ಪಿಎಂ ಕಿಸಾನ್ ಇಕೈವೈಸಿ ಪೂರ್ಣಗೊಳಿಸಿ

Written by Ramlinganna

Updated on:

PM Kisan ekyc date ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಯಾರು ಇಕವೈಸಿ ಮಾಡಿಸಿಲ್ಲವೋ ಅವರಿಗಿಲ್ಲಿದೆ ಸಂತಸದ ಸುದ್ದಿ. ಹೌದು,  ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಇಕೆವೈಸಿ ಗಡುವನ್ನು ಜುಲೈ 31ರವರೆಗೆ ವಿಸ್ತರಣೆ ಮಾಡಿ ಸಂತಸದ ಸುದ್ದಿ ನೀಡಿದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಈ ಮುಂಚೆ ಇಕೆವೈಸಿ ಮಾಡಿಸುವುದನ್ನು ಮೇ 31ರವರೆಗೆ ಕಡ್ಡಾಯಗೊಳಿಸಲಾಗಿತ್ತು. ಆದರೆ ಈ ಅವಧಿಯಲ್ಲಿ ಇನ್ನೂ ಸುಮಾರು ರೈತರು ಇಕೆವೈಸಿ ಮಾಡಿಸಿರಲಿಲ್ಲ.ಹಾಗಾಗಿ, ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಎಲ್ಲಾ ರೈತರಿಗೆ ಸಿಗಲೆಂಬ ಉದ್ದೇಶದಿಂದ ಇಕೆವೈಸಿ ಗಡುವನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ.

ರೈತರು ಈಗ ಇಕೆವೈಸಿ ಪ್ರಕ್ರಿಯೆನ್ನು ಮೊಬೈಲ್ ನಲ್ಲೇ ಪೂರ್ಣಗೊಳಿಸಬಹುದು. ಅಥವಾ ಹತ್ತಿರದ ಸಿಎಸ್.ಸಿ ಕೇಂದ್ರಗಳಲ್ಲಿಯೂ ಮಾಡಿಸಬಹುದು. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಈಗಾಗಲೇ ಮೇ 31 ರಂದು 11ನೇ ಕಂತಿನ ಹಣ ಜಮೆ ಮಾಡಿದೆ. ಇದರಲ್ಲಿ ಹಲವಾರು ರೈತರಿಗೆ ಪಿಎಂ ಕಿಸಾನ್ ಯೋಜನೆಯ 11 ನೇ ಕಂತಿನ ಹಣ ಜಮೆಯಾಗಿರಬಹುದು. ಇನ್ನೂ ಕೆಲವರಿಗೆ ಜಮೆಯಾಗಿರಲಿಕ್ಕಿಲ್ಲ, ಇಕೆವೈಸಿ ಮಾಡಿಸದೆ ಇರುವ ರೈತರಿಗೂ ಜಮೆಯಾಗಿರಬಹುದು. ಹಾಗಂತ ಇಕೆವೈಸಿ ಮಾಡಿಸದೆ ಜಮೆಯಾಗಿದೆ. ಮುಂದೆ ಮತ್ಯಾಕೆ ಇಕೆವೈಸಿ ಮಾಡಸಬೇಕೆಂದುಕೊಳ್ಳಬೇಡಿ. ಇಕೆವೈಸಿ ಮಾಡಿಸದೆ ಇದ್ದರೆ ಮುಂದಿನ ಕಂತು ತಡೆಹಿಡಿಯುವ ಸಾಧ್ಯತೆ ಇರುತ್ತದೆ.

PM Kisan ekyc date ಮೊಬೈಲ್ ನಲ್ಲೇ ಇಕೆವೈಸಿ ಮಾಡಿಸುವುದು ಹೇಗೆ?

ರೈತರು ಓಟಿಪಿ ಆಧಾರಿತ ಇಕೆವೈಸಿ ಪ್ರಕ್ರಿಯೆಯನ್ನು ಮೊಬೈಲ್ ನಲ್ಲೇ ಪೂರ್ಣಗೊಳಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದ ಮಾಹಿತಿ.

ರೈತರು ಈ ಲಿಂಕ್

https://exlink.pmkisan.gov.in/aadharekyc.aspx

ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸಮ್ಮಾನ ನಿಧಿಯಡಿ ಓಟಿಪಿ ಬೇಸಡ್ ಇಕೆವೈಸಿ ಪೇಜ್ ಓಪನ್ ಆಗುತ್ತದೆ. ಇಲ್ಲಿ ರೈತರು ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಎಲ್ಲಾ ವಿವರ ಪೂರ್ಣಗೊಂಡನಂತರ ಇಕೆವೈಸಿ ಕಾರ್ಯವು ಯಶಸ್ವಿಯಾಗಿದೆ (ekyc successfully) ಸಂದೇಶ ಬರುತ್ತದೆ. ಒಂದು ವೇಳೆ ಮೊಬೈಲ್ ನಲ್ಲಿ ಇಕೆವೈಸಿ ಮಾಡಿಸುವುದು ಸಮಸ್ಯೆಯಾಗುತ್ತಿದ್ದರೆ ನಿಮ್ಮ ಹತ್ತಿರದ ಸಿಎಸ್.ಸಿ ಕೇಂದ್ರದಲ್ಲಿ ಬಯೋಮೆಟ್ರಿಕ್ ಇಕೆವೈಸಿ ಮಾಡಿಸಿಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿರುವುದೇಕೆ?

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಒಂದೇ ಕುಟುಂಬದ ಪತಿ ಪತ್ನಿ ಹಾಗೂ ಮಕ್ಕಳೂ ಸಹ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ರೈತರು ತಮ್ಮ ಜಮೀನು ಮಾರಾಟ ಮಾಡಿದ್ದರೂ ಅದೇ ಸರ್ವೆ ನಂಬರಿನಿಂದ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಸರ್ಕಾರಿ ನೌಕರರು ಇದರ ಸೌಲಭ್ಯ ಪಡೆಯುತ್ತಿರುವುದನ್ನು ತಡೆಯುವುದಕ್ಕಾಗಿ ಇಕೆವೈಸಿ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ರೈತರೇಕೆ ಬೆಳೆವಿಮೆ ಮಾಡಿಸಬೇಕು? ವಿಮೆ ಮಾಡಿಸುವುದರಿಂದಾಗುವ ಉಪಯೋಗ? ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು? ಇಲ್ಲಿದೆ ಮಾಹಿತಿ

ಇಕೆವೈಸಿ ಮಾಡಿಸಿದ ನಂತರ ನಿಜವಾದ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಏಕೆಂದರೆ ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಪಡೆಯಲು ಕೆಲವು ಅರ್ಹತೆಗಳನ್ನು ನೀಡಲಾಗಿದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಅರ್ಹತೆ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗುವ  ರೈತರಿಗೆ 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಇರಬೇಕು. ಸಣ್ಣ ಮತ್ತು ಅಥೀ ಸಣ್ಣ ರೈತರಾಗಿರಬೇಕು. ರೈತರು ಸರ್ಕಾರಿ ನೌಕರರಾಗಿರಬಾರದು ಸೇರಿದಂತೆ ಇನ್ನೂ ಹಲವಾರು ನಿಯಮಗಳಿವೆ.

ಪಿಎಂ ಕಿಸಾನ್ ಯೋಜನೆಯ ಫಲನುಭವಿಯಾಗಬೇಕಾದರೆ ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಹಾಗಾಗಿ ರೈತರು ತಡಮಾಡದೆ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.

Leave a Comment