Rooftop solar power subsidy ಕೇಂದ್ರ ಸರ್ಕಾರದ ಸೌರಗೃಹಯೋಜನೆಯಡಿ ಮನೆ ಮೇಲ್ಛಾವಣಿ ಮೇಲೆ ಸೌರಶಕ್ತಿ ಫಲಕ ಅಳವಡಿಸಲು ಶೇ. 40 ರಷ್ಟು ಸಬ್ಸಿಡಿ ಸಿಗಲಿದೆ. ಹೌದು ವಿದ್ಯುತ್ ಬಳಕೆಯ ಯೂನಿಟ್ ದರ ಹೆಚ್ಚಾಗಿ ಬಳಕೆದಾರರಿಗೆ ತೊಂದರೆಯಾಗುತ್ತಿದ್ದರಿಂದ ಈ ಯೋಜನೆಯನ್ನು ಆರಂಭಿಸಿದೆ.
Rooftop solar power subsidy ಮನೆಯ ಮೇಲ್ಛಾವಣಿ ಮೇಲೆ ಸೋಲಾರ್ ಪ್ಯಾನಲ್ ಸಬ್ಸಿಡಿ (solar panel subsidy)
ಮನೆಯ ಮೇಲ್ಛಾವಣಿ ಮೇಲೆ ಸೌಲಾರ ಘಟಕ ನಿರ್ಮಿಸಿದರೆ ಸಾಕು 20 ವರ್ಷಗಳವರಿಗೆ ವಿದ್ಯುತ್ ಪಡೆಯಬಹುದು.ಮನೆಯ ಟೆರೇಸ್ ಮೇಲೆ ಸೋಲಾರ್ ಅಳವಡಿಸಿಸುವ ಮೂಲಕ ಶೇ. 30 ರಿಂದ 50 ರಷ್ಟು ವಿದ್ಯುತ್ ವೆಚ್ಚ ಉಳಿಸಬಹುದು. ಸೌರಶಕ್ತಿ ಫಲಕ ಅಳವಡಿಸಲು ಹೆಚ್ಚಿನ ಸ್ಥಳಾವಕಾಶ ಬೇಕಿಲ್ಲ. ಮನೆಯ ಮೇಲ್ಛಾವಣಿಯ ಖಾಲಿ ಜಾಗಕ್ಕೆ ತಕ್ಕಂತೆ ಸೌರಶಕ್ತಿ ಫಲಕಗಳನ್ನು ಕೂಡಿಸಬಹುದು.
ಮನೆಯ ಮೇಲ್ಛಾವಣಿ ಸೋಲಾರ್ ಪ್ಯಾನಲ್ ಬೆಲೆ (Solar panel for home price)
ಒಂದು ವಸತಿ ಗೃಹ ಅಥವಾ ವಸತಿ ಸಂಕೀರ್ಣದ ಮೇಲೆ ಒಂದು ಕಿಲೋ ವ್ಯಾಟ್ ನಿಂದ 500 ಕಿಲೋ ವ್ಯಾಟ್ ವರೆಗೂ ಸೌರ ವಿದ್ಯುತ್ ಉತ್ಪಾದನೆ ಮಾಡಬಹುದು.ಒಂದು ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 50 ರಿಂದ 60 ಸಾವಿರ ರೂಪಾಯಿಯವರೆಗೆ ಇರುತ್ತದೆ. ಇದಕ್ಕೆ 20 ರಿಂದ 22 ಸಾವಿರ ರೂಪಾಯಿ ಅಂದರೆ ಶೇ. 40 ರಷ್ಟು ಸಬ್ಸಿಡಿ ಸಿಗಲಿದೆ. ಇದೇ ಸಬ್ಸಿಡಿಯು ಮೂರು ಕಿಲೋ ವ್ಯಾಟ್ ವರೆಗೂ ಸಿಗುತ್ತದೆ. 10 ಕಿಲೋ ವ್ಯಾಟ್ ಘಟಕ ಸ್ಥಾಪಿಸಿದರೆ 3 ಕಿಲೋ ವ್ಯಾಟ್ ವರೆಗೂ ಶೇ. 40 ರಷ್ಟು ಸಬ್ಸಿಡಿ ಹಾಗೂ ನಂತರದ ಏಳು ಕಿಲೋ ವ್ಯಾಟ್ ವರೆಗೆ ಶೇ. 20 ರಷ್ಟು ಸಬ್ಸಿಡಿ ಸಿಗಲಿದೆ. ನಿಮ್ಮ ಬಳಿ ಹಣವಿಲ್ಲದಿದ್ದರೆ ಬ್ಯಾಂಕಿನಿಂದ ಸಾಲಸೌಲಭ್ಯವೂ ಪಡೆಯಬಹುದು.
ಈ ಯೋಜನೆಯಡಿಯಲ್ಲಿ ಗ್ರಾಹಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಘಟಕ ಸ್ಥಾಪನೆಗೆ ಮನೆಗಳು ಅಥವಾ ಅಪಾರ್ಟ್ ಮೆಂಟ್ ಸೂಕ್ತ ಎನಿಸಿದರೆ, ಯೋಜನೆ ಜಾರಿಗೆ ಮಂಜೂರಾತಿ ನೀಡಲಾಗುವುದು. ಆಯ್ಕೆಯಾದ ಗ್ರಾಹಕರು ಮುಂಗಡವಾಗಿ ಶೇ. 60 ರಷ್ಟು ಹಣ ಪಾವತಿಸಿ ಕಾಮಗಾರಿ ಆರಂಭಿಸಬಹುದು. ಘಟಕ ಸ್ಥಾಪನೆ ಮಾಡಿದ ನಂತರ ಐದು ವರ್ಷಗಳವರೆಗೆ ಉಚಿತವಾಗಿ ಘಟಕಗಳನ್ನು ಉಚಿತವಾಗಿ ನಿರ್ವಹಣೆ ಮಾಡಲಾಗುವುದು.
