ಪಿಎಂ ಕಿಸಾನ್ ಹಣ ನಿಮಗೆ ಬಂದಿಲ್ಲವೇ? ಏಕೆ ಬಂದಿಲ್ಲಇಲ್ಲಿದೆ ಮಾಹಿತಿ

Written by Ramlinganna

Updated on:

Have not you received pm kisan amount ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಕೆಲವು ರೈತರಿಗೆ ಜಮೆಯಾದರೆ ಇನ್ನೂ ಕೆಲವು ರೈತರಿಗೆ ಜಮೆಯಾಗಿಲ್ಲವೇಕೆ? ನಿಮಗೆ ಗೊತ್ತೇ? ಇಲ್ಲಿ ಸಂಪೂರ್ಣ ಮಾಹಿತಿ.

ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಕೆಲವು ರೈತರಿಗೆ ಜಮೆಯಾದರೆ ಇನ್ನೂ ಕೆಲವು ರೈತರಿಗೆ ಜಮೆಯಾಗಿಲ್ಲ. ಇಷ್ಟು ದಿನ ಪಿಎಂ ಕಿಸಾನ್ ಯೋಜನೆಯ ಹಣ ಖಾತೆಗೆ ಜಮೆಯಾಗುತ್ತಿತ್ತು. ಆದರೆ ಏಕಾಏಕಿ ತಡೆಹಿಡಿಯಲಾಗಿದೆ. ಆದರೆ ಕಾರಣ ಇನ್ನು ಬಹಳ ರೈತರಿಗೆ ಗೊತ್ತಾಗುತ್ತಿಲ್ಲ. ಪಿಎಂ ಕಿಸಾನ್ ಸ್ಟೇಟಸ್ ನಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಪಿಎಂ ಕಿಸಾನ್ ಹಣ ಯಾವ ಕಾರಣಕ್ಕೆ ಜಮೆಯಾಗಿಲ್ಲ ಎಂಬುದು ಗೊತ್ತಾಗುತ್ತದೆ. ಹೌದು ಪಿಎಂ ಕಿಸಾನ್ ಹಣ ಏಕೆ ಜಮಯಾಗಿಲ್ಲಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು. ಇದಾದ ಮೇಲೆ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು. ಆಗ ಮತ್ತೊಂದುಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು ರಾಜ್ಯ, ಜಿಲ್ಲೆ, ಊರು ಕಾಣುತ್ತದೆ.ಆಧಾರ್ ಡೆಮೋ ಅಂಥೆಟಿಕೇಶನ್ ಸ್ಸೇಟಸ್ ಸಕ್ಸೆಸ್ ಇದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳಬೇಕು. ಇಕೆವೈಸಿ ಡನ್ ನಲ್ಲಿ ಯಸ್ ಇದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳಬೇಕು ಎಲಿಜಿಬಿಲಿಟಿ ಯಸ್ ಇರಬೇಕು. ಬ್ಯಾಂಕಿಗೆ ಫಾರ್ಮರ್ರ್ ರಿಕಾರ್ಡ್ ಆ್ಯಕ್ಸೆಪ್ಟೇಡ್  ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು.ಇದಾದ ಮೇಲೆ ಮುಖ್ಯವಾಗಿ ಗಮನಿಸಬೇಕಾಗಿರುವುದು ಏನೆಂದರೆ ಲ್ಯಾಂಡ್ ಸೀಡಿಂಗ್ ಮುಂದುಗಡೆ ಯಸ್ ಇದ್ದ ರೈತರಿಗೆ ಮಾತ್ರ 12ನೇ ಕಂತಿನ ಹಣ ಜಮೆಯಾಗಿದೆ. ಲ್ಯಾಂಡ್ ಸೀಡಿಂಗ್ ಮುಂದುಗಡೆ ನೋ ಇದ್ದ ರೈತರಿಗೆ ಜಮೆಯಾಗಿಲ್ಲ.

Have not you received pm kisan amount ಲ್ಯಾಂಡ್ ಸೀಡಿಂಗ್ ನೋ ಇದ್ದರೆ ಏನು ಮಾಡಬೇಕು?

ಲ್ಯಾಂಡ್ ಸೀಡಿಂಗ್ ಎದುರುಗಡೆ ನೋ ಇದ್ದ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗದಿದ್ದರೆ ಕೂಡಲೇ ಅವರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯಾಗಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕು, ಪಹಣಿ (ಆರ್.ಟಿಸಿ) ದಾಖಲೆಯೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು.

ಇದನ್ನೂ ಓದಿ:  ಬೆಳೆ ಹಾನಿಯಾದ ರೈತರು ಇಂದೇ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ: ಅರ್ಜಿ ಎಲ್ಲಿ ಸಲ್ಲಿಸಬೇಕು? ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್, ಜಮೀನಿನ ಪಹಣಿ ಸಲ್ಲಿಸದ ರೈತರಿಗೆ ಮುಂದಿನ ಕಂತಿನಲ್ಲಿ ಜಮೆಯಾಗದಿದ್ದ ಕಂತೂ ಸಹ ಜಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಕೂಡಲೇ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಬಹುದು.

ಪಿಎಂ ಕಿಸಾನ್ ಯೋಜನೆಯ ಕಂತುಗಳು ಯಾವ ತಿಂಗಳಲ್ಲಿ ಜಮೆಯಾಗುತ್ತದೆ?

ಪಿಎಂ ಕಿಸಾನ್ ಯೋಜನೆಯ ಕಂತುಗಳು ಪ್ರತಿ ವರ್ಷ ಮೂರು ಕಂತುಗಳಲ್ಲಿ ಜಮೆಯಾಗುತ್ತದೆ. ಅಂದರೆ ತಲಾ 2 ಸಾವಿರ ರೂಪಾಯಿಯಂತೆ ನಾಲ್ಕುತಿಂಗಳಿಗೊಮ್ಮೆ ಒಟ್ಟು 6 ಸಾವಿರ ರೂಪಾಯಿ ಜಮೆಯಾಗುತ್ತದೆ.  ಹೌದು ಏಪ್ರೀಲ್ – ಜುಲೈತಿಂಗಳ ಅವಧಿಯಲ್ಲಿ ಒಂದನೇ ಕಂತು ಜಮೆಯಾಗುತ್ತದೆ. ಅದೇ ರೀತಿ ಆಗಸ್ಟ್ –ನವೆಂಬರ್ ತಿಂಗಳ ಅವಧಿಯಲ್ಲಿ ಎರಡನೇ ಕಂತು ಜಮೆಯಾಗುತ್ತದೆ. ಡಿಸೆಂಬರ್- ಮಾರ್ಚ್ ತಿಂಗಳ ಅವಧಿಯಲ್ಲಿ 3ನೇ ಕಂತು ಜಮೆಯಾಗುತ್ತದೆ. ಒಟ್ಟು ಮೂರು ಕಂತುಗಳು ರೈತರ ಖಾತೆಗೆ ಪ್ರತಿ ವರ್ಷ 6 ಸಾವಿರ ರೂಪಾಯಿ ಜಮೆಯಾಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಹಮ ಜಮೆಯಾಗಿಲ್ಲವೇ? ಈ ನಂಬರಿಗೆ ಕರೆ ಮಾಡಿ

ಪಿಎಂ ಕಿಸಾನ್ ಯೋಜನೆಯ ಹಣ ನಿಮ್ಮ ಖಾತೆಗೆ ಮೆಯಾಗಿಲ್ಲದಿದ್ದರೆ 155261 ಅಥವಾ 01124300606 ಗೆ ಕರೆ ಮಾಡಬಹುದು.

Leave a Comment