name in crop loan waive ರೈತರಿಗಿಲ್ಲಿದೆ ಸಂತಸದ ಸುದ್ದಿ. ಬೆಳೆಸಾಲಮನ್ನಾ ಆಗಿರುವ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಬೇಕೇ… ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಿಲ್ಲ. ಈಗಾಗಲೇ ಬ್ಯಾಂಕುಗಳು ಸಾಲಮನ್ನಾ ಆದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು ಬ್ಯಾಂಕಿನ ಮುಂದೆ ಕೈಚಾಚುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು ಹಾಗೂ ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.
name in crop loan waive ಬೆಳೆ ಸಾಲಮನ್ನಾ ಪಟ್ಟಿಯಲ್ಲಿ ಹೆಸರು ಚೆಕ್ ಮಾಡುವುದು ಹೇಗೆ?
ಹೌದು, ನೀವು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರೋ ಆ ಬ್ಯಾಂಕು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಬಹುದು. ಚೆಕ್ ಮಾಡಲು ನೀವು ಈ
https://clws.karnataka.gov.in/clws/bank/fsd_report/BANK_IFR.aspx/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆಸಾಲಮನ್ನಾ ಪೇಜ್ ಓಪನ್ ಆಗುತ್ತದೆ. ಇಲ್ಲಿ ನೀವು ನಿಮ್ಮ ಜಿಲ್ಲೆ, ಬ್ಯಾಂಕಿನ ಹೆಸರು, ಯಾವ ಊರಿನ ಬ್ಯಾಂಕ್ ಇದೆಯೋ ಅದರ ಬ್ರ್ಯಾಂಚ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ಆ ಬ್ಯಾಂಕಿನಲ್ಲಿ ಸಾಲಮನ್ನಾ ಆದ ಎಲ್ಲಾ ರೈತರ ಪಟ್ಟಿ ತೆರೆಯಲ್ಪಡುತ್ತದೆ. ಅಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ 13 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ- ಸ್ಟೇಟಸ್ ಚೆಕ್ ಮಾಡಿ
ಇದು ಆ ಬ್ರ್ಯಾಂಚ್ ನಲ್ಲಿ ಸಾಲ ಪಡೆದು ಮನ್ನಾ ಆದ ಎಲ್ಲಾ ರೈತರ ಹೆಸರು, ತಂದೆಯ ಹೆಸರು, ಹಾಗೂ ಎಷ್ಟು ಹಣ ಸಾಲಮನ್ನಾ ಆಗಿದೆ ಎಂಬ ಎಲ್ಲಾ ವಿವರ ಇರುತ್ತದೆ. ನಿಮ್ಮ ಹೆಸರು ಇರುವ ಈ ಪಟ್ಟಿಯನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಬಹುದು. ಪ್ರಿಂಟ್ ಬೇಕಾದರೆ ಪ್ರಿಂಟ್ ಸಹ ಪಡೆದುಕೊಳ್ಳಬಹುದು. ಮುಂದೆ ಸಾಲ ಪಡೆಯುವಾಗ ಉಪಯೋಗವಾಗುತ್ತದೆ.
ವಾಣಿಜ್ಯ ಬ್ಯಾಂಕಿ ನಲ್ಲಿ ಸಾಲ ಪಡೆದ ರೈತರು ಋಣಮುಕ್ತ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು
https://clws.karnataka.gov.in/clws/payment/bankcertificate/
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಆಧಾರ್ ಕಾರ್ಡ್ ನಂಬರ್ ನಮೂದಿಸಿದ ನಂತರ Fetch details ಮೇಲೆ ಕ್ಲಿಕ್ ಮಾಡಿದರೆ ಸಾಕು ಆಗ ಸರ್ಕಾರ ಬಿಡುಗಡೆ ಮಾಡಿದ ಋಣುಮುಕ್ತ ಪ್ರಮಾಣ ಪತ್ರ ಓಪನ್ ಆಗುತ್ತದೆ. ಕರ್ನಾಟಕ ಸರ್ಕಾರವು ವಾಣಿಜ್ಯ ಬ್ಯಾಂಕುಗಳ ಬೆಳೆ ಸಾಲ ಮನ್ನ ಯೋಜನೆಯಲ್ಲಿ ನಿಮ್ಮ ಹೆಸರು, ಬ್ಯಾಂಕಿನಲ್ಲಿ ಪಡೆದು ಸಾಲ, ಮತ್ತು ಎಷ್ಟು ಹಣ ಮನ್ನಾ ಆಗಿದೆ ಸೇರಿದಂತೆ ಎಲ್ಲಾ ಮಾಹಿತಿಯುಳ್ಳ ಪ್ರಮಾಣ ಪತ್ರ ಓಪನ್ ಆಗುತ್ತದೆ. ಋಣಮುಕ್ತ ಪ್ರಮಾಣ ಪತ್ರ ಇಂಗ್ಲೀಷ್ ಅಥವಾ ಕನ್ನಡದಲ್ಲಿ ಪಡೆಯಬಹುದು. ಕನ್ನಡದಲ್ಲಿ ಬೇಕಾಗದರೆ ಕನ್ನಡ ಮುಂದಿನ ಬಾಕ್ಸ್ ಮೇಲೆ ಕ್ಲಿಕ್ ಮಾಡಿದರೆ ಸಾಲಮನ್ನಾ ಋಣಮುಕ್ತ ಪ್ರಮಾಣ ಪತ್ರ ಓಪನ್ ಆಗುತ್ತದೆ. ಇದನ್ನು ಪ್ರಿಂಟ್ ತೆಗೆದಿಟ್ಟುಕೊಂಡರೆ ಮುಂದೆ ಸಾಲ ಪಡೆಯುವಾಗ ನಿಮಗೆ ಉಪಯೋಗವಾಗುತ್ತದೆ.
ಒಂದು ವೇಳೆ ನೀವು ಸಹಕಾರ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರೆ
https://clws.karnataka.gov.in/clws/payment/pacscertificate/
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಗ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಆಧಾರ್ ಕಾರ್ಡ್ ನಂಬರ್ ನಮೂದಿಸಿದ ನಂತರ Fetch details ಮೇಲೆ ಕ್ಲಿಕ್ ಮಾಡಿದರೆ ಸಾಕು ಆಗ ಸರ್ಕಾರ ಬಿಡುಗಡೆ ಮಾಡಿದ ಋಣುಮುಕ್ತ ಪ್ರಮಾಣ ಪತ್ರ ಓಪನ್ ಆಗುತ್ತದೆ. ಕರ್ನಾಟಕ ಸರ್ಕಾರವು ಸಹಕಾರ ಬ್ಯಾಂಕ್ ಮೂಲಕ ಬೆಳೆ ಸಾಲ ಮನ್ನ ಯೋಜನೆಯಲ್ಲಿ ನಿಮ್ಮ ಹೆಸರು, ಬ್ಯಾಂಕಿನಲ್ಲಿ ಪಡೆದು ಸಾಲ, ಮತ್ತು ಎಷ್ಟು ಹಣ ಮನ್ನಾ ಆಗಿದೆ ಸೇರಿದಂತೆ ಎಲ್ಲಾ ಮಾಹಿತಿಯುಳ್ಳ ಪ್ರಮಾಣ ಪತ್ರ ಓಪನ್ ಆಗುತ್ತದೆ. ಋಣಮುಕ್ತ ಪ್ರಮಾಣ ಪತ್ರ ಇಂಗ್ಲೀಷ್ ಅಥವಾ ಕನ್ನಡದಲ್ಲಿ ಪಡೆಯಬಹುದು. ಕನ್ನಡದಲ್ಲಿ ಬೇಕಾಗದರೆ ಕನ್ನಡ ಮುಂದಿನ ಬಾಕ್ಸ್ ಮೇಲೆ ಕ್ಲಿಕ್ ಮಾಡಿದರೆ ಸಾಲಮನ್ನಾ ಋಣಮುಕ್ತ ಪ್ರಮಾಣ ಪತ್ರ ಓಪನ್ ಆಗುತ್ತದೆ. ಇದನ್ನು ಪ್ರಿಂಟ್ ತೆಗೆದಿಟ್ಟುಕೊಂಡರೆ ಮುಂದೆ ಸಾಲ ಪಡೆಯುವಾಗ ನಿಮಗೆ ಉಪಯೋಗವಾಗುತ್ತದೆ.