Sowing seeds available in subsidy ಹಿಂಗಾರು ಬಿತ್ತನೆಗೆ ಸಿದ್ದತೆಯಲ್ಲಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ. 2021-22ನೇ ಸಾಲಿನ ಹಿಂಗಾರು ಹಂಗಾಮಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಶೇಂಗಾ, ಕಡಲೆ, ಜೋಳ, ಗೋದಿ, ರಾಗಿ, ಸೂರ್ಯಕಾಂತಿ, ಕುಸುಬೆ, ಭತ್ತ, ಕುಸುಬೆ, ಮೆಕ್ಕೆಜೋಳ, ಅಲಸಂದೆ ಸೇರಿದಂತೆ ಇನ್ನಿತರ ತಳಿಯ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ..
18 ವರ್ಷದ ಮೇಲ್ಪಟ್ಟ ರೈತರು ಹಾಗೂ ಕುಟುಂಬದ ಸದಸ್ಯರು ಕಡ್ಡಾಯವಾಗಿ ಕೊರೋನಾ ಲಸಿಕೆ ಪಡೆದುಕೊಂಡು ವೈದ್ಯರಿಂದ ದೃಢೀಕರಣ ಪಡೆದು, ಸರತಿ ಸಾಲಿನಲ್ಲಿ ಖುದ್ದಾಗಿ ಬಂದು ಬಿತ್ತನೆ ಬೀಜ ಪಡೆಯಲು ಕೋರಲಾಗಿದೆ. ಕೃಷಿ ಇಲಾಖೆಯಿಂದ ನೀಡಲಾದ ಮಾರ್ಗಸೂಚಿಯನ್ವಯ ಪ್ರತಿ ರೈತರಿಗೆ ಗರಿಷ್ಟ 2 ಹೆಕ್ಟೇರ್ ಅಥವಾ ಅವರ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಬಿತ್ತನೆ ಬೀಜ ವಿತರಿಸಲಾಗುವದು.. ರಾಜ್ಯದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತದೆ.
ಬಿತ್ತನೆ ಬೀಜ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು:
ಪಹಣಿ ಝಿರಾಕ್ಸ್ ಪ್ರತಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ (ಎಸ್.ಸಿ ಎಸ್ಟಿಯವರಿಗೆ), ನೀರು ಬಳಕೆ ಪತ್ರ (ಶೇಂಗಾ ಬೀಜ ಪಡೆಯಲು)
2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿ ಬೀಜ ಖರೀದಿಸಿದ ರೈತರು ಹಿಂಗಾರು ಬಿತ್ತನೆ ಬೀಜ ಪಡೆಯಲು ಅರ್ಹರಿರುವುದಿಲ್ಲ. ಪ್ರತಿ ಎಕರೆಗೆ ಶೇಂಗಾ ಬೀಜ (50 ಕೆಜಿ) ಕಡಲೆ ಬೀಜ (20 ಕೆ.ಜಿ), ಜೋಳ (3 ಕೆ.ಜಿ) ವಿತರಿಸಲಾಗುವುದು. ಬಿತ್ತನೆ ಬೀಜದ ಜೊತೆಗೆ ಬೀಜೋಪಚಾರ ಮಾಡಲು ಟ್ರೈಕೋಡರ್ಮಾ ಹಾಗೂ ಎನ್.ಪಿ.ಕೆ ಕೊಡಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕನಿಷ್ಟ 1 ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.
Sowing seeds available in subsidy ಹಿಂಗಾರು ಬಿತ್ತನೆ ಬೀಜದ ರಿಯಾಯ್ತಿ ದರದ ಮಾಹಿತಿ:
ಶೇಂಗಾ (ನೆಲಗಡಲೆ) ಎಸ್ಸಿ, ಎಸ್ಟ್ ರೈತರಿಗೆ ಪ್ರತಿ ಕ್ವಿಂಟಾಲಿಗೆ ಸಬ್ಸಿಡಿಯಲ್ಲಿ 9000 ರೂಪಾಯಿ ಹಾಗೂ ಸಾಮಾನ್ಯ ರೈತರಿಗೆ ಪ್ರತಿ ಕ್ವಿಂಟಾಲಿಗೆ 9950 ರೂಪಾಯಿಯಂತೆ ವಿತರಿಸಲಾಗುವುದು. ಕಡಲೆ ಬೀಜವನ್ನು ಎಸ್ಸಿ ಎಸ್ಟಿ ರೈತರಿಗೆ ಸಬ್ಸಿಡಿಯಲ್ಲಿ 3850 ರೂಪಾಯಿ ಹಾಗೂ ಸಾಮಾನ್ಯ ರೈತರಿಗೆ 5100 ರೂಪಾಯಿ ಪ್ರತಿ ಕ್ವಿಂಟಾಲಿಗೆ ವಿತರಿಸಲಾಗುವುದು. ಜೋಳದ ಬೀಜವನ್ನು ಸಬ್ಸಿಡಿಯಲ್ಲಿ ಎಸ್ಸಿ ಎಸ್ಟಿ ರೈತರಿಗೆ 2600 ರೂಪಾಯಿ ಹಾಗೂ ಸಾಮಾನ್ಯ ರೈತರಿಗೆ 3600 ರೂಪಾಯಿಗೆ ವಿತರಿಸಲಾಗುವುದು. ಸೆಪ್ಟೆಂಬರ್ 27 ಬೆಳಗ್ಗೆ 10 ಗಂಟೆಯಿಂದ ಬೀಜ ವಿತರಣೆ ಆರಂಭಿಸಲಾಗುವುದು.
ಇದನ್ನೂ ಓದಿ: ನಿಮ್ಮ ಜಮೀನಿಗೆ ಪೋಡಿ ಇಲ್ಲದಿದ್ದರೆ ನೀವು ಮಾಲಿಕರಲ್ಲ…. ಪೋಡಿ ಹೇಗೆ ಮಾಡಿಸಬೇಕು, ಪೋಡಿಯಿಂದಾಗುವ ಉಪಯೋಗಗಳ ಸಂಪೂರ್ಣ ಮಾಹಿತಿ ಇಲ್ಲಿದೆ
2021-22ನೇ ಹಿಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ನಿಗದಿಪಡಿಸಲಾದ ಬೆಳೆವಾರು ಪ್ರತಿ ಕೆಜಿಗೆ ರಿಯಾಯತಿ ದರದ ವಿವರ ಕೆಳಗಿನಂತಿದೆ.