agriculture loan ದೇಶದ ಕೋಟ್ಯಂತರ ರೈತರಿಗೆ ಕೇಂದ್ರ ಸರ್ಕಾರ ಸಂತಸದ ಸುದ್ದಿ ನೀಡಿದೆ. ಹೌದು, 3 ಲಕ್ಷ ರೂಪಾಯಿಯವರೆಗೆ ಅಲ್ಪಾವಧಿ ಕೃಷಿ ಸಾಲದ ಮೇಲಿನ ಶೇ. 1.5 ರಷ್ಟು ಬಡ್ಡಿಮನ್ನಾ ಮಾಡುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಬುಧನ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಲದ ಮೇಲಿನ ಬಡ್ಡಿ ಮನ್ನಾಕ್ಕಾಗಿ ಬ್ಯಾಂಕುಗಳಿಗೆ 33,856 ಕೋಟಿ ರೂಪಾಯಿ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಂಪುಟ ಸಭೆಯ ನಂತರ ಕೇಂದ್ರ ಮಾಹಿತಿ ಮತ್ತು ಕ್ರೀಡಾ ವಿಭಾಗ ಸಚಿವ ಅನರಾಗ ಠಾಕೂರ್ ತಿಳಿಸಿದ್ದಾರೆ.
ಈ ಯೋಜನೆ ಅನ್ವಯ 3 ಲಕ್ಷ ರೂಪಾಯಿಯವರೆಗೆ ಅಲ್ಪಾವಧಿ ಕೃಷಿ ಸಾಲ ಪಡೆಯುವ ರೈತರು ಶೇ. 7 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಆದರೆ ಕಾಲಮಿತಿಯಲ್ಲಿ ಹಣ ಪಾವತಿಸಿದರೆ ಶೇ. 3 ರಷ್ಟು ಬಡ್ಡಿ ರಿಯಾಯಿತಿ ಸಿಗುತ್ತದೆ. ಅಂದರೆ ರೈತರಿಗೆ ಶೇ. 4 ರ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಆದರೆ ಇತ್ತೀಚಿನ ದಿನಗಳ್ಲಿ ಬಡ್ಡಿದರ ಹೆಚ್ಚಾದ ಹಿನ್ನೆಲೆಯಲ್ಲಿ ಹಣಕಾಸು ಸಂಸ್ಥೆಗಳಿಗೆ ಶೇ. 1.5 ರಷ್ಟುಬಡ್ಡಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ರೈತರ ಅಲ್ಪಾವಧಿ ಸಾಲದ ಮೇಲಿನ ಶೇ. 1.5 ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ. ದೇಶದ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಮಹತ್ವದನಿರ್ಧಾರ ಕೈಕೊಂಡಿದೆ. ಈ ಸಾಲದ ಮೇಲಿನ ಬಡ್ಡಿಯು 2022-23 ರಿಂದ 2024-2025 ರವರೆಗಿನ ಅವಧಿಗೆ ಅನ್ವಯಿಸುತ್ತದೆ ಎಂದರು.
ಇದನ್ನೂ ಓದಿ : ಮೊಬೈಲ್ ನಲ್ಲೇ ಚೆಕ್ ಮಾಡಿ ನಿಮ್ಮ ಪಿಎಂ ಕಿಸಾನ್ ಇಕೆವೈಸಿ ಸ್ಟೇಟಸ್
ಈ ಯೋಜನೆಯಡಿಯಲ್ಲಿ ಸರ್ಕಾರಿ-ಖಾಸಗಿ ಬ್ಯಾಂಕುಗಳು, ಸಣ್ಮ ಹಣಕಾಸು ಸಂಸ್ಥೆಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳು ಕಂಪ್ಟೂಟರೀಕೃತ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು 2022 ರಿಂದ 2025 ರವರೆಗೆ ರೈತರಿಗೆ ಸಾಲ ಒದಗಿಸಲಿವೆ.
ತುರ್ತು ಸಾಲ ಖಾತ್ರಿ ಯೋಜನೆಗೆ ಹೆಚ್ಚುವರಿ 50 ಸಾವಿರ ಕೋಟಿ
ತುರ್ತು ಸಾಲ ಖಾತ್ರಿ ಯೋಜನೆಗೆ ನೀಡಲಾಗಿದ್ದ ಅನುದಾನದ ಮೊತ್ತವನ್ನು 4.50 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಯವರೆಗೆ ಹೆಚ್ಚಿಸಲು ಸಂಪುಟ ನಿರ್ಧರಿಸಿದೆ. ಕೋವಿಡ್ ನಿಂದಾಗಿ ಆತಿಥ್ಯ ಕ್ಷೇತ್ರ ಅನುಭವಿಸಿರುವ ಸಂಕಷ್ಟವನ್ನು ನಿವಾರಿಸಿ, ಆ ಕ್ಷೇತ್ರಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
agriculture loan ರೈತರು ಯಾವುದಕ್ಕೆ ಕೃಷಿ ಸಾಲ ಪಡೆಯಬಹುದು?
ರೈತರು ಸಾಮಾನ್ಯವಾಗಿ ಐದಾರು ವಿಧದಲ್ಲಿ ಬ್ಯಾಂಕುಗಳಿಂದ ಕೃಷಿ ಸಾಲ ಪಡೆಯುತ್ತಾರೆ. ಉದಾಹರಣಗೆೆ ಬೆಳೆ ಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ಬೆಳೆ ಸಾಲ, ಕೃಷಿ ಅವಧಿಯ ಸಾಲ, ಕೃಷಿ ಕ್ಯಾಪಿಟಿಲ್ ಸಾಲ, ಯಾಂತ್ರೀಕರಣಕ್ಕಾಗಿ ಸಾಲ, ತೋಟಗಾರಿಕೆಗೆ ಸಾಲ, ಕೃಷಿ ಗೋಲ್ಡ್ ಲೋನ್, ಅರಣ್ಯೀಕರಣಕ್ಕೆ ಸಾಲ ಹೀಗೆ ವಿವಿಧ ರೀತಿಯಲ್ಲಿ ಬ್ಯಾಂಕುಗಳಿಗೆ ಸಾಲ ಒದಗಿಸುತ್ತವೆ.
ಸಾಮಾನ್ಯವಾಗಿ ರೈತರಿಗೆ ಕೃಷಿ ಚಟುವಟಿಕೆಗೆ ವಾರ್ಷಿಕವಾಗಿ ಶೇ. 7 ರ ಬಡ್ಡಿದರಲ್ಲಿ 3 ಲಕ್ಷ ರೂಪಾಯಿಯವರೆಗೆ ಸಾಲ ನೀಡಲಾಗುತ್ತದೆ. ನಿಗದಿತ ಅವಧಿಯಲ್ಲಿ ರೈತರು ಬಡ್ಡಿಪಾವತಿಸಿದರೆ ಶೇ. 3 ರಷ್ಟು ಸಬ್ಸಿಡಿ ಸಿಗುತ್ತದೆ.
ರೈತರು ಸಾಲ ಪಡೆಯಲು ಬೇಕಾಗುವ ದಾಖಲೆಗಳು
ರೈತರು ಯಾವುದೇ ಬ್ಯಾಂಕಿನಿಂದ ಸಾಲ ಪಡೆಯಬೇಕಾದರೆ ಆಧಾರ್ ಕಾರ್ಡ್ ಇರಬೇಕು. ಇತ್ತೀಚೆಗೆ ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಜಮೀನಿನ ಪಹಣಿ ನೀಡಲಾಗುತ್ತದೆ. ಇನ್ನೂ ಬ್ಯಾಂಕಿನಲ್ಲಿ ಕೇಳಲಾದ ಅಗತ್ಯ ದಾಖಲೆಗಳನ್ನು ರೈತರು ನೀಡಬೇಕಾಗುತ್ತದೆ.