ಬೆಳೆ ಹಾನಿ ವಿವರ ದಾಖಲಿಸಲು ಡಿಸೆಂಬರ್ 7 ರವರೆಗೆ ಕಾಲಾವಕಾಶ

Written by By: janajagran

Updated on:

Crop damage details record  ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾದ ರೈತರು ಡಿಸೆಂಬರ್ 7 ರವರೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನವೆಂಬರ್ ತಿಂಗಳಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಹಲವೆಡೆ ಬೆಳೆಹಾನಿ, ಕೆಲ ಮನೆಗಳಿಗೂ ಹಾನಿಯಾಗಿದೆ.  ಮಳೆಯಿಂದಾಗಿ ಮಳೆ ಹಾನಿ ವಿವರಗಳನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ತಂತ್ರಾಂಶದಲ್ಲಿ ಹಾಗೂ ಬೆಳೆ ಹಾನಿಯಾದ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಅವಧಿ ವಿಸ್ತರಿಸಲಾಗಿದೆ.  ಈ ಕಾಲಮಿತಿಯೊಳಗೆ ಆಯಾ ಜಿಲ್ಲೆಯ ಅಧಿಕಾರಿಗಳಉ ಹಾಗೂ ಸಿಬ್ಬಂದಿ ಕೂಡಲೇ ರೈತರ ಬೆಳೆ ಹಾನಿ ವಿವರಗಳನ್ನು ದಾಖಲಿಸಲು ಸೂಚಿಸಲಾಗಿದೆ.

ಬೆಳೆ ನಷ್ಚವಾದ ಪ್ರದೇಶಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸ್ಥಳದಿಂದಲೇ ವಿವರಗಳನ್ನು ಅಪ್ಲೋಡ್ ಮಾಡಲು ಮುಖ್ಯಮಂತ್ರಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಆದರೆ ಕೆಲವು ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿಲ್ಲವೆಂಬ ದೂರು ಕೇಳಿ ಬರುತ್ತಿರುವುದರಿಂದ ಮಳೆಯಿಂದ ಬೆಳೆ ಹಾನಿಯಾದ ರೈತರು ಕೂಡಲೇ ತಮ್ಮ ಹತ್ತಿರ ಗ್ರಾಮ ಪಂಚಾಯತಿಗೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಡಿಸೆಂಬರ್ 7ರೊಳಗೆ ಅರ್ಜಿ ಸಲ್ಲಿಸಬಹುದು.

Crop damage details record  ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಮಳೆಯಿಂದಾಗಿ ಬೆಳೆ ಹಾನಿಯಾದರೆ ರೈತರು ಒಂದು ಅರ್ಜಿ ಬರೆಯಬೇಕು. ಅರ್ಜಿಯಲ್ಲಿ ಹೆಸರು, ವಿಳಾಸ, ಸರ್ವೆ ನಂಬರ್, ಜಮೀನಿನ ವಿಸ್ತೀರ್ಣ, ಬೆಳೆ ವಿವರ, ಬೆಳೆ ಹಾನಿಯಾದ ವಿಸ್ತೀರ್ಣ, ರೈತರ ವರ್ಗ ಅಂದರೆ ಸಣ್ಣ, ಅತೀ ಸಣ್ಣ ರೈತರು ಎಂದು ನಮೂದಿಸಬೇಕು.  ಆಧಾರ್ ಕಾರ್ಡ್ ಝರಾಕ್ಸ್, ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್, ಬ್ಯಾಂಕಿನ ಹೆಸರು, ಬ್ಯಾಂಕ್ ಐಎಫ್ಎಸ್ಐ ಕೋಡ್, ಬ್ಯಾಂಕ್ ಬ್ರ್ಯಾಂಚ್, ಮೊಬೈಲ್ ಸಂಖ್ಯೆ ನಮೂದಿಸಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ ಗೃಹಲಕ್ಷ್ಮೀ, ಅನ್ನಭಾಗ್ಯ ಹಣ ಈ ಲಿಸ್ಟ್ ನಲ್ಲಿದ್ದವರಿಗೆ ಜಮೆ- ಚೆಕ್ ಮಾಡಿ

ಅರ್ಜಿ ಸ್ವೀಕರಿಸಿದ ಅಧಿಕಾರಿಗಳು ರೈತರ ಎಲ್ಲಾ ವಿವರಗಳನ್ನು ಪರಿಶೀಲಿಸಿ ಪರಿಹಾರ ತಂತ್ರಾಂಶದಲ್ಲಿ ನಮೂದಿಸುತ್ತಾರೆ. ನಂತರ ರೈತರಖಾತೆಗೆ ಪರಿಹಾರ ಹಣ ಜಮೆ ಮಾಡಲಾಗುವುದು.

ಪರಿಹಾರ ಹಣ ಜಮೆಯ ಸ್ಟೇಟಸ್ ಸಹ ರೈತರು ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು. ಕಳೆದ ವರ್ಷ ಪರಿಹಾರ ಹಣ ಎಷ್ಟು ಜಮೆಯಾಗಿದೆ ಈ ವರ್ಷ ಜಮೆಯಾಗುವ ಸ್ಟೇಟಸ್ ಸಹ ನೋಡಿಕೊಳ್ಳಬಹುದು.

ಪರಿಹಾಣ ಹಣ ಜಮೆಯ ಸ್ಟೇಟಸ್ ಮೊಬೈಲ್ ನಲ್ಲಿ ನೋಡಿ

ಪರಿಹಾರ ಸ್ಟೇಟಸ್ ನೋಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ಪರಿಹಾರ ವೆಬ್ ಪೇಜ್ ಓಪನ್ ಆಗುತ್ತದೆ ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ನಂತರ Select calamity type ನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು. ಈ ವರ್ಷದ ಸ್ಟೇಟಸ್ 2021-22 ಆಯ್ಕೆ ಮಾಡಿಕೊಳ್ಳಬೇಕು. ಕಳೆದ ವರ್ಷದ ಸ್ಟೇಟಸ್ ನೋಡಲು 2020-21 ಆಯ್ಕೆ ಮಾಡಿಕೊಳ್ಳಬೇಕು.  ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದರೆ ಸಾಕು ಪರಿಹಾರ ಸ್ಟೇಟಸ್ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು.

Leave a Comment