ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನದ ಮಾಲೀಕರು ಯಾರು, ಸರ್ವೆ ನಂಬರ್ ತಿಳಿದುಕೊಳ್ಳಬೇಕೇ… ನೀವು ಖರೀದಿಸುವ ಜಮೀನಿನ ಮೇಲೆ ನ್ಯಾಯಾಲಯದ ಯಾವುದಾದರೂ ತಕರಾರು ಇದೆಯೇ ಎಂಬುದನ್ನು ತಿಳಿದುಕೊಳ್ಳಲು ನೀವು ಎಲ್ಲಿಯೂ ಹೋಗಬೇಕಿಲ್ಲ. ಯಾರಿಗೂ ಕೇಳಬೇಕಿಲ್ಲ. ನಿಮ್ಮ ಮೊಬೈಲ್ ನಲ್ಲಿ ದಿಶಾಂಕ್ ಆ್ಯಪ್ (Dishaank App) ಬಳಸಿ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ಮಾಹಿತಿ
ಯಾವುದೇ ಜಮೀನು ಅಥವಾ ಆಸ್ತಿ ಖರೀದಿ ಮಾಡುವಾಗ ಆ ಜಮೀನಿನ ನಿಜವಾದ ಮಾಲೀಕರಾರು ಎಂಬುದನ್ನು ತಿಳಿದುಕೊಳ್ಳುತ್ತೇವೆ. ಆ ಜಮೀನು ಖರೀದಿ ಮಾಡುತ್ತಿರುವವರ ಹೆಸರಿನಲ್ಲಿದೆಯೇ ಎಂಬುದನ್ನು ಪರಿಶೀಲಿಸುವುದು ಸಾಮಾನ್ಯ. ಅಷ್ಟೇ ಅಲ್ಲ ನೀವು ನಿಂತಿರುವ ಜಮೀನಿನ ಸರ್ವೆ ನಂಬರ್ ವಿವರವನ್ನು ಸಹ ದಿಶಾಂಕ್ ಆ್ಯಪ್ ಸಹಾಯದಿಂದ ಸುಲಭವಾಗಿ ತಿಳಿದುಕೊಳ್ಳಬಹುದು.
ಏನಿದು ದಿಶಾಂಕ್ ಆ್ಯಪ್? (What is Dishaank App)
ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ಈ ದಿಶಾಂಕ್ ಆ್ಯಪ್ ನ್ನು ಪರಿಚಿಯಿಸಿದೆ. ಈ ಆ್ಯಪ್ ಸಹಾಯದಿಂದ ಆಸ್ತಿಯ ವಿವರಗಳನ್ನೆಲ್ಲಾ ತಿಳಿದುಕೊಳ್ಳಬಹುದು. ನಾವು ನಿಂತಿರುವ ಸ್ಥಳದ ಸರ್ವೆ ನಂಬರ್ ಅಥವಾ ಇದು ಸರ್ಕಾರದ ಜಮೀನೋ/ಖಾಸಗಿ ಜಮೀನೋ ಎಂಬುದನ್ನು ತಿಳಿಸುತ್ತದೆ. ಪ್ರತಿ ಸರ್ವೆ ನಂಬರ್ ಗಳ ಗಡಿರೇಖೆ, ರಸ್ತೆ, ಕೆರೆ, ಕಾಲುವೆಗಳ ಗಡಿರೇಖೆಯನ್ನು ತೋರಿಸುತ್ತದೆ.
ದಿಶಾಂಕ್ ಆ್ಯಪ್? ಸಹಾಯದಿಂದ ಆಸ್ತಿಯ ವಿವರ ಹೇಗೆ ನೋಡಬೇಕು?
ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ ಅಥವಾ ಗೂಗಲ್ ನಲ್ಲಿ Dishaank ಎಂದು ಟೈಪ್ ಮಾಡಬೇಕು. ಆಗ Dishaank app on google play ಮೇಲೆ ಕ್ಲಿಕ್ ಮಾಡಬೇಕು. ಅಥವಾ ಈ https://play.google.com/store/apps/details?id=com.ksrsac.sslr&hl=en_IN&gl=US
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ದಿಶಾಂಕ್ ಆ್ಯಪ್ ಕಾಣಿಸುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ದಿಶಾಂಕ್ ಟು ಅಕ್ಸೆಸ್ ದಿಸ್ ಡಿವೈಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಲೋಕೇಷನ್ ಕ್ಲಿಕ್ ಮಾಡಿದ ನಂತರ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಕನ್ನಡದಲ್ಲಿ ಮಾಹಿತಿ ನೋಡಬೇಕಾದರೆ ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ನೋಡಬೇಕಾದರೆ ಇಂಗ್ಲೀಷ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಆಗ ನೀವು ಇದ್ದ ಸ್ಥಳ ಅಂದರೆ ಯಾವ ಸರ್ವೆ ನಂಬರ್ ನಲ್ಲಿರುತ್ತೀರೋ ಅಲ್ಲಿ ಪಾಯಿಂಟ್ ಕಾಣುತ್ತದೆ. ಅಷ್ಟೇ ಅಲ್ಲ ಅಕ್ಕಪಕ್ಕದ ಸರ್ವೆ ನಂಬರ್ ಸಹ ಕಾಣುತ್ತದೆ.
ಇದನ್ನು ಓದಿ:ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಹಿಂಗಾರು ಹಂಗಾಮು ಬೆಳೆ ವಿಮೆ ನೋಂದಣಿಗೆ ಅವಕಾಶ
ನೀವು ನಿಂತಿರುವ ಪಾಯಿಂಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಸರ್ವೆ ನಂಬರ್, ಗ್ರಾಮದ ಹೆಸರು, ಹೋಬಳಿ, ತಾಲೂಕು ಜಿಲ್ಲೆಯ ಹೆಸರು ಕಾಣುತ್ತದೆ. ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಿ ಸರ್ನೋಕ್ ಸಂಖ್ಯೆ ಸ್ಟಾರ್ ಇದ್ದರೆ ಸ್ಟಾರ್, ಸಂಖ್ಯೆ ಇದ್ದರೆ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು, ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಂಡು ಮಾಲೀಕರು ಮೇಲೆ ಕ್ಲಿಕ್ ಮಾಡಬೇಕು. ಆಗ ಆ ಜಮೀನಿನ ಮಾಲೀಕರು ಯಾರಿದ್ದಾರೋ ಅವರ ಹೆಸರು, ಜಮೀನಿನ ವಿಸ್ತೀರ್ಣ, ಭೂವಿಯ ವಿಧ, ಆ ಭೂಮಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಯಾವುದಾದರೂ ತಡೆಯಾಜ್ಞೆ ಇದೆಯೇ ಎಂಬುದು ಸೇರಿದಂತೆ ಇನ್ನಿತರ ಮಾಹಿತಿ ಕಾಣುತ್ತದೆ.
ಬಲಗಡೆಯಿರುವ ನಾಲ್ಕು ಲೈನ್ ಸರ್ಕಲ್ ನಲ್ಲಿ ಕ್ಲಿಕ್ ಮಾಡಿದರೆ ನಕ್ಷೆ ಸೂಚಿ ಇನ್ನೊಂದು ಪರದೆ ಓಪನ್ ಆಗುತ್ತದೆ. ಅಲ್ಲಿ ನೀವು ರಾಜ್ಯದ ಗಡಿ, ಜಿಲ್ಲೆಯ, ತಾಲೂಕು, ಗ್ರಾಮದ ಗಡಿ, ಬೆಟ್ಟ, ನದಿ, ಟ್ಯಾಂಕ್ ರಸ್ತೆ, ರೈಲು ಮಾರ್ಗ ಎಲ್ಲಿ ಬರುತ್ತದೆ ಎಂಬುದನ್ನು ಆಯ್ಕೆ ಮಾಡಿಕೊಂಡು ನೋಡಿಕೊಳ್ಳಬಹುದು.
ಯಾವುದೇ ಆಸ್ತಿ ಖರೀದಿಸುವುದಕ್ಕಿಂತ ಮುಂಚಿತವಾಗಿ ಈ ವಿವರಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ನೀವು ಜಮೀನಿ ಖರೀದಿ ಮಾಡುವುದಕ್ಕಿಂತ ಮುಂಚೆ ಪರಿಶೀಲಿಸಿಕೊಳ್ಳುವುದು ಉತ್ತಮ. ಇಲ್ಲಿ ಕಾಣಿಸುವ ನಕಾಶೆ ಸಾಂಕೇತಿಕವಾದದ್ದು, ಮಾಹಿತಿಗಾಗಿ ಬಳಸಿಕೊಳ್ಳಲು ಕಂದಾಯ ಇಲಾಖೆಯು ಈ ದಿಶಾಂಕ್ ಆ್ಯಪ್ ಅಭಿವೃದ್ಧಿಪಡಿಸಿದೆ.