Farmer get 50 percentage subsidy ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಅಡಿಯಲ್ಲಿ ರೈತರಿಗೆ ವಿವಿಧ ಘಟಕಗಳ ಸ್ಥಾಪನೆಗೆ ಶೇ. 50 ರಷ್ಟು ಸಹಾಯಧನ ಸಿಗಲಿದೆ. ಆದರೆ ಬಹುತೇಕ ರೈತರಿಗೆ ಈ ಯೋಜನೆಯಡಿ ಸಿಗುವ ಸೌಲಭ್ಯಗಳು ಮಾಹಿತಿಯ ಕೊರತೆಯಿಂದಾಗಿ ರೈತರಿಗೆ ಸಿಗುವುದಿಲ್ಲ. ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶದ ಸಮಗ್ರ ಕೃಷಿ ಪದ್ಧತಿಯ ಮಾದರಿಯನ್ನು ಅಳವಡಿಸಲು ಘಟಕವಾರು ಸಹಾಯಧನ ನೀಡಲಾಗುತ್ತದೆ.
Farmer get 50 percentage subsidy ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯ ಉದ್ದೇಶವೇನು?
ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿಗೆ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ ಹಾಗೂ ಪಶು ಸಂಗೋಪನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಪದ್ಧತಿ ಮೂಲಕ ರೈತನ ಆದಾಯ ಹೆಚ್ಚಳ ಮಾಡುವುದಾಗಿದೆ. ಉತ್ತಮ ಬೇಸಾಯ ಪದ್ಧತಿಗಳಾದ ನೂತನ ತಾಂತ್ರಿಕತೆಗಳು, ಅಧಿಕ ಇಳುವರಿ ಕೊಡುವ ತಳಿಗಳನ್ನು ಸಂಯೋಜನೆಯಲ್ಲಿ ಬಳಸುವುದಾಗಿದೆ. ರೈತರ ಆದಾಯ ಹೆಚ್ಚಿಸಲು ಕೃಷಿ ಜೊತೆಗೆ ಇತರೆ ಆದಾಯ ಬರುವ ಉದ್ದಿಮೆಗಳನ್ನು ಅಳವಡಿಸಲು ಪ್ರೇರೇಪಿಸುವುದಾಗಿದೆ.
ಯಾವ ಘಟಕಕ್ಕೆ ಎಷ್ಟು ಸಬ್ಸಿಡಿ ನೀಡಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಳೆಯಾಶ್ರಿತ ಪ್ರದೇಶದಕ್ಕೆ (ಎನ್.ಎಮ್.ಎಸ್.ಎ-ಆರ್.ಎ.ಡಿ ಮಾರ್ಗಸೂಚಿಯನ್ವಯ) ಘಟಕ ವೆಚ್ಚ ಹಾಗೂ ಸಬ್ಸಿಡಿ
ನೀರು ಸಂರಕ್ಷಣೆ ಚಿಕ್ಕ ಹೊಂಡಗಳ ನಿರ್ಮಾಣಕ್ಕೆ (ಲೈನಿಂಗ್ ಸಹಿತ/ಲೈನಿಂಗ್ ರಹಿತ) 75000 ರೂಪಾಯಿ ಘಟಕ ವೆಚ್ಚಕ್ಕೆ ಶೇ. 50 ರಷ್ಟು ಅಂದರೆ 37500 ರೂಪಾಯಿ ಸಹಾಯಧನ ನೀಡಲಾಗುವುದು. ಬದುಗಳ ನಿರ್ಮಾಣ, ಟ್ರೆಂಚ್ ಗಳ ನಿರ್ಮಾಣಕ್ಕೆ 4000 ರೂಪಾಯಿ ವೆಚ್ಚದಲ್ಲಿ 2000 ರೂಪಾಯಿ ಸಹಾಯಧನ ನೀಡಲಾಗುವುದು.
ಸ್ಥಳೀಯವಾಗಿ ಬೇಡಿಕೆಗನುಗುಣವಾಗಿ ಎರೆಹುಳು ಗೊಬ್ಬರ, ಅಜೋಲ್ಲಾ, ಮರ ಆಧಾರಿತ ಕೃಷಿ ಕೈತೋಟ ಇತರೆ ಶೇ. 25 ರಷ್ಟು ರಿಯಾಯಿತಿ ಸಿಗಲಿದೆ. ಎರೆಹುಳು ಗೊಬ್ಬರ ಘಟಕಕ್ಕೆ 17500 ರೂಪಾಯಿಯಾದರೆಅದರಲ್ಲಿ 8500 ರೂಪಾಯಿಸಬ್ಸಿಡಿ ನೀಡಲಾಗುವುದು. ಅಜೊಲ್ಲಾ ತಯಾರಿಕೆಗೆ 1000 ರೂಪಾಯಿ ಸಹಾಯಧನ ನೀಡಲಾಗುವುದು.
ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ
ಅದೇ ರೀತಿ ಜೇನು ಕೃಷಿಗೆ ಗರಿಷ್ಟ 800/ ಪ್ರತಿ ಜೇನು ಕುಟುಂಬಕ್ಕೆ4000 ರೂಪಾಯಿಗೆ 1600 ಸಹಾಯಧನ ನೀಡಲಾಗುವುದು. ಮಳೆಯಾಶ್ರಿತ ಪ್ರದೇಶದ ಸಮಗ್ರ ಕೃಷಿ ಪದ್ಧತಿಗೆ ಒಟ್ಟು ಎಲ್ಲಾ ಘಟಕಗಳ ಸಹಾಯಧನ 125000 ಮೀರದಂತೆ ಭರಿಸಲಾಗುವುದು. MGNREGS ಅಡಿಯಲ್ಲಿ ಕಾರ್ಮಿಕರ ವೆಚ್ಚ ಭರಿಸಿ ಈ ಯೋಜನೆಯಡಿ ಸಾಮಗ್ರಿ ವೆಚ್ಚ ಬಳಸಲಾಗವುದು.
ಅದೇ ರೀತಿ ನೀರಾವರಿ ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಘಟಕ ನಿರ್ಮಾಣಕ್ಕೆಸಹಾಯಧನ ನೀಡಲಾಗುವುದು.
ನೀರಾವರಿ ಪ್ರದೇಶಕ್ಕೆ ಸಿಗುವ ಘಟಕ ವೆಚ್ಚ ಹಾಗೂ ಸಬ್ಸಿಡಿ
ಚಿಕ್ಕ ಹೊಂಡಗಳಿಗೆ (ಲೈನಿಂಗ್ ರಹಿತ) ಶೇ. 50 ರಷ್ಟು ಸಬ್ಸಿಡಿ ನೀಡಲಾಗುವುದು. ಘಟಕ ವೆಚ್ಚ 52500ಕ್ಕೆ 26250 ರೂಪಾಯಿ ಸಹಾಯಧನ ನೀಡಲಾಗುವುದು. ಅದೇ ರೀತಿ ಬದು ನಿರ್ಮಾಣ ಹೊದಿಕೆ/ಲೇಸರ್ ಲ್ಯಾಂಡ್ ಲೇವಲಿಂಗ್ ಗೆ ಶೇ. 50 ರಷ್ಟು ಸಹಾಯಧನ ನೀಡಲಾಗುವುದು. ಜಾನುವಾರು ಆಧಾರತ ಮೇವಿನ ಬೆಳೆ, ಮಿಶ್ರ ಬೆಳೆಗೆ ಶೇ. 50 ರಷ್ಟು ಸಹಾಯಧನ ಗರಿಷ್ಠ 40000 ಸಹಾಯಧನ ನೀಡಲಾಗುವುದು. ನೀಡಲಾಗುವುದು.ಎರೆಹುಳು ಘಟಕ ವೆಚ್ಚ 17500ಗೆ 8500 ರೂಪಾಯಿ ಸಹಾಯಧನ ನೀಡಲಾಗುವುದು.
MGNREGS ಅಡಿಯಲ್ಲಿ ಕಾರ್ಮಿಕರ ವೆಚ್ಚ ಭರಿಸಿ ಈ ಯೋಜನೆಯಡಿ ಸಾಮಗ್ರಿ ವೆಚ್ಚ ಬಳಸಲಾಗವುದು.
ಫಲಾನುಭವಿಗಳನ್ನು ನಿಯಮಾನುಸಾರ ಪರಿಶಿಷ್ಟ ಜಾತಿಗೆ ಶೇ. 17,1, ಪರಿಶಿಷ್ಟ ಪಂಗಡಕ್ಕೆ ಶೇ. 6.9 ರಂತೆ ಆಯ್ಕೆ ಮಾಡಲಾಗುವುದು. ಮಹಿಳೆಯರಿಗೆ ಶೇ. 33, ರಷ್ಟು, ಅಲ್ಪಸಂಖ್ಯಾತರಿಗೆ ಶೇ. 15 ರಷ್ಟು ಆದ್ಯತೆ ನೀಡಲಾಗುವುದು.
ಸೌಲಭ್ಯ ಪಡೆಯಲು ಯಾವ ಯಾವ ದಾಖಲೆ ಬೇಕು?
ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ರೈತರು ಸ್ವಂತ ಜಮೀನು ಹೊಂದಿರಬೇಕು. ಪಹಣಿ ಪತ್ರ ಹೊಂದಿರಬೇಕು. ಆಧಾರ್ ಕಾರ್ಡ್ ಇರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಬ್ಯಾಂಕ್ ಪಾಸ್ಬುಕ್ ಹೊಂದಿರಬೇಕು. ಇನ್ನಿತರ ದಾಖಲೆಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ ಸಲ್ಲಿಸಬೇಕು.
ರೈತರು ಎಲ್ಲಿ ಸಂಪರ್ಕಿಸಬೇಕು?
ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು, ಅರ್ಜಿಯ ಮಾದರಿ ಸೇರಿದಂತೆ ಇನ್ನಿತರ ಮಾಹಿತಿ ಕುರಿತು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬೇಕು.
ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಇನ್ನೂ ಹೆಚ್ಚಿನ ಮಾಹಿತಿ ನೋಡಬೇಕಾದರೆ ಈ ಕೆಳಗಿನ ಲಿಂಕ್
https://raitamitra.karnataka.gov.in/storage/pdf-files/RKVYIFSguidelines2021-22.pdf
ಮೇಲೆ ಕ್ಲಿಕ್ ಮಾಡಬಹುದು.