How many SIM card on your name ಹೊಸ ಹೊಸ ಆಫರ್ ಬಂದಾಗ ಹಾಗೂ ಡಬಲ್, ಟ್ರಿಬಲ್ ಸಿಮ್ ಕಾರ್ಡ್ ಮೊಬೈಲ್ ಗಳಲ್ಲಿ ಬಳಸಲು ಸಿಮ್ ಗಳನ್ನು ತೆಗೆದುಕೊಳ್ಳುತ್ತೇವೆ. ಆಫರ್ ನಲ್ಲಿದ್ದಾಗ ಒಂದೆರಡು ತಿಂಗಳು ಉಪಯೋಗಿಸಿ ನಂತರ ಬಳಸುವುದನ್ನು ನಿಲ್ಲಿಸುತ್ತೇವೆ. ರಿಚಾರ್ಜ್ ಮಾಡಿಸುವುದಿಲ್ಲ. ನಿಮ್ಮ ಗುರುತಿನ ಚೀಟಿ ನೀಡಿ ಮೊಬೈಲ್ ಸಿಮ್ ಖರೀದಿಸಿರುತ್ತೀರಿ. ಹೀಗೆ ನಿಮ್ಮ ಹೆಸರಿನ ಮೇಲೆ ಎಷ್ಟು ಸಿಮ್ ಗಳು ಈಗ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಒಂದೇ ನಿಮಿಷಯದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಸಂಪೂರ್ಣ ಮಾಹಿತಿ.
How many SIM card on your name ನಿಮ್ಮ ಹೆಸರಿಗೆ ಎಷ್ಟು ಮೊಬೈಲ್ ನಂಬರ್ ಗಳಿವೆ? ಇಲ್ಲಿ ಚೆಕ್ ಮಾಡಿ
ನಿಮ್ಮ ಹೆಸರಿನ ಮೇಲೆ ಎಷ್ಟು ಸಿಮ್ ಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಚೆಕ್ ಮಾಡುವುದಷ್ಟೇ ಅಲ್ಲ, ನಿಮ್ಮ ಹೆಸರಿನ ಮೇಲೆ ಎಷ್ಟು ಮೊಬೈಲ್ ನಂಬರ ಗಳಿವೆ ಎಂಬುದನ್ನು ಚೆಕ್ ಮಾಡಿ ನೀವು ಬಳಸದಿದ್ದರೆ ಅದನ್ನು ನಿಮ್ಮ ಹೆಸರಿನಿಂದ ತೆಗೆಯಬಹುದು. ಅಂದರೆ ಆ ಮೊಬೈಲ್ ನಂಬರ್ ಬಳಸುತ್ತಿಲ್ಲವೆಂದು ಕ್ಷಣಾರ್ಧದಲ್ಲಿ ದೂರನ್ನು ನೀಡಬಹುದು.
ನಿಮ್ಮ ಹೆಸರಿನ ಮೇಲೆ ಎಷ್ಟು ಸಿಮ್ ಗಳಿವೆ ಎಂಬುದನ್ನು ಚೆಕ್ ಮಾಡಲು ಮೊದಲು ಸರ್ಕಾರದ ಈ ವೆಬ್ ಲಿಂಕ್
https://tafcop.dgtelecom.gov.in/index.php
ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಈಗ ಬಳಸುತ್ತಿರುವ ಮೊಬೈಲ್ ನಂಬರ್ ಹಾಕಿ ರೆಕ್ವೆ,ಸ್ಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರಿಗೆ ಒಂದು ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ ವ್ಯಾಲಿಡೇಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರಿನ ಮೊದಲ ಎರಡು ಸಂಖ್ಯೆ ಹಾಗೂ ಕೊನೆಯ ನಾಲ್ಕು ಸಂಖ್ಯೆಗಳು ಕಾಣುತ್ತವೆ. ನಿಮ್ಮ ಹೆಸರಿಗೆ ಎಷ್ಟು ಮೊಬೈಲ್ ನಂಬರ್ ಗಳಿವೆ ಎಂಬ ಪಟ್ಟಿ ಅಲ್ಲಿ ಕಾಣುತ್ತದೆ. ಒಂದೇ ನಂಬರ್ ಇದ್ದರೆ ಒಂದೇ ಮೊಬೈಲ್ ನಂಬರ್ ಕಾಣುತ್ತದೆ. ಅಲ್ಲಿ ಕಾಣುವ ಮೊಬೈಲ್ ನಂಬರ್ ನಿಮ್ಮದಿದ್ದರೆ ಏನು ಮಾಡುವ ಅವಶ್ಯಕತೆಯಿಲ್ಲ.
ಇದನ್ನೂ ಓದಿ: ಮೊಬೈಲ್ ನಲ್ಲಿಯೇ ಪಡೆಯಿರಿ ಊರಿನ ಮ್ಯಾಪ್… ಇಲ್ಲಿದೆ ಸಂಪೂರ್ಣ ಮಾಹಿತಿ
ಒಂದು ವೇಳೆ ನೀವು ಆ ಮೊಬೈಲ್ ನಂಬರನ್ನು ಬಳಸುತ್ತಿಲ್ಲವಾದರೆ ಆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Not required ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮ್ಮ ನಂಬರ್ ಇಲ್ಲದಿದ್ದರೆ This is not my number ಮೇಲೆ ಕ್ಲಿಕ್ ಮಾಡ ಬೇಕು ಆಗ ಮೇಲ್ಗಡೆ Name of user ನಲ್ಲಿ ನಿಮ್ಮ ಹೆಸರು ಕಾಣುತ್ತದೆ. ನಿಮ್ಮ ಹೆಸರು ಕಾಣದಿದ್ದರೆ ಹೆಸರು ನಮೂದಿಸಬೇಕು. ನಂತರ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು.ಆಗ ರಿಪೋರ್ಟ್ ಸಬ್ಮಿಟ್ ಆಗಿದೆ.ಎಂಬ ಮೆಸೆಜ್ ಬರುತ್ತದೆ. ಅಲ್ಲಿ ಕಾಣುವ ರೆಫರೆನ್ಸ್ ನಂಬರ್ ಕಾಪಿ ಮಾಡಿ ಸೇವ್ ಮಾಡಿಕೊಳ್ಳಬೇಕು. ನಂತರ ಆ ರೆಫರೆನ್ಸ್ ನಂಬರ್ ಸ್ಟೇಟಸ್ ಚೆಕ್ ಮಾಡಲು ಉಪಯೋಗವಾಗುತ್ತದೆ. ನಂತರ ಸ್ಟೇಟಸ್ ಚೆಕ್ ಮಾಡಲು ಮೊಬೈಲ್ ನಂಬರ್ ಓಟಿಪಿ ಹಾಕಿ ಟ್ರ್ಯಾಕ್ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ಅಲ್ಲಿ ಮೊಬೈಲ್ ನಂಬರ್ ಮತ್ತು ಸ್ಟೇಟಸ್ ಕಾಣುತ್ತದೆ. ಹೌದು, ಒಮ್ಮೆ ನೀವು ಚೆಕ್ ಮಾಡಿ ನೋಡಬಹುದು. ತಮ್ಮ ಹೆಸರಿನಲ್ಲಿರುವ ಮೊಬಲ್ ಸಂಖ್ಯೆಗಳು ಕಾಣಿಸುತ್ತವೆ.