ಇಂದು ಪಿಎಂ ಕಿಸಾನ್ 12ನೇ ಕಂತಿನ ಹಣ ರೈತರ ಖಾತೆಗೆ ಜಮೆ

Written by Ramlinganna

Updated on:

Modi to release 12th installment ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗಿಲ್ಲಿದೆ ಗುಡ್ ನ್ಯೂಸ್. ಕಳೆದ ನಾಲ್ಕು ತಿಂಗಳಿಂದ ಪಿಎಂ ಕಿಸಾನ್ ಯೋಜನೆಯ 12 ನೇ ಕಂತಿಗಾಗಿ ಕಾಯುತ್ತಿರುವ ರೈತರ ಖಾತೆಗೆ ಇಂದು ಅಕ್ಟೋಬರ್ 17 ರಂದು ಬೆಳಗ್ಗೆ ಹಣ ಜಮೆಯಾಗಲಿದೆ.

ಹೌದು,  ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 17 ರಂದು ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಖಾತೆಗೆ ಏಕಕಾಲದಲ್ಲಿ ಹಣ ಜಮೆಯಾಗಲಿದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿರುವ ಎಲ್ಲಾ ರೈತರಿಗೆ ಈ ಸಲ 12ನೇ ಕಂತಿನ ಹಣ ಜಮೆಯಾಗುವುದಿಲ್ಲ. ಪಿಎಂ ಕಿಸಾನ್ ಯೋಜನೆಯ ನಿಯಮಕ್ಕೊಳಪಡದೆ ಇರುವ ರೈತರಿಗೆ ಈ ಸಲ ಜಮೆಯಾಗುವುದಿಲ್ಲ.

ಯಾವ ರೈತರಿಗೆ ಜಮೆ ಯಾಗುತ್ತದೆ? ಯಾವ ರೈತರಿಗೆ ಜಮೆಯಾಗುವುದಿಲ್ಲ? ಎಂಬ ಮಾಹಿತಿಯನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ನಿಮಗೆ ಗೊತ್ತಿದ್ದ ಹಾಗೆ ಪಿಎಂ ಕಿಸಾನ್ ಸ್ಟೇಟಸ್ ನಲ್ಲೇ ನಿಮ್ಮ ಖಾತೆಗೆ ಹಣ ಬರುತ್ತೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.

Modi to release 12th installment ನಿಮ್ಮ ಖಾತೆಗೆ ಹಣ ಜಮೆಯಾಗುವ ಮಾಹಿತಿಯನ್ನು ಹೀಗೆ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ತುಂಬಾ ಕುತೂಹಲಕಾರಿಯಯಾಗಿದೆ. ಏಕೆಂದರೆ ಇಕವೈಸಿ ಕಡ್ಡಾಯಗೊಳಿಸಿದ್ದರಿಂದ ಯಾರಿಗೆ ಜಮೆಯಾಗುತ್ತದೆ ಯಾರಿಗೆ ಜಮೆಯಾಗುವುದಿಲ್ಲ ಎಂಬ ಕುತೂಹಲವಿದೆ.  ನಿಮ್ಮ ಖಾತೆಗೆ ಜಮೆಯಾಗುವುದೇ? ಈ ಲಿಂಕ್

https://pmkisan.gov.in/BeneficiaryStatus.aspx

ಮೇಲೆ ಕ್ಲಿಕ್ ಮಾಡಿ. ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪೇಜ್ ತೆರೆದುಕೊಳ್ಳುತ್ತದೆ. ಬೆನಿಫಿಶಿಯರಿ ಸ್ಟೇಟಸ್ ಕೆಳಗಡೆ ಮೊಬೈಲ್ ನಂಬರ್ ಹಾಗೂ ರೆಜಿಸ್ಟ್ರೇಶನ್ ನಂಬರ್ ಎರಡು ಆಯ್ಕೆಗಳಿರುತ್ತವೆ. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡು ಮೊಬೈಲ್ ನಂಬರ್ ಎಂಟರ್ ಮಾಡಬೇಕು. ಇದಾದ ಮೇಲೆ ಅದರ ಕೆಳಗಡೆ ಇಮೇಜ್ ಕೋಡ್ ಕರೆಕ್ಟ್ ಆಗಿ ನಮೂದಿಸಬೇಕು. ಒಂದು ವೇಳೆ ನಿಮಗೆ ಇಮೇಜ್ ಕೋಡ್ ಸರಿಯಾಗಿ ಕಾಣಿಸುತ್ತಿಲ್ಲವಾದರೆ ಅಲ್ಲಿ ಕಾಣುವ ಎರಡು ಆ್ಯರೋ ಮಾರ್ಕ್  ಮೇಲೆ ಕ್ಲಿಕ್ ಮಾಡಬೇಕು.

ಆಗ ಇಮೇಜ್ ಕೋಡ್ ಬದಲಾಗುತ್ತದೆ. ನಂತರ ಇಮೇಜ್ ಕೋಡ್ ನಮೂದಿಸಿ ಗೆಟ್ ಡಾಟಾ ಮೇಲೆ ಒತ್ತಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮ ಖಾತೆಗೆ ಜಮೆಯಾಗುತ್ತೋ ಇಲ್ಲವೋ ಎಂಬುದು ಸಹ ಗೊತ್ತಾಗುತ್ತದೆ. ಹೌದು, ನಿಮ್ಮಖಾತೆ ಆ್ಯಕ್ಟಿವ್ ಇರುವುದನ್ನು ಚೆಕ್ ಮಾಡಿಕೊಳ್ಳಬೇಕು. ಆ್ಯಕ್ಟಿವ್ ನಂತರ ಇಕೆವೈಸಿ ಸ್ಟೇಟಸ್ ಮುಂದುಗಡೆ ಸಕ್ಸೆಸ್ ಇದೆಯೋ ಎಂಬುದನ್ನು ಚೆಕ್ ಮಾಡಬೇಕು. ನಂತರ ಕೆಳಗಡೆ ಈಗಾಗಲೇಜಮೆಯಾಗಿರುವ ಕಂತಿನ ಮುಂದುಗಡೆ ಅಂದರೆ ಈಗಿನ ಕಂತಿನ ಸ್ಥಿತಿ ಚೆಕ್ ಮಾಡಬೇಕು.

ಇದನ್ನೂ ಓದಿ : ಕಾರ್ಮಿಕರಿಗೆ ನೀಡಲಾಗುವ ಜಾಬ್ ಕಾರ್ಡ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಅ್ಲಲಿ Rft signed ಇದ್ದರೆ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ. ಒಂದು ವೇಳೆ ಅಲ್ಲಿ ಏನೂ ಕಾಣುತ್ತಿಲ್ಲವಾದ್ದರೆ 12ನೇ ಕಂತಿನ ಹಣ ಜಮೆಯಾಗುವ ಸಾಧ್ಯತೆ ಕಡಿಮೆಯಿದೆ.

ಏಕೆಂದರೆ ನೀವು ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗಿಂತ ಹೆಚ್ಚಿನ ಸದಸ್ಯರಾಗಿರಬಹುದು. ಅಂದರೆ ನಿಮ್ಮ ಕುಟುಂಬದಲ್ಲಿನಿಮ್ಮ ಪತ್ನಿ, ಪತಿ ಅಥವಾ ತಂದೆತಾಯಿ ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಪಡೆಯುತ್ತಿರಬಹುದು. ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರಈ ಸೌಲಭ್ಯ ಸಿಗುತ್ತದೆ. ಅಥವಾ ನಿಮ್ಮ ಕುಟುಂಬದಲ್ಲಿ ಸರ್ಕಾರಿ ನೌಕರರಿರಬಹುದು. ಅಥವಾ ತೆರಿಗೆ ಪಾವತಿಸುತ್ತಿರಬಹುದು.

Leave a Comment