Application invited for sheep training ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದೊಂದಿಗೆ 10 ದಿನಗಳ ಕಾಲ ಉಚಿತ ಕುರಿ ಸಾಕಾಣಿಕೆ ತರಬೇತಿಗೆ ಅಱ್ಜಿ ಆಹ್ವಾನಿಸಲಾಗಿದೆ.
ಹೌದು, ಕುರಿ, ಮೇಕೆ ಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ ಉಚಿತವಾಗಿ 10 ದಿನಗಳ ಕಾಲ ಉಚಿತವಾಗಿ ಕುರಿ ಮೇಕೆ ಸಾಕಾಣಿಕೆ ಕುರಿತು ತರಬೇತಿ ನೀಡಲಾಗುವುದು. ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿಯುಳ್ಳ ಯಾದಗಿರಿ ಜಿಲ್ಲೆಯ ಗ್ರಾಮೀಣ ಯುವಕರು ಅರ್ಜಿ ಸಲ್ಲಿಸಬಹುದು. 18 ರಿಂದ 45 ವರ್ಷದೊಳಗಿನ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲಿಚ್ಚಿಸುವ ರೈತರು ಕನಿಷ್ಠ 7ನೇ ತರಗತಿ ವ್ಯಾಸಂಗ ಹೊಂದಿರಬೇಕು.
ಕನ್ನಡ ಓದಲು ಮತ್ತುಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಅರ್ಜಿಯಲ್ಲಿ ನಮೂದಿಸಬೇಕು. ಇತ್ತೀಚಿನ 4 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ತರಬೇತಿ ಸಮಯದಲ್ಲಿ ಸಂಪೂರ್ಣ ವಿವರವನ್ನು ಆರ್.ಸೆಟಿ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ತುಂಬಬೇಕು.
ಅರ್ಜಿಯಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅರ್ಜಿಯನ್ನು ಆರ್.ಸೆಟಿ ಸಂಸ್ಥೆ, ಚಿತ್ತಾಪೂರ ರಸ್ತೆ, ಆಧರ್ಶ ಶಾಲೆಯ ಹತ್ತಿರ ಯಾದಗಿರಿಯಲ್ಲಿ ಸಲ್ಲಿಸಬೇಕು. ಮೊದಲು ಬಂದ 25 ರಿಂದ 35 ಅರ್ಜಿಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಆಸಕ್ತಿಯುಳ್ಳ ಗ್ರಾಮೀಣ ಪ್ರದೇಶದ ಯುವಕರು ಬೇಗ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ : ಬೆಳೆ ವಿಮೆ ಪರಿಹಾರ 2022 ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 9448577110, 8088235941, 7829101994 ಗೆ ಸಂಪರ್ಕಿಸಬೇಕೆಂದು ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Application invited for sheep training ಉಚಿತ ಸಹಾಯವಾಣಿಗೆ ಕರೆ ಮಾಡಿ ಪಶುಪಾಲನೆ ಕುರಿತು ಮಾಹಿತಿ ಪಡೆಯಿರಿ
ರೈತರು ಮನೆಯಲ್ಲಿಯೇ ಕುಳಿತು ಪಶುಪಾಲನೆ ಕುರಿತು ಮಾಹಿತಿ ಪಡೆಯಲು ರಾಜ್ಯ ಸರ್ಕಾರವು ಪಶುಪಾಲನಾ ಸಹಾಯವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಯು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ರೈತರು ಯಾವುದೇ ಸಮಯದಲ್ಲಿ ಕರೆ ಮಾಡಬಹುದು. ರೈತರು ಪಶುಪಾಲನೆ ಅಂದರೆ ಕುರಿ, ಮೇಕೆ, ಮೊಲ, ಕುರಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಕುರಿತು ಮಾಹಿತಿ ಪಡೆಯಲು 8277 100 200 ಗೆ ಕರೆ ಮಾಡಬಹುದು. ಈ ಉಚಿತ ಸಹಾಯವಾಣಿಗೆ ಕರೆ ಮಾಡಿದರೆ ಸಾಕು, ರೈತರಿಗೆ ಪಶುಪಾಲನೆ ಕುರಿತು ಮಾಹಿತಿ ನೀಡಲಾಗುವುದು. ಕುರಿ ಮೇಕೆ ಸಾಕಾಣಿಕೆಗೆ ಯಾವ ಬ್ಯಾಂಕಿನಲ್ಲಿ ಸಹಾಯಧನದಲ್ಲಿ ಸಾಲ ನೀಡಲಾಗುವುದು ಎಂಬುದರ ಮಾಹಿತಿ ನೀಡಲಾಗುವುದು.
ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಯಾವಾಗ ಕುರಿ ಮೇಕೆ ಸಾಕಾಣಿಕೆ ತರಬೇತಿ ಹಮ್ಮಿಕೊಳ್ಳಲಾಗುವುದು ಎಂಬ ಮಾಹಿತಿ ಪಡೆದು ರೈತರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ತರಬೇತಿಗೆ ಯಾವ ಯಾವ ದಾಖಲೆ ಬೇಕು?
ಕುರಿ ಮೇಕೆ ಸಾಕಾಣಿಕೆ ಪಡೆಯಲಿಚ್ಚಿಸುವ ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಪಡಿತರ ಚೀಟಿ ಇರಬೇಕು. ಇತ್ತೀಚಿನ ಫೋಟೋ ಇರಬೇಕು. ಅರ್ಜಿಯೊಂದಿಗೆ ಈ ದಾಖಲೆಗಳ ಝರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹಾಗಾಗಿ ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಬೇಗನೆ ಅರ್ಜಿ ಸಲ್ಲಿಸಿ ಕುರಿ ಮೇಕೆ ಸಾಕಾಣಿಕೆ ಉಚಿತ ತರಬೇತಿಯ ಲಾಭ ಪಡೆದುಕೊಳ್ಳಬಹುದು. ರೈತರು ಕೃಷಿಯೊಂದಿಗೆ ಕುರಿ, ಮೇಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬು ಮಾಡಿ ಜೀವನ ಸಾಗಿಸಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರ ಪಶು ಇಲಾಖೆಗೆ ಸಂಪರ್ಕಿಸಿ ತಮ್ಮ ಜಿಲ್ಲೆಯಲ್ಲಿ ಯಾವಾಗ ತರಬೇತಿ ಆಯೋಜಿಸಲಾಗುವುದು ಎಂಬ ಮಾಹಿತಿ ಪಡೆದು ತರಬೇತಿಯಲ್ಲಿ ಭಾಗವಹಿಸಬಹುದು.