ಜಾನುವಾರು ಮಾರಾಟ ದರದ ಮಾಹಿತಿ ಇಲ್ಲಿದೆ

Written by By: janajagran

Updated on:

Click here to know the rate of livestock ಪಶುಪಾಲನೆ ಮಾಡುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಪಶುಪಾಲಕರು ಮನೆಯಲ್ಲಿಯೇ ಕುಳಿತು ಪಶು ಇಲಾಖೆಯಲ್ಲಿ  ವಿವಿಧ ತಳಿಯ ಜಾನುವಾರುಗಳ ವೀರ್ಯ ನಳಿಕೆಯ ದರ ಹಾಗೂ  ಹಂದಿ ಮರಿಗಳ ಬೆಲೆಯನ್ನು ಮೊಬೈಲ್ ನಲ್ಲಿಯೇ ತಿಳಿದುಕೊಳ್ಳಬಹುದು.

ಹೌದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವೆಬ್ಸೈಟ್ ನಲ್ಲಿ ಈ ಎಲ್ಲಾ ಮಾಹಿತಿಯ ಸೌಲಭ್ಯವನ್ನು ಒದಗಿಸಿದೆ. ಇದಕ್ಕಾಗಿ ರೈತರು

http://www.ahvs.kar.nic.in/kn_Sale.html

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಜಾನುವಾರು ಹಾಗೂ ಇತರೆ ಉತ್ಪನ್ನಗಳ ಮಾರಾಟದ ದರವನ್ನು ಪ್ರಕಟಿಸಲಾಗಿದೆ.

Click here to know the rate of livestock ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರಗಳು

ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರ ಧಾರವಾಡ, ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರ ಮೈಸೂರು, ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರ ಕಲಬುರಗಿ, ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರ ರಾಯಚೂರು ಹಾಗೂ ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರ ಹೆಸರುಘಟ್ಟದಲ್ಲಿ ವಿವಿಧ ಗೋತಳಿಗಳ ವೀರ್ಯನಳಿಕೆಗಳು ಲಭ್ಯವಿದೆ.

ಎಚ್ಎಫ್ ತಳಿಯ ವೀರ್ಯನಳಿಕೆ ಬೆಲೆ 20 ರೂಪಾಯಿ, ಜೆರ್ಸಿ ತಳಿಯ ವೀರ್ಯನಳಿಕೆ ತಳಿಯ ಬೆಲೆ 20 ರೂಪಾಯಿ, ಅಮೃತಮಹಲ್  ತಳಿಯ ವೀರ್ಯನಳಿಕೆ ಬೆಲೆ 20 ರೂಪಾಯಿ ಹಳ್ಳಿಕಾರ್ ತಳಿಯ ವೀರ್ಯನಳಿಕೆ ದರ 20 ಹಾಗೂ ಎಮ್ಮೆ ವೀರ್ಯ ನಳಿಕೆ ದರ 18 ರೂಪಾಯಿಯಿದೆ.

ಹಂದಿ ಮರಿಗಳು ಮಾರಾಟಕ್ಕಿವೆ

ಯಾರ್ಕ್ ಶೇರ್ ಹಂದಿ ಮರಿಗಳು ಬೇಕಾಗದರೆ ಮುಂಗಡವಾಗಿ ಬುಕಿಂಗ್ ಮಾಡುವ ಸೌಲಭ್ಯವೂ ಇದೆ. ಹಂದಿ ಮರಿಗಳ ಲಭ್ಯತೆ ಹಾಗೂ ದರವನ್ನು ಸಹ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. 3-4 ತಿಂಗಳ ಮರಿಗಳು 3500 ರೂಪಾಯಿಗೆ ಸಿಗುತ್ತದೆ. ಅದೇ ರೀತಿ ನಾಲ್ಕು ತಿಂಗಳ ಮರಿಗಳು 4500 ರೂಪಾಯಿಯಲ್ಲಿ ಸಿಗುತ್ತದೆ.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಲಿಸ್ಟ್ ನಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹಂದಿ ಮರಿಗಳ ಬೇಕಾದರೆ ಡಾ. ವೀನಂತ್ ಮೊ. 9845112584, ಡಾ. ರಾಮು ಮೊ. 8050271621, ಡಾ. ಚಂದ್ರಶೇಖರ ಮೊ. 9880886372, ಡಾ. ಸಂಜೀವ್ ಶಿಂದೆ ಮೊ. 944842269ಗೆ ಸಂಪರ್ಕಿಸಲು ಕೋರಲಾಗಿದೆ.

ಪಶುಪಾಲಕರ ಸಹಾಯವಾಣಿ

ಪಶುಪಾಲನಾ ಇಲಾಖೆಯು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಪ್ರಾಣಿ ರೋಗ ಕಣ್ಗಾವಲು ಜಾಲದ ಬಲವರ್ಧನೆ ಕಾರ್ಯಕ್ರಮದ ಅಡಿಯಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗಿದೆ.  ರಾಜ್ಯದ ಪಶುಸಂಗೋಪನಾ ಚುಟವಟಿಕೆಗಳಲ್ಲಿ ನಿರತರಾಗಿರುವ ರೈತರು ದೂರವಾಣಿ ಸಂಖ್ಯೆ ಉಚಿತ ಸಹಾಯವಾಣಿ 8277 100 200 ಗೆ  24*7 ರವರೆಗೆ ಕರೆ ಮಾಡಿ  ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರು ಮತ್ತು ಇತರೆ ವಿಷಯ ತಜ್ಞರಿಂದ ಅಗತ್ಯ ಮಾಹಿತಿ ಪಡೆಯಬಹುದು. ಪಶುಪಾಲನೆಯಲ್ಲಿ ಆಸಕ್ತಿ ಇರುವ ರೈತರು ಈ ಉಚಿತ ಸಹಾಯವಾಣಿ ಸದುಪಯೋಗ ಪಡೆದುಕೊಳ್ಲಬಹುದು.

Leave a Comment