Pay insurance for these crops ಕೇಂದ್ರ ಸರ್ಕಾರವು ಜಾರಿಗೆ ತಂದ ಹಲವಾರು ಯೋಜನೆಗಳಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯೂ ಒಂದಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ತೊಗರಿ, ಹೆಸರು, ಉದ್ದು ಸೇರಿದಂತೆ ಹಲವಾರು ಬೆಳೆಗಳಿಗೆ ವಿಮೆ ಪಾವತಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.
ಹೌದು ಹವಾಮಾನ ವೈಪರೀತ್ಯದಿಂದಾಗಿ ರೈತರ ಬೆಳೆ ನಾಶವಾಗಿ ರೈತರು ಸಂಕಷ್ಟದಲ್ಲಿದ್ದಾಗ ರೈತರಿಗೆ ನೆರವಾಗಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ರೈತರು ತೋಟಗಾರಿಕೆ, ತರಕಾರಿ ಬೆಳೆ ಸೇರಿದಂತೆ ವಿವಿಧ ಬೆಳೆಗಳಿಗೆ ವಿಮೆ ಮಾಡಿಸಿ ಸೌಲಭ್ಯ ಪಡೆಯಬಹುದು. ಈಗಾಗಲೆ ಕೆಲವು ತೋಟಗಾರಿಕೆ ಬೆಳೆಗಳಿಗೆ ವಿಮೆ ಪಾವತಿಸಲು ದಿನಾಂಕ ಮುಗಿದಿದೆ. ಕೆಲವು ಬೆಳೆಗಳಿಗೆ ವಿಮೆ ಮಾಡಿಸಲು ಇನ್ನೂ ಜುಲೈ 31ರವರೆಗೆ ಅವಕಾಶವಿದೆ.
ತೊಗರಿ (ನೀರಾವರಿ), ತೊಗರಿ (ಮಳೆ ಆಶ್ರಿತ), ಹೆಸರು, ಸೋಯಾ, ಎಳ್ಳು, ಶೇಂಗಾ (ನೀರಾವರಿ), ಶೇಂಗಾ (ಮಳೆ ಆಶ್ರಿತ), ಹತ್ತಿ (ನೀರಾವರಿ), ಹತ್ತಿ (ಮಳೆ ಆಶ್ರಿತ) ಟೊಮ್ಯಾಟೋ, ಅರಿಶಿಣ, ಎಳ್ಳು, ಉದ್ದು, ಸಜ್ಜೆ, ಮುಸುಕಿನ ಜೋಳ (ಮಳೆ ಆಶ್ರಿತ), ಜೋಳ ಬೆಳೆಗೆ ವಿಮೆ ಪಾವತಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.
ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ
ಬಹುತೇಕ ಎಲ್ಲಾ ಬೆಳೆಗಳಿಗೆ ವಿಮೆ ಪಾವತಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಾದರೆ ಕೆಲವು ಬೆಳೆಗಳ ವಿಮೆ ಪಾವತಿಸುವ ದಿನಾಂಕ ಜಿಲ್ಲೆ ಜಿಲ್ಲೆಗೆ ಬೇರೆ ದಿನಾಂಕವಾಗಿರುತ್ತದೆ. ಹಾಗಾಗಿ ರೈತರು ತಮ್ಮ ಜಿಲ್ಲೆಯಲ್ಲಿ ಕೊನೆಯ ದಿನಾಂಕಯಾವುದಿದೆ ಎಂಬುದನ್ನು ಚೆಕ್ ಮಾಡಿ ವಿಮೆ ಕಟ್ಟಬಹುದು.
Pay insurance for these crops ಬೆಳೆ ವಿಮೆಯಿಂದ ರೈತರಿಗಾಗುವ ಪ್ರಯೋಜನವೇನು?
ಬೆಳೆ ವಿಮೆ ಯೋಜನೆಯನ್ನು ರೈತರ ಬೆಳೆಗಳಿಗಾಗಿಯೇ ಜಾರಿಗೆ ತರಲಾಗಿದೆ. ಅತೀವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಬಿರುಗಾಳಿ, ಗುಡುಗು ಸಿಡಿಲಿನಿಂದ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾಳಾದರೆ ರೈತರಿಗೆ ವಿಮೆ ಹಣ ಪಾವತಿಸಲಾಗುವುದು. ರೈತರು ವಿಮೆ ಕಟ್ಟಿದ ನಂತರ ವಿಮೆ ಪಾವತಿಸಿದ ರಸೀದಿ ಹೊಂದಿರಬೇಕು.
ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾಳಾದರೆ ರೈತರೇನು ಮಾಡಬೇಕು?
ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟವಾದರೆ ರೈತರು ಯಾವ ವಿಮಾ ಕಂಪನಿಗೆ ವಿಮೆ ಕಟ್ಟಿರುತ್ತಾರೋ ಅವರಿಗೆ ಕರೆ ಮಾಡಬೇಕು. ಆಗ ಸಂಬಂಧಿಸಿದ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ಬೆಳೆ ನಷ್ಟವಾಗಿರುವುದನ್ನು ಪರಿಶೀಲನೆ ಮಾಡಿ ಬೆಳೆ ಎಷ್ಟು ಪ್ರಮಾಣದ ಬೆಳೆ ಹಾಳಾಗಿದೆ ಹಾಗೂ ಯಾವ ಹಂತದಲ್ಲಿ ಬೆಳೆ ಹಾಳಾಗಿದೆ ಎಂಬುದರ ಕುರಿತು ಮೇಲಧಿಕರಿಗಳಿಗೆ ವರದಿ ಸಲ್ಲಿಸಿದ ನಂತರ ಕೆಲವು ದಿನಗಳಾದ ಮೇಲೆ ರೈತರಿಗೆ ವಿಮೆ ಹಣ ಪಾವತಿಸಲಾಗುವುದು.
ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯಿದೆ? ಚೆಕ್ ಮಾಡಬೇಕೇ?
ರೈತರು ಬೆಳೆ ವಿಮೆ ಹಣ ಕಟ್ಟಿರುತ್ತಾರೆ. ಆದರೆ ಕೆಲವು ಯಾವ ವಿಮಾ ಕಂಪನಿಗೆ ಹಣ ಪಾವತಿಸಲಾಗುದೆ ಎಂಬುದು ಗೊತ್ತಿರುವುದಿಲ್ಲ. ಇಂತಹ ರೈತರು ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ
https://www.samrakshane.karnataka.gov.in/publichome.aspx
ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಬೆಳೆ ಸಂರಕ್ಷಣೆ ವೆಬ್ ಪೇಜ್ ತೆರೆದುಕೊಳ್ಳತ್ತದೆ. ಅಲ್ಲಿ ಫಾರ್ಮರ್ಸ್ ಕೆಳಗಡೆ ಕಾಣುವ know your Insurance co. ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯಿದೆ ಎಂಬ ಪಟ್ಟಿ ತೆರೆದುಕೊಳ್ಳುತ್ತದೆ.
ನೀವು ಯಾವ ಬೆಳೆಗೆ ವಿಮೆ ಪಾವತಿಸಬೇಕೆಂದುಕೊಂಡಿದ್ದೀರೋ ಅದರ ಕೊನೆಯ ದಿನಾಂಕ ಚೆಕ್ ಮಾಡಲು View Cut off Dates ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡ ನಂತರ ಬೆಳೆಗಳ ಮುಂದೆ ವಿಮಾ ಪಾವತಿಸುವ ಕೊನೆಯ ದಿನಾಂಕದ ಮಾಹಿತಿ ಇರುತ್ತದೆ.
ಈ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಜಿಲ್ಲೆಯ ವಿಮಾ ಕಂಪನಿ ಸಿಬ್ಬಂದಿ ಮೊಬೈಲ್ ನಂಬರ್ ಪಡೆಯಿರಿ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿದ ರೈತರು ತಮ್ಮ ಬೆಳೆ ಹಾನಿಯಾದರೆ 1800 180 1551 ನಂಬರಿಗೆ ಕರೆ ಮಾಡಿ ನಿಮ್ಮ ಜಿಲ್ಲೆ ವಿಮಾ ಕಂಪನಿಯ ಸಿಬ್ಬಂದಿ ನಂಬರ್ ಪಡೆದುಕೊಳ್ಳಬಹುದು.