ನಿಮ್ಮ ಮನೆಯ ಮೇಲ್ಛಾವಣಿ ಮೇಲೆ ಎರಡು ಕಿಲೋ ವ್ಯಾಟ್ ಸೋಲಾರ್ ಪ್ಯಾನಲ್ ಅಳವಡಿಸಿದರೆ ನಂತರ ದಿನಕ್ಕೆ 10 ಗಂಟೆಗಳ ಕಾಲ ಬಿಸಿಲಿನ ಸಂದರ್ಭದಲ್ಲಿ ಸುಮಾರು 10 ಯೂನಿಟ್ ವಿದ್ಯುತ್ ಉತ್ಪಾದಿಸಬಹುದು. ನಾವು ತಿಂಗಳಿಗೆ ಲೆಕ್ಕಾಚಾರ ಮಾಡಿದರೆ ಎರಡು ಕಿಲೋ ವ್ಯಾಟ್ ಸೋಲಾರ್ ಪ್ಯಾನಲ್ ಸುಮಾರು 300 ಯೂನಿಟ್ ವಿದ್ಯುತ್ ಉತ್ಪಾದಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to online apply for rooftop solar panel)
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಗ್ರಾಹಕರು https://solarrooftop.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕೇಂದ್ರ ಸರ್ಕಾರದ ಸೋಲಾರ್ ಘಟಕದ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಅಪ್ಲೈ ಫಾರ್ ಸೋಲಾರ್ ರೂಫಿಂಗ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ರಾಜ್ಯದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ ಸೋಲಾರ್ ಗೃಹ ಯೋಜನೆಯ ಗೈಡ್ ಲೈನ್ಸ್ ಓದಿಕೊಳ್ಳಬೇಕು. ಎಷ್ಟು ವ್ಯಾಟ್ ದವರೆಗೆ ಎಷ್ಟು ಸಬ್ಸಿಡಿ ಸಿಗುತ್ತದೆ, ನೋಂದಣಿ ಶುಲ್ಕ ಸೇರಿದಂತೆ ಎಲ್ಲಾ ಮಾಹಿತಿ ಒದಿಕೊಂಡು ಕೆಳಗಡೆ ಓಕೆ ಮೇಲೆ ಕ್ಲಿಕ್ ಮಾಡಬೇಕು. ಆಗ ಅರ್ಜಿ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಕಂಸ್ಯೂಮರ್ ಐಡಿ ನಮೂದಿಸಿ ಫೆಟ್ಚ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಉಚಿತ ಸಹಾಯವಾಣಿ (Toll free number for solar panel)
ಸೌರಶಕ್ತಿ ಸಬ್ಸಿಡಿ ಯೋಜನೆಯಾಗಿ ನೀವು ಟೋಲ್ ಫ್ರಿ ನಂಬರ್ 1800 180 3333 ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದು ಅಥವಾ ನಿಮ್ಮ ಹತ್ತಿರದ ಕೆಇಬಿ ಕಚೇರಿಗೆ ಸಂಪರ್ಕಿಸಬಹುದು.
ಹಣ ಗಳಿಸುವುದು ಹೇಗೆ? (how to Earn money to install rooftop solar panel)
ಮನೆಯ ಮೇಲ್ಛಾವಣಿಯಲ್ಲಿ ಸೌರ ಸ್ಥಾವರ ಸ್ಥಾಪಿಸುವ ಮೂಲಕ ವಿದ್ಯುತ್ನ್ನು ನೀವು ಮಾರಾಟ ಮಾಡಿ ಹಣ ಗಳಿಸಬಹುದು. ಸ್ಥಳೀಯ ವಿದ್ಯುತ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ನೀವು ವಿದ್ಯುತ್ ಮಾರಾಟ ಮಾಡಬಹುದು. ಇದಕ್ಕಾಗಿ ನೀವು ಸ್ಥಳೀಯ ವಿದ್ಯುತ್ ಕಂಪನಿಗಳಿಂದ ಪರವಾನಗಿ ಪಡೆಯಬೇಕಾಗುತ್ತದೆ.
ಇದನ್ನೂ ಓದಿ ನಿಮ್ಮ ಹೆಸರಿಗೆ ಯಂತ್ರೋಪಕರಣ ಪಡೆಯಲಾಗಿದೆಯೇ? ಚೆಕ್ ಮಾಡಿ
ನಿರ್ವಹಣೆ ವೆಚ್ಚ ಕಡಿಮೆ
ಸೌರಶಕ್ತಿ ಫಲಕಗಳ ನಿರ್ವಹಣಾ ವೆಚ್ಚ ತುಂಬಾ ಕಡಿಮೆ ಇರುತ್ತದೆ. ಈ ಫಲಕಗಳ ಬ್ಯಾಟರಿಯನ್ನು ಹತ್ತು ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಇದರ ಬೆಲೆ ಸುಮಾರು 20 ಸಾವಿರ ರೂಪಾಯಿ ಇರುತ್ತದೆ. ಸೌರಶಕ್ತಿ ಫಲಕಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು.