Cheapest Tractors ಕಡಿಮೆ ದರದಲ್ಲಿ ಸಿಗುವ ರೈತೋಪಯೋಗಿ ಟ್ರ್ಯಾಕ್ಟರ್ ಗಳ ಪಟ್ಟಿ ಇಲ್ಲಿದೆ. ಭಾರತದಲ್ಲಿ ಕಡಿಮೆ ದರದಲ್ಲಿ ಸಿಗುವ ಈ ಟ್ರ್ಯಾಕ್ಟರ್ ಗಳನ್ನು ರೈತರು ಹೆಚ್ಚು ಖರೀದಿಸುತ್ತಿದ್ದಾರೆ.
ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮಿನಿ ಟ್ರ್ಯಾಕ್ಟರ್ ಹೆಚ್ಚು ಉಪಯುಕ್ತವಾಗಿದೆ. ಇತ್ತೀಚೆಗೆ ಕೃಷಿ ಚಟುವಟಿಕೆಯಲ್ಲಿ ಎತ್ತುಗಳ ಬಳಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಎತ್ತುಗಳ ಬದಲಾಗಿ ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗುತ್ತಿದೆ. ಕೃಷಿ ಯಂತ್ರೋಪಕರಣಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ವಿಶೇಷವಾಗಿ ಸಣ್ಣ ಟ್ರ್ಯಾಕ್ಟರ್ ಗಳ ಬಳಕೆ ಹೆಚ್ಚಾಗುತ್ತಿದೆ.
ಕೃಷಿ ಚಟುವಟಿಕೆಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗುತ್ತಿದರಿಂದ ರೈತರಿಗೆ ಸಹಾಯವಾಗಲೆಂದು ಸಬ್ಸಿಡಿ ನೀಡಲಾಗುವುದು. ನೇಗಿಲು, ಒಕ್ಕಣೆ ಯಂತ್ರ, ಕಟಾವು ಬಿತ್ತನೆ ಯಂತ್ರಗಳು, ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಯಂತ್ರೋಪಕರಣಗಳ ಖರೀದಿಗೆ ಕೃಷಿ ಇಲಾಖೆಯ ಮೂಲಕ ಸಹಾಯಧನ ನೀಡಲಾಗುವುದು. ಯಂತ್ರದ ಮಾರುಕಟ್ಟೆ ಬೆಲೆಯ ಶೇ. 50 ರಷ್ಟು ಸಹಾಯಧನ ರೂಪದಲ್ಲಿ ಉಳಿದ ಹಣವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲವಾಗಿ ರೈತರಿಗೆ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ಸಿಗುತ್ತದೆ.
Cheapest Tractors ಕೃಷಿಯಲ್ಲಿ ಹೆಚ್ಚು ಬಳಕೆಯಾಗುವ ಉತ್ತಮ ಟ್ರ್ಯಾಕ್ಟರ್ ಗಳ ಪಟ್ಟಿ
ಅತೀ ಕಡಿಮೆ ಬೆಲೆಯಲ್ಲಿ ಹೆಚ್ಚು ಮಾರಾಟವಾಗುವ ಟ್ರ್ಯಾಕ್ಟರ್ ಗಳಲ್ಲಿ ಮಹಿಂದ್ರಾ ಯುವರಾಜ 215 ಎನ್ಎಕ್ಸಟಿ ಮೊದಲ ಸ್ಥಾನದಲ್ಲಿದೆ. ಇದರ ಬೆಲೆ 2.50 ಲಕ್ಷ ದಿಂದ ಆರಂಭವಾಗುತ್ತದೆ. ಇಂದು ಸಣ್ಣ ಮತ್ತು ಅತೀ ಸಣ್ಣ ರೈತರು ಈ ಟ್ರ್ಯಾಕ್ಟರ್ ಖರೀದಿಸಲು ಹೆಚ್ಚು ಆಸಕ್ತಿವಹಿಸುತ್ತಿದ್ದಾರೆ.
Cheapest Tractors ಭಾರತದಲ್ಲಿ ಕೃಷಿಗೆ ಅತ್ಯುತ್ತಮ ಟ್ರ್ಯಾಕ್ಟರ್ ಗಳ ಪಟ್ಟಿ ಇಲ್ಲಿದೆ
- Mahindra Yuvaraj 215 NXT Starting from 2.50 lakhs
- Sonalika DI 35 RX starting Price 5 lakhs
- Preet 3549 Starting From 5 Lakhs
- Kubota NeoStar B2741 Starting From 5.45 Lakhs
- John Deere 5105 Starting From 5.65 lakhs
ಜಗತ್ತಿನಲ್ಲಿ ನಂಬರ್ ಒನ್ ಟ್ರ್ಯಾಕ್ಟರ್ ಕಂಪನಿ ಮಹಿಂದ್ರಾ ಆ್ಯಂಡ್ ಮಹಿಂದ್ರಾ ಆಗಿದೆ. ಈ ಕಂಪನಿಯ ಟ್ರ್ಯಾಕ್ಟರ್ ಗಳು ಜಗತ್ತಿನಲ್ಲಿ ಅತೀ ಹೆಚ್ಚು ಮಾರಾಟವಾಗುತ್ತವೆ. ಮಹಿಂದ್ರಾ ಆ್ಯಂಡ್ ಮಹಿಂದ್ರಾ ಕಂಪನಿಯು 1964 ರಲ್ಲಿ ಆರಂಭವಾಗಿದೆ.
ಭಾರತದ ನಂಬರ್ 1 ಟ್ರ್ಯಾಕ್ಟರ್ ಯಾವುದು?
ಭಾರತದ ನಂಬರ್ ಒನ್ ಟ್ರ್ಯಾಕ್ಟರ್ ಮಹಿಂದ್ರಾ ಕಂಪನಿಯಾಗಿದೆ. ಇದು ಅತೀ ಹೆಚ್ಚು ಮಾರಾಟವಾಗುವ ಟ್ರ್ಯಾಕ್ಟರ್ ಆಗಿದೆ. 2019-20ನೇ ಸಾಲಿನಲ್ಲಿ ಅತೀ ಹೆಚ್ಚು ಟ್ರ್ಯಾಕ್ಟರ್ ಮಾರಾಟವಾದ ಕಂಪನಿಯ ಮಹೀಂದ್ರಾಆ್ಯಂಡ್ ಮಹಿಂದ್ರಾ ಕಂಪನಿಯದ್ದಾಗಿದೆ.
ಹೆಚ್ಚು ಮೈಲೇಜ್ ಕೊಡುವ ಟ್ರ್ಯಾಕ್ಟರ್ ಗಳ ಪಟ್ಟಿ
2022ರ ಸಾಲಿನಲ್ಲಿ ಹೆಚ್ಚು ಮೈಲೇಜ್ ಕೊಡುವ ಟ್ರ್ಯಾಕ್ಟರ್ ಗಳಲ್ಲಿ ನ್ಯೂ ಹೋಲೆಂಡ್ 3230 ಮೊದಲ ಸ್ಥಾನದಲ್ಲಿದೆ. ಸೋನಾಲಿಕಾ ಡಿಐ 745111 ಸಿಕಿಂದರ್, ಸ್ವರಾಜ್ 735 ಎಫ್ಇ, ಮಹೀಂದ್ರಾ 275 ಡಿಐ, ಜಾನ್ ಡೀರ್್ 5050 ಡಿ, ಫಾರ್ಮಟ್ರ್ಯಾಕ್ 45 ಸ್ಮಾರ್ಟ್, ಐಚರ್ 380, ಮಹೀಂದ್ರಾ 475 ಡಿಐ ಕ್ರಮವಾಗಿ ನಂತರದ ಸ್ಥಾನದಲ್ಲಿದೆ.
ಇದನ್ನೂ ಓದಿ Bara parihara bidugade: ಈ ರೈತರಿಗೆ 8.90 ಕೋಟಿ ಬರ ಪರಿಹಾರ ಜಮೆ
ಮಹೀಂದ್ರಾ ಯುವರಾಜ್ 215 ಎನ್ಎಕ್ಸಟಿ ಟ್ರ್ಯಾಕ್ಟರ್ ಅತೀ ಕಡಿಮೆ ಬೆಲೆಗೆ ಮಾರಾಟವಾಗುವ ಟ್ರ್ಯಾಕ್ಟರ್ ಆಗಿದೆ. ಇದು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಉಪಯುಕ್ತವಾಗಿದೆ. ಈ ಟ್ರ್ಯಾಕ್ಟರ್ ಹತ್ತಿ, ಮೆಕ್ಕೆಜೋಳ, ಕಬ್ಬು, ದ್ರಾಕ್ಷಿ, ಮಾವು, ಕಿತ್ತಳೆ ಸೇರಿದಂತೆ ಇನ್ನಿತರ ತೋಟಗಾರಿಕೆ ಮಾಡುವ ರೈತರಿಗೆ ಹೆಚ್ಚು ಉಪಯುಕ್ತವಾಗಿದೆ. ಇದು ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ.
ಈ ಟ್ರ್ಯಾಕ್ಟರ್ ಗುಣಲಕ್ಷಣಗಳು
ಯುವರಾಜ 215 ಎನ್.ಎಕ್ಸ್.ಟಿ ಟ್ರ್ಯಾಕ್ಟರ್ 15 ಹೆಚ್.ಪಿ ಸಾಮರ್ಥ್ಯವುಳ್ಳದ್ದಾಗಿದೆ. 1 ಸಿಲಿಂಡರ್ ಮತ್ತು 2500 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದೆ. ಈ ಟ್ರ್ಯಾಕ್ಟರ್ ನಲ್ಲಿ 19 ಲೀಟರ್ ವರೆಗೆ ಇಂಧನ ತುಂಬಬಹುದು. ಸುಮಾರು780 ಕೆಜಿ ಹೊಂದಿದೆ. ಆರು ಗೇರ್ ಗಳನ್ನು ಹೊಂದಿದ್ದು, ಇದು ಸಿಂಗಲ್ ಆರ್ಮ್ ಡ್ರಾಪ್ ಮೆಕ್ಯಾನಿಕಲ್ ಸ್ಟೀರಿಂಗ್ ಹೊಂದಿದೆ. ಈ ಟ್ರ್ಯಾಕ್ಟರನ್ನು ಬೇಸಾಯ, ಬಿತ್ತನೆ, ಒಕ್ಕಣೆ ಹಾಗೂ ಸಿಂಪಡಣೆಯಲ್ಲಿ ಬಳಸಲಾಗುತ್ತದೆ.