ಆಗಲಿದೆ. ಇದೀಗ ಅನುಮೋದನೆ ನೀಡಿರುವುದು ಸೇರಿದಂತೆ ಒಟ್ಟಾರೆ ಆರು ಹಂತದಲ್ಲಿ 2,48,624 ರೈತರಿಗೆ 224.80 ಕೋಟಿ ರೂಪಾಯಿ ಪರಿಹಾರ ನೀಡಿದಂತಾಗಿದೆ ಎಂದು ಕಲಬುರಗಿಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಂತೆ ಇತರ ಜಿಲ್ಲೆಗಳಲ್ಲಿಯೂ ಪರಿಹಾರ ತಂತ್ರಾಂಶದಲ್ಲಿ ರೈತರ ಮಾಹಿತಿ ಅಪ್ಲೋಡ್ ಆಗುತ್ತಿದ್ದಂತೆ ಕಂತುಗಳಲ್ಲಿ ಬೆಳೆಹಾನಿ ಪರಿಹಾರ ಜಮೆ ಮಾಡಲಾಗುತ್ತಿದೆ. ರೈತರು ಮೊಬೈಲ್ ನಲ್ಲೆ ಜಮೆಯಾಗಿರುವುದನ್ನು ಚೆಕ್ ಮಾಡಬಹುದು.

Crop compensation to be credited ನಿಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆಯೇ? ಇಲ್ಲೇಚೆಕ್ ಮಾಡಿ

ಬೆಳೆ ಹಾನಿಯಾದ ರೈತರು ತಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಚೆಕ್ ಮಾಡಬಹುದು.  ಇದಕ್ಕಾಗಿ ಯಾರ ಬಳಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.  ಆಗ ಪರಿಹಾರ ಪೇಮೆಂಟ್ ರೀಪೋರ್ಟ್ ಪೇಜ್ ಓಪನ್ ಆಗುತ್ತದೆ. ಇಲ್ಲಿ ರೈತರು ಕೇವಲ ತಮ್ಮ ಆಧಾರ್ ಕಾರ್ಡ್ ನಮೂದಿಸಿ  ತಮ್ಮ ಖಾತೆಗೆ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡಬಹುದು. ತಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ? ಯಾವಾಗ ಜಮೆಯಾಗಿದೆ? ಯಾವ ಬ್ಯಾಂಕಿನಲ್ಲಿ ಜಮೆಯಾಗಿದೆ? ಎಷ್ಟು ಎಕರೆಗೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ರೈತರು ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಂಡ ನಂತರ  ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಇಯರ್ ಟೈಪ್ ನಲ್ಲಿ ಪ್ರಸಕ್ತ ವರ್ಷ ಅಂದರೆ 2022-23 ಆಯ್ಕೆ ಮಾಡಿಕೊಳ್ಳಬೇಕು. ಆಧಾರ್ ಸಂಖ್ಯೆ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಬರೆದು ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ?  ಹಾಗೂ ಯಾವಾಗ ಯಾವ ಬ್ಯಾಂಕಿನ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬ ಪೇಜ್ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ : ಹಿಂಗಾರು ಬೆಳೆಗಳ ವಿಮೆ ಮಾಡಿಸುವುದರಿಂದ ಆಗುವ ಪ್ರಯೋಜನದ ಮಾಹಿತಿ ಇಲ್ಲಿದೆ

ಇದರೊಂದಿಗೆ ರೈತರು 2021-22 ಹಾಗೂ 2020-21ನೇ ಸಾಲಿನಲ್ಲಿ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಸಹ ಚಕ್ ಮಾಡಬಹುದು.  ಹಳೆಯ ಸಾಲಿನಲ್ಲಿ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡಲು ಸೆಲೆಕ್ಟ್ ಇಯರ್ ಟೈಪ್ ನಲ್ಲಿ 2021-22  ಆಯ್ಕೆ ಮಾಡಿಕೊಳ್ಳಬೇಕು.2020-21ನೇ ಸಾಲಿನಲ್ಲಿ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡಲು ಆ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮಗೆ ಹಿಂದಿನ ಸಾಲಿನಲ್ಲಿ ಬೆಳೆಹಾನಿ ಪರಿಹಾರ ಹಣ ಜಮೆಯಾಗಿರುವುದು ಗೊತ್ತಾಗುತ್ತದೆ.

Leave a Comment