ಬೆಳೆ ಹಾನಿಯಾದ ರೈತರು ಇಲ್ಲಿಅರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ

Written by Ramlinganna

Updated on:

If your crop loss apply here  ಬೆಳೆ ಹಾನಿಯಾದ ರೈತರು ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ? ಅರ್ಜಿ ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು ಹಾಗೂ ರೈತರಿಗೆ ಎಕರೆಗೆ ಎಷ್ಟು ಪರಿಹಾರ ಹಣ ಜಮೆಯಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂಗಾರು ಆರಂಭದಲ್ಲಿ ರೈತರು ಬಿತ್ತನೆ ಮಾಡಿ ಸಂತಸದಲ್ಲಿದ್ದರು. ಆದರೆ ಕಳೆದೆರಡು ತಿಂಗಳಲ್ಲಿ ಸುರಿದ ಮಳೆಯಿಂದಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅತೀವೃಷ್ಟಿಯಿಂದಾಗಿ ಹಾಗೂ ಕೆಲವು ಜಿಲ್ಲೆಗಳಲ್ಲಿ ಉಂಟಾದ ಪ್ರವಾಹದಿಂದಾಗಿ ರೈತರ ಅಪಾರ ಬೆಳೆ ಹಾನಿಯಾಗಿದೆ.  ರಾಜ್ಯದಲ್ಲಿ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದರೆ ರೈತರ ಬೆಳೆ ಒಂದು ವೇಳೆ ಮಳೆ ಹಾಗೂ ಅತೀವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದ್ದರೆ ಪರಿಹಾರ ಪಡೆಯಬಹುದು.

If your crop loss apply here  ಬೆಳೆ ಹಾನಿ ಪರಿಹಾರ ಪಡೆಯಲು ಯಾವ ಯಾವ ದಾಖಲೆ ಬೇಕು?

ಮುಂಗಾರು ಬೆಳೆ ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ಹಾಳಾದ ರೈತರು ಆಧಾರ್ ಕಾರ್ಡ್ ಬೇಕಾಗುತ್ತದೆ. ಜಮೀನಿನ ಪಹಣಿ ಬೇಕು. ಬ್ಯಾಂಕ್ ಪಾಸ್ ಬುಕ್ ಬೇಕಾಗುತ್ತದೆ. ಅರ್ಜಿಯಲ್ಲಿ ಎಷ್ಟು ಎಕರೆ ಜಮೀನು ಹಾಳಾಗಿದೆ ಎಂಬುದನ್ನು ನಮೂದಿಸಬೇಕು.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಬೆಳೆ ಹಾನಿಯಾದ ರೈತರು ತಮ್ಮ ಹತ್ತಿರದ ಗ್ರಾಮ ಪಂಚಾಯತಿಯಲ್ಲಿಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಾಧಿಕಾರಿಗಳು ಪರಿಹಾರ ತಂತ್ರಾಂಶದಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಈ ಅರ್ಜಿಗನುಸಾರವಾಗಿ ರೈತರಿಗೆ ಪರಿಹಾರ ಹಣ ಜಮೆ ಮಾಡಲಾಗುತ್ತದೆ.

ಯಾವ ಬೆಳೆಗೆ ಎಷ್ಟು ಪರಿಹಾರ ಹಣ ಜಮೆ ಮಾಡಲಾಗುವುದು?

ಪ್ರಸಕ್ತ ವರ್ಷ ಅಂದರೆ 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ಹಾನಿಯಾದ ರೈತರ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರಿಗೆ 13600 ರೂಪಾಯಿ ನೀಡಲಾಗುವುದು.  ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರಿಗೆ 25000 ರೂಪಾಯಿ ಪರಿಹಾರ ನೀಡಲಾಗುವುದು. ಅದೇ ರೀತಿ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ 28 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು.

ರೈತರು ಅರ್ಜಿ ಸಲ್ಲಿಸಿದ ನಂತರ ರೈತರ ಜಮೀನಿಗೆ ಗ್ರಾಪಂ ಅಧಿಕಾರಿಗಳು ಪರಿಶೀಲನೆಗೆ ಬರಬಹುದು.ಅರ್ಜಿ ಸಲ್ಲಿಸುವಾಗ ಯಾವ ಬೆಳ ಹಾಕಲಾಗಿತ್ತು. ಅತೀವೃಷ್ಟಿಯಿಂದಾಗಿಯೋ ಅಥವಾ ಪ್ರವಾಹದಿಂದಾಗಿಯೋ ಯಾವುದರಿಂದ ಬೆಳೆ ಹಾನಿಯಾಗಿದೆ ಎಂಬುದನ್ನು ಅರ್ಜಿಯಲ್ಲಿ ನಮೂದಿಸಬೇಕು. ಎಷ್ಟು ಎಕರೆ ಜಮೀನು ಹಾಳಾಗಿದೆ ಎಂಬುದನ್ನು ಸಹ ನಮೂದಿಸುವುದು ಮಹತ್ವದ್ದಾಗಿದೆ.

ಇದನ್ನೂ ಓದಿ : PM kisan Mandhan Yojane ಯಡಿ ರೈತರಿಗೆ ಸಿಗಲಿದೆ 3 ಸಾವಿರ Pension

ರೈತರು ಬೆಳೆ ಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ಸ್ಟೇಟಸ್ ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅರ್ಜಿ ಸಲ್ಲಿಸಿದ ಸ್ಟೇಟಸ್ ಸಹ ಚೆಕ್ ಮಾಡಬಹುದಾ ಎಂಬ ಪ್ರಶ್ನೆ ಮೂಡುತ್ತಿದ್ದರೆ ನಿಮ್ಮ ಪ್ರಶ್ನೆಗೆ ಉತ್ತರ ಹೌದು ಆಗಿರುತ್ತದೆ. ಅರ್ಜಿಯ ಸ್ಟೇಟಸ್ ಅಷ್ಟೇ ಅಲ್ಲ, ಕಳೆದ ಎರಡು ವರ್ಷಗಳಲ್ಲಿ  ಎಷ್ಟು ಪರಿಹಾರ ಹಣ ಜಮೆ ಮಾಡಲಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ಅರ್ಜಿಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ರೈತರು ಗೂಗಲ್ ನಲ್ಲಿParihara payment  ಎಂದು ಟೈಪ್ ಮಾಡಬೇಕು. ಆಗ ಅಲ್ಲಿಪರಿಹಾರ ಪೇಮೆಂಟ್ ಭೂಮಿ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಬಹುದು. ಅಥವಾ ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಪೇಮೆಂಟ್ ರಿಪೋರ್ಟ್ ಪೇಜ್ ಅಂದರೆ ಪರಿಹಾರ ಹಣ ಸಂದಾಯ ವರದಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು.  ನಂತರ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ Flood ಆಯ್ಕೆ ಮಾಡಿಕೊಂಡು 2022-23 ಆಯ್ಕೆ ಮಾಡಿಕೊಂಡು ಆಧಾರ್ ಕಾರ್ಡ್ ಹಾಗೂ ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.

Leave a Comment