Agri pump set subsidy ಬಡ ರೈತರ ಹಿತದೃಷ್ಟಿಯಿಂದ ಕೃಷಿ ಪಂಪ್ ಸೆಟ್ ಗಳಿಗೆ ಪಡೆಯುತ್ತಿರುವ ವಿದ್ಯುತ್ ಸಬ್ಸಿಡಿಯನ್ನು ಶ್ರೀಮಂತರು ಸ್ವಯಂಪ್ರೇರಿತವಾಗಿ ತ್ಯಜಿಸುವ ಅಭಿಯಾನವನ್ನು ಸರ್ಕಾರ ಹಮ್ಮಿಕೊಳ್ಳುವ ಚಿಂತನೆ ನಡೆಸಿದೆ.
ಹೌದು, ಆಡುಗೆ ಅನಿಲ ಸಿಲೆಂಡರಗಳಿಗೆ ನೀಡುತ್ತಿರುವ ಸಬ್ಸಿಡಿ ವೆಚ್ಚವನ್ನು ತಗ್ಗಿಸಲು ಕೇಂದ್ರ ಸರ್ಕಾರವು Give it up ಕಾರ್ಯಕ್ರಮ ರೂಪಿಸಿದಂತೆ ಈಗ ಕೃಷಿ ಪಂಪ್ ಸೆಟ್ಗಳಿಗೆ ಶ್ರೀಮಂತರು, ಉಳ್ಳವರು, ಆಸಕ್ತರು ಸ್ವಯಂಪ್ರೇರಿತವಾಗಿ ಗಿವ್ ಇಟ್ ಅಪ್ ಅಭಿಯಾನ ನಡೆಸುವ ಚಿಂತನೆಯಲ್ಲಿದೆ.
ಅಡುಗೆ ಅನಿಲ ಸಬ್ಸಿಡಿ ಸಹಾಯಧನ ತ್ಯಾಗ ದೇಶವ್ಯಾಪಿ ಉತ್ತಮ ಸ್ಪಂದನೆ ದೊರೆತಿರುವುದರಿಂದ ಈಗ ಕೃಷಿ ಪಂಪ್ ಸೆಟ್ ಗಳಿಗೂ ಉಚಿತ ಸಹಾಯಧನ ಸ್ಕೀಮ್ ಅನ್ವಯಿಸಿ ಅಭಿಯಾನ ಮೂಲಕ ಶ್ರೀಮಂತರ, ಉಳ್ಳವರ ಮನವೊಲಿಕೆಗೆ ಪ್ರಯತ್ನಿಸಲಿದೆ.
ರೈತರಿಗೆ ನೀರಾವರಿ ಪಂಪ್ ಸೆಟ್ಗಳಿಗೆ ಗರಿಷ್ಠ 10 ಅಶ್ವಶಕ್ತಿ ಸಾಮರ್ಥ್ಯದವರೆಗೆ ದಿನಕ್ಕೆ ಏಏಳು ಗಂಟೆ ಮೂರು ಫೇಸ್ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ಈ ನೀತಿ ಎಲ್ಲಾ ರೈತರಿಗೂ ಏಕರೂಪವಾಗಿ ಅನ್ವಯಿಸುತ್ತಿದೆ. ದೊಡ್ಡ, ರೈತರು, ಶ್ರೀಮಂತರು, ಉದ್ಯಮ-ವಹಿವಾಟು ಉಳ್ಳುವರ ಹೊಂದಿದ ನೀರಾವರಿ ಐಪಿ ಸೆಟ್ಗಳಿಗೂ ಉಚಿತ ವಿದ್ಯುತ್ ಪೂರೈಕೆಯಾಗುತ್ತಿದೆ. ಇಂತಹ ಶ್ರೀಮಂತರು ಸ್ವಯಂಪ್ರೇರತರಾಗಿ ಮುಂದೆ ಬಂದು ಉಚಿತ ವಿದ್ಯುತ್ ಸೌಲಭ್ಯ ತ್ಯಜಿಸಲು ಮುಂದೆ ಬರಲು ಅಭಿಯಾನ ನಡೆಸುವ ಚಿಂತನೆ ನಡೆಸಿದೆ.
ಇದನ್ನೂ ಓದಿ- ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ರೈತರಿಗೆ 3 ಲಕ್ಷ ರೂಪಾಯಿ ಸಹಾಯಧನ ನೀಡಲು ರೈತರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ತೋಟಗಾರಿಕೆ, ಬಹುವಾರ್ಷಿಕ ಬೆಳೆ ಬೆಳೆದ ಕ್ಷೇತ್ರಗಳು, ಫಾರ್ಮ ಹೌಸ್ ಮೂಲಕ ಹೆಚ್ಚು ಸಂಪಾದನೆ ಮಾಡುತ್ತಿರುವ ರೈತರು ವಿದ್ಯುತನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಇಂತಹ ರೈತರು ಸ್ವಯಂಪ್ರೇರಿತರವಾಗಿ ವಿದ್ಯುತ್ ಸಬ್ಸಿಡಿ ತ್ಯಜಿಸಿದರೆ ಬಡರೈತರಿಗೆ ಅನುಕೂಲವಾಗಲಿದೆ ಎಂಬುದು ಸರ್ಕಾರದ ಯೋಚನೆಯಾಗಿದೆ.
Agri pump set subsidy ಕೃಷಿ ಪಂಪ್ ಸೆಟ್ಗಳಿಗೆ ಉಚಿತ ಸಬ್ಸಿಡಿ ಕೈಬಿಡಲು ಇಂಧನ ಸಚಿವ ಸುನೀಲ್ ಕುಮಾರ ಶ್ರೀಮಂತರಿಗೆ ಮನವಿ
ಬಡ ರೈತರ ಹಿತದೃಷ್ಟಿಯಿಂದ ಶ್ರೀಮಂತ ರೈತರು, ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳಉ ತಮ್ಮ ಜಮೀನಿನ ಕೃಷಿ ಪಂಪ್ ಸೆಟ್ ಗಳಿಗೆ ಪಡೆಯುತ್ತಿರುವ ವಿದ್ಯುತ್ ಸಬ್ಸಿಡಿ ತ್ಯಜಿಸುವ ಮನಸ್ಸು ಮಾಡಬೇಕೆಂದು ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ ಮನವಿ ಮಾಡಿದ್ದಾರೆ.
ಅವರು ಕಲಬುರಗಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಮಂತ ರೈತರು, ರಾಜಕಾರಣಿಗಳು, ಅಧಿಕಾರಿಗಳು ಮನಸ್ಸು ಮಾಡಬೇಕು. ಬಡರೈತರ ಹಿತದೃಷ್ಟಿಯಿಂದಾಗಿ ಸಬ್ಸಿಡಿಗೆ ಆಸೆಪಡದೆ ವಿದ್ಯುತ್ ಬಿಲ್ ಪಾವತಿಸಲು ಮುಂದೆ ಬರಬೇಕು. ಇದರಿಂದ ಗ್ರಾಮೀಣ