ಸಿಬಿಲ್ ಸ್ಕೋರ್ ಕಡಿಮೆಯಿದೆಯೆಂದು ಕೃಷಿ ಸಾಲ ಕೊಡುತ್ತಿಲ್ಲವೇ?

Written by Ramlinganna

Updated on:

CIBIL score for Agriculture loan ರೈತರು ಸಾಲ ಪಡೆಯಲು ತಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇದರಿಂದ ಸಿಬಿಲ್ ಸ್ಕೋರ್ ಎಷ್ಟಿದೆ? ಎಲ್ಲೆಲ್ಲಿ ಸಾಲ ಪಡೆದಿದ್ದೀರಿ ಎಂಬುದನ್ನು ಚೆಕ್ ಮಾಡಬಹುದು.

ಸಿಬಿಲ್ ಸ್ಕೋರ್ ಎಂದರೇನು? ಸಿಬಿಲ್ ಸ್ಕೋರ್ ಎಷ್ಟಿರಬೇಕು? ಕೃಷಿ ಸಾಲ ನೀಡಲು ಸಿಬಿಲ್ ಸ್ಕೋರ್ ಚೆಕ್ ಮಾಡುವುದನ್ನು ರೈತರೇಕೆ ವಿರೋಧಿಸುತ್ತಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರೈತರು ಕೃಷಿ ಚಟುವಟಿಕೆಗಾಗಿ ಬ್ಯಾಂಕುಗಳಲ್ಲಿ ಸಾಲ ಕೇಳಲು ಹೋದಾಗ ಸಾಲಗಾರರ ಸಿಬಿಲ್ ಸ್ಕೋರ್ ಪರೀಕ್ಷಿಸಿದ ನಂತರ ಸಾಲ ಕೊಡಬೇಕೇ ಅಥವಾ ಬೇಡವೇ ಎಂದು ಬ್ಯಾಂಕು ಅಧಿಕಾರಿಗಳು ನಿರ್ಧರಿಸುತ್ತಾರೆ. ಸಿಬಿಲ್ ಸ್ಕೋರ್ ಕಡಿಮೆಯಿರುವ ಬಹುತೇಕ ರೈತರಿಗೆ ಸಾಲ ಸಿಗುತ್ತಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀಳುತ್ತಿದೆ. ಕೃಷಿ ಚಟುವಟಿಕೆಗೆ ನೀಡುವ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಶೀಲಿಸುವುದನ್ನು ಕೈಬಿಡಬೇಕು. ಸಿಬಿಲ್ ಸ್ಕೋರ್ ಆಧಾರದಲ್ಲಿ ಬ್ಯಾಂಕುಗಳು ಸಾಲ ಕೊಡುವ ನೀತಿಯನ್ನು ರದ್ದುಪಡಿಸಿ ಕೃಷಿಕರಿಗೆ ಅನಕೂಲ ಕಲ್ಲಿಸಬೇಕೆಂದು ರೈತರ ಒತ್ತಾಯವಾಗಿದೆ.

CIBIL score for Agriculture loan ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬುದನ್ನು ಮೊಬೈಲ್ ನಲ್ಲೇ ಜೆಕ್ ಮಾಡಬಹುದು. ಅದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ ರೈತರ ಬಳಿ ಸ್ಮಾರ್ಟ್ ಫೋನಿದ್ದರೆ ಸಾಕು, ಮನೆಯಲ್ಲಿಯೇ ಕುಳಿತು ಸಿಬಿಲ್ ಸ್ಕೋರ್ ಚೆಕಮಾಡಬಹುದು. ಸಿಬಿಲ್ ಸ್ಕೋರ್ ಚೆಕ್ ಮಾಡಲು ಈ

 https://homeloans.sbi/getcibil

ಲಿಂಕ್ ಮೇಲೆ ಕ್ಲಿಕ್ ಮಾಡಿ ಸಿಬಿಲ್ ಸ್ಕೋರ್ ಚೆಕ್ ಮಾಡಬಹುದು. ಲಿಂಕ್ ಕ್ಲಿಕ್ ಮಾಡದ ಮೇಲೆ ಎಸ್.ಬಿ.ಐ ಬ್ಯಾಂಕಿನ ಉಚಿತವಾಗಿ ಸಿಬಿಲ್ ಸ್ಕೋರ್ ಚೆಕ್ ಪೇಜ್ ತೆರೆದುಕೊಳ್ಳುತ್ತದೆ.  ಇಲ್ಲಿ ರೈತರು ತಮ್ಮ ಹೆಸರು, ಲಿಂಗ, ಜನ್ಮ ದಿನಾಂಕ, ವಿಳಾಸ, ಮೊಬೈಲ್ ನಂಬರ್ ಹಾಗೂ ಈ ಮೇಲ್ ಐಡಿ ಹಾಕಿ ಟರ್ಮ್ಸ್ ಆ್ಯಂಡ್ ಕಂಡಿಷನ್ ಆಯ್ಕೆ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಡಿಎಫ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಯಾವ ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ  ಹಾಗೂ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬುದನ್ನು ಚೆಕ್ ಮಾಡಬಹುದು.

ಸಿಬಿಲ್ ಸ್ಕೋರ್ ದಿಂದಾಗಿ ರೈತರು ಯಾವ ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ ಎಂಬುದು ಕಾಣುತ್ತದೆ. ಇದು ಕೇವಲ ರಾಷ್ಟ್ರೀಕೃತ ಬ್ಯಾಂಕ್ ಅಷ್ಟೇ ಅಲ್ಲ, ಖಾಸಗಿ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೂ ಸಾಲ ತೀರಿಸಲಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.

ಏನಿದು ಸಿಬಿಲ್ ಸ್ಕೋರ್?

CIBIL (ಕ್ರೇಡಿಟ್ ಇನಫಾರ್ಮೇಷನ್ ಬ್ಯೂರೋ ಇಂಡಿಯಾ ಲಿಮಿಟೆಡ್) ಇದು ಸಾಲದ ಬಗ್ಗೆ ಮಾಹಿತಿ ನೀಡುತ್ತದೆ. ಹಿಂದೆ ಸಾಲ ಪಡೆದ ವ್ಯಕ್ತಿ ಸಾಲದ ಕಂತು ಸರಿಯಾದ ಸಮಯಕ್ಕೆ ಕಟ್ಟಿದ್ದಾರೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಸಿಬಿಲ್ ಸ್ಕೋರ್,  ಸಾಲಗಾರರ ಸಿಬಿಲ್ ಸ್ಕೋರ್ ಆಧಾರದ ಮೇಲೆ ಸಾಲ ಮುಂಜೂರು ಮಾಡಲಾಗುವುದು.

ಸಿಬಿಲ್ ಸ್ಕೋರ್ ಏಕೆ ರದ್ದುಪಡಿಸಬೇಕೆಂಬುದು ರೈತರ ಒತ್ತಾಯವಾಗಿದೆ?

ರೈತರು ಅತೀವಷ್ಟಿ, ಅನಾವೃಷ್ಟಿ, ಪ್ರವಾಹದಿಂದಾಗಿ ಬೆಳೆ ಹಾನಿ, ಬರ ಹಾನಿಗೆ ಸಿಲುಕಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಕಾರಣದಿಂದಾಗಿ ಕೆಲವು ಸಂದರ್ಭಗಳಲ್ಲಿ ನಿಯಮಗಳ ಪ್ರಕಾರ ಸಕಾಲಕ್ಕೆ ಸಾಲ ಪಾವತಿಸಲು ಸಾಧ್ಯವಾಗುವುದಿಲ್ಲ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟು ರೈತರ ಕೃಷಿ ಚಟುವಟಿಕೆಗೆ ನೀಡುವ ಸಾಲಕ್ಕೆ ಸಿಬಿಲ್ ಸ್ಕೋರ್ ಚೆಕ್ ಮಾಡುವುದನ್ನು ರದ್ದುಪಡಿಸಬೇಕೆಂಬುದು ರೈತರ ಒತ್ತಾಯವಾಗಿದೆ.

ಇದನ್ನೂ ಓದಿ : ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಸಾಲ ಪಡೆಯಲು ಸಿಬಿಲ್ ಸ್ಕೋರ್ ಎಷ್ಟಿರಬೇಕು?

ಬ್ಯಾಂಕುಗಳಿಂದ ಗ್ರಾಹಕರು ಸಾಲ ಪಡೆಯಬೇಕಾದರೆ ಸಿಬಿಲ್ ಸ್ಕೋರ್ 750 ಗಿಂತ ಹೆಚ್ಚಿರಬೇಕು.  750ಗಿಂತ ಸಿಬಿಲ್ ಸ್ಕೋರ್ ಹೆಚ್ಚಿದರೆ ಸಾಲ ಸುಲಭವಾಗಿ ಸಿಗುತ್ತದೆ.  750-900 ನಡುವಿನ ಸಿಬಿಲ್ ಸ್ಕೋರ್ ಇದ್ದರೆ ಅದನ್ನು ಅತ್ಯುತ್ತಮ ಸಿಬಿಲ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ.

ಸಾಲ ಸರಿಯಾದ ಸಮಯಕ್ಕೆ ಮರುಪಾವತಿಸಿದ್ದರೆ ಮಾತ್ರ ಸಿಬಿಲ್ ಸ್ಕೋರ್ ಹೆಚ್ಚಾಗುತ್ತದೆ.

Leave a Comment