Milking competition for farmers ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ಸಂತಸದ ಸುದ್ದಿ. ತಾವು ಗುಂಡು ಎತ್ತುವ ಸ್ಪರ್ಧೆ, ಭಾರ ಎಳೆಯುವ ಸ್ಪರ್ಧೆ, ರಾಗಿಮುದ್ದೆ ತಿನ್ನುವ ಸ್ಪರ್ಧೆ ಹೆಸರು ಕೇಳಿದ್ದೀರಿ. ಇತರ ಸ್ಪರ್ಧೆಗಳಂತೆ ಹಾಲು ಕೆರೆಯುವ ಸ್ಪರ್ಧೆಯನ್ನು (Milking competition for farmers) ಸಹ ಆಯೋಜಿಸಲಾಗಿದೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಯಲಿಯೂರಿನಲ್ಲಿ ಇದೇ ತಿಂಗಳ ಮಾರ್ಚ್ 5 ರಂದು ಜಿಲ್ಲಾಮಟ್ಟದ ಹಾಲು ಕರೆಯುವ ಸ್ಪರ್ಧೆ ಆಯೋಜಿಸಲಾಗಿದೆ.
Milking competition for farmers ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಏನು ನೀಡಲಾಗುವುದು?
ಜಿಲ್ಲಾ ಪಂಚಾಯ್ತಿ, ಜಿಲ್ಲಾ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಜಂಟಿ ಸಹಯೋಗದಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದ್ದು, ಮೂರು ಹಂತಗಳಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದವರೆಗೆ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ರೈತನಿಗೂ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಲಾಗುತ್ತಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಮಾ. 4ರ ಮಧ್ಯಾಹ್ನ 12 ಗಂಟೆಯೊಳಗೆ 100 ರೂ. ಶುಲ್ಕದೊಂದಿಗೆ ಸ್ಪರ್ಧೆ ನಡೆಯುವ ಜಾಗದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ
ಸ್ಪರ್ಧೆಯಲ್ಲಿ ಭಾಗವಹಿಸುವ ರೈತ ಕಿವಿ ಓಲೆ ಅಳವಡಿಸಿದ್ದ ಹಸುವಿನೊಂದಿಗೆ ನೋಂದಣಿ ಕಡ್ಡಾಯವಾಗಿದೆ. ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕಿಸಿದ ದೃಢೀಕರಣ ಪತ್ರ ತರಬೇಕು. ದಿನಕ್ಕೆ ಕನಿಷ್ಠ 20ಲೀ. ಹಾಲು ಕರೆಯುವ ಹಸುಗಳಿಗೆ ಮಾತ್ರ ಅವಕಾಶ. ಹಸುವಿನ ಮಾಲೀಕರು, ಹಾಲು ಕರೆಯುವ ಒಬ್ಬರಿಗೆ ಮಾತ್ರ ಅವಕಾಶವಿದೆ. ಮಾ.5ರಂದು ಬೆಳಗ್ಗೆ 6.30ಕ್ಕೆ ಮತ್ತು ಸಂಜೆ 5.30ಕ್ಕೆ ತೀರ್ಪುಗಾರರ ಮುಂದೆ ಹಾಲು ಕರೆಯಬೇಕು ಹಾಲು ಕರೆಯಲು 20 ನಿಮಿಷ ಕಾಲಾವಕಾಶ ಇರುತ್ತದೆ. ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 20 ಸಾವಿರ, ತೃತೀಯ ಬಹುಮಾನ 10 ಸಾವಿರ ರೂಪಾಯಿ ಇದೆ. ಪ್ರವೇಶ ಶುಲ್ಕ 100 ರೂಪಾಯಿಯಿದೆ. ಮಾ. 5ರಂದು ಬೆಳಗ್ಗೆ 6.30ಕ್ಕೆ, ಸಂಜೆ 5.30 ರವರಗೆ ಸ್ಪರ್ಧೆ ನಡೆಯಲಿದೆ.
ಇದನ್ನೂ ಓದಿ: ಪಶುಪಾಲಕರಿಗೆ ಸಂತಸದ ಸುದ್ದಿ: ಕುರಿ ಸಾಕಾಣಿಕೆ, ಹೈನುಗಾರಿಕೆಗೆ ಮಾಹಿತಿ ನೀಡಲು ಆರಂಭವಾಗಿದೆ ಉಚಿತ ಸಹಾಯವಾಣಿ
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಾ. 6 ರಂದು ಬಹುಮಾನ ನೀಡಲಾಗುವುದು.
ನೋಂದಣಿ ಮಾಡಿಸಲು ಇಲ್ಲಿ ಸಂಪರ್ಕಿಸಿ
ಜಿಲ್ಲಾಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ದೇವನಹಳ್ಳಿ ತಾಲೂಕಿನ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ಹಸುಗಳಿಗೆ ಮೇವು, ನೀರು, ತಾತ್ಕಾಲಿಕ ಕೊಟ್ಟಿಗೆ ವ್ಯವಸ್ಥೆ, ಹಸುವಿನ ಮಾಲೀಕರು ಹಾಗೂ ಹಾಲು ಕರೆಯುವ ಸ್ಪರ್ಧೆೆೆೆೆೆ ಭಾಗವಹಿಸುವವರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಹಾಗೂ ಪಶುವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು.
ಹೆಚ್ಚಿನ ಮಾಹಿತಿಗೆ ದೇವನಹಳ್ಳಿಯ ಡಾ.ವಿಶ್ವನಾಥ್ 9900213430, ಡಾ.ನಾರಾಯಣಸ್ವಾಮಿ 9591444951, ಡಾ.ಮಂಜುನಾಥ್ 9480687978, ದೊಡ್ಡಬಳ್ಳಾಪುರದ ಡಾ.ಆಂಜಿನಪ್ಪ, 9632047920, ನೆಲಮಂಗಲದ ಡಾ.ಸಿದ್ದಪ್ಪ 9845637387, ಡಾ.ಎಲ್.ಕೆ. ಜಯರಾಮಯ್ಯ 9972743662, ಹೊಸಕೋಟೆಯ ಡಾ.ಎಂ.ಕೆ. ಮಂಜುನಾಥ 9448988649, ಡಾ.ಸರ್ವೇಶ್ 997220171 ಗೆ ಸಂಪರ್ಕಿಸಬಹುದು.