insurance toll free number : ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ಈಗ ಮನೆಯಲ್ಲಿಯೇ ಕುಳಿತು ಬೆಳೆ ವಿಮೆ ಪರಿಹಾರ ಹಣ ಏಕೆ ಜಮೆಯಾಗಿಲ್ಲ ಎಂಬ ಮಾಹಿತಿಯನ್ನು ಪಡೆಯಬಹುದು.
ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆ ಮಾಡಿಸುತ್ತಾರೆ. ವಿಮಾ ಕಂಪನಿಯು ಪ್ರತಿ ತಾಲೂಕಿಗೆ ಒಬ್ಬ ಸಿಬ್ಬಿಂದಿಗಳನ್ನು ಸಹ ನೇಮಿಸಿರುತ್ತದೆ. ಆದರೆ ರೈತರಿಗೆ ಯಾವ ವಿಮಾ ಕಂಪನಿಗೆ ವಿಮೆ ಕಟ್ಟಲಾಗಿದೆ ಹಾಗೂ ತಮ್ಮ ತಾಲೂಕಿಗೆ ಸಂಬಂಧಿಸಿದ ವಿಮಾ ಕಂಪನಿಯ ಸಿಬ್ಬಂದಿಗಳ ಮೊಬೈಲ್ ನಂಬರ್ ಗೊತ್ತಿರುವುದಿಲ್ಲ. ವಿಮೆ ಮಾಡಿಸಿದ ರೈತರಿಗೆ ಯಾವ ವಿಮಾ ಕಂಪನಿಗೆ ಹಣ ಪಾವತಿಸಲಾಗಿದೆ ಹಾಗೂ ಆ ವಿಮ ಕಂಪನಿಗೆ ಸಂಬಂಧಿಸಿದ ವಿಮಾ ಸಿಬ್ಬಂದಿಗಳ ದೂರವಾಣಿ ಸಂಖ್ಯೆ ಇರಲೇಬೇಕು. ಏಕೆಂದರೆ ಅತೀವೃ ಷ್ಟಿ, ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟವಾದರೆ ವಿಮಾ ಕಂಪನಿಗೆ ದೂರು ನೀಡಬೇಕಾಗುತ್ತದೆ. ಹಾಗಾಗಿ ರೈತರ ಬಳಿ ವಿಮಾ ಕಂಪನಿಯ ದೂರವಾಣಿ ಸಂಖ್ಯೆ ಇರಬೇಕು.
insurance toll free number ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿ ಹಾಗೂ ಮೊಬೈಲ್ ನಂಬರ್ ಗೊತ್ತಿಲ್ಲವೇ?
ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿ ಯಾವುದು ಹಾಗೂ ತಮ್ಮ ಜಿಲ್ಲೆ ಮತ್ತು ತಾಲೂಕಿನ ವಿಮಾ ಕಂಪನಿಯ ದೂರವಾಣಿ ಸಂಖ್ಯೆ ಪಡೆಯಲು ಈ
https://www.samrakshane.karnataka.gov.in/HomePages/frmKnowYourInsCompany.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಬೆಳೆ ವಿಮೆ ಕಂಪನಿಗಳ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಆಯಾ ಜಿಲ್ಲೆಯ ವಿಮಾ ಕಂಪನಿಗಳ ಪಟ್ಟಿ ತೆರೆದುಕೊಳ್ಳುತ್ತದೆ. ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಬೆಳೆವಿಮೆ ಉಚಿತ ಸಹಾಯವಾಣಿ ದೂರವಾಣಿ ಸಂಖ್ಯೆಗೆ
1800 180 1551
ಗೆ ಕರೆ ಮಾಡಬೇಕು. ಆಗ ನಿಮಗೆ ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಮೊಬೈಲ್ ನಂಬರ್ ನೀಡುತ್ತಾರೆ. ಆ ನಂಬರಿಗೆ ಕರೆ ಮಾಡಿ ನೀವು ಬೆಳೆ ವಿಮೆ ಕುರಿತಂತೆ ಮಾಹಿತಿ ಪಡೆಯಬಹುದು.
ಕಳೆದ ಸಾಲಿನಲ್ಲಿ ನೀವು ಬೆಳೆ ವಿಮೆ ಪಾವತಿಸಿದ್ದರೆ ಹಾಗೂ ಬೆಳೆ ವಿಮೆ ಹಣ ಏಕೆ ಜಮೆಯಾಗಿಲ್ಲ, ಅದಕ್ಕೆ ಕಾರಣವೇನು? ಯಾವಾಗ ಬೆಳೆ ವಿಮೆ ಹಣ ಜಮೆಯಾಗುತ್ತದೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ರೈತರು ಮನೆಯಲ್ಲಿಯೇ ಕುಳಿತು ಪಡೆಯಬಹುದು.
ವಿಮೆ ಮಾಡಿಸಿದ ರೈತರು ಯಾವಾಗ ದೂರು ನೀಡಬೇಕು?
ಅತೀವೃಷ್ಟಿ, ಪ್ರವಾಹ, ನಿರಂತರ ಮಳೆ, ಸಿಡಿಲು ಸೇರಿದಂತೆ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾಳಾದರೆ 72 ಗಂಟೆಯೊಳಗೆ ಸಂಬಂಧಿಸಿದ ವಿಮಾ ಕಂಪನಿಗೆ ದೂರು ನೀಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ದೂರು ನೀಡಿದ ರೈತರ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡುತ್ತಾರೆ.
ಇದನ್ನೂ ಓದಿ : ಬೆಳೆ ವಿಮೆ ಪರಿಹಾರ 2022 ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ
ಬೆಳೆ ಎಷ್ಟು ಪ್ರಮಾಣದಲ್ಲಿ ಹಾಳಾಗಿದೆ ಎಂಬುದನ್ನು ಪರಿಶೀಲಿಸಿ ಬೆಳೆ ವಿಮೆ ಪರಿಹಾರಕ್ಕೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ ನಂತರ ಬರೈತರ ಖಾತೆಗೆ ಬೆಳೆ ವಿಮೆ ಜಮೆಯಾಗುತ್ತದೆ.
ಕಲಬುರಗಿ ಜಿಲ್ಲೆಯ ರೈತರ ಉಚಿತ ಸಹಾಯವಾಣಿ
ಕಲಬುರಗಿ ಜಿಲ್ಲೆಯ ರೈತರು ಬೆಳೆ ವಿಮೆ ಕುರಿತಂತೆ ಯುನಿವರ್ಸಲ್ ಸ್ಯಾಂಪೋ ಉಚಿತ ಸಹಾಯವಾಣಿ 1800 200 5142 ಗೆ ಕರೆ ಮಾಡಬೇಕು. 72 ಗಂಟೆಯೊಗಳಗೆ ರೈತರು ಈ ನಂಬಮರಿಗೆ ಕರೆ ಮಾಡಿ ಬೆಳೆ ನಷ್ಟದ ಮಾಹಿತಿ ನೀಡಬೇಕು.
ಕಲಬುರಗಿ ಜಿಲ್ಲೆಯ ತಾಲೂಕು ವಿಮಾ ಪ್ರತಿನಿಧಿಗಳ ಮೊಬೈಲ್ ನಂಬರ್
ಕಲಬುರಗಿ ಗ್ರಾಮಾಂತರ ಹಾಗೂ ಕಲಬುರಗಿ ನಗರ ರೈತರು 9731499917, 8867508750, 9538185343, 9620006812 ಗೆ ಸಂಪರ್ಕಿಸಬೇಕು. ಚಿತ್ತಾಪುರ ತಾಲೂಕಿನ ರೈತರು 9731499917, ಅಫಜಲ್ಪುರ ತಾಲೂಕಿನ ರೈತರು 9902356434 ಗೆ ಕರೆ ಮಾಡಬೇಕು. ಜೇವರ್ಗಿ ತಾಲೂಕಿನ ರೈತರು 9731499917, ಆಳಂದ ತಾಲೂಕಿನ ರೈತರು 9731499917, ಚಿಂಚೋಳಿ ತಾಲೂಕಿನ ರೈತರು 8095384057 ಹಾಗೂ ಸೇಡಂ ತಾಲೂಕಿನ ರೈತರು 7204579007 ಗೆ ಸಂಪರ್ಕಿಸಬೇಕು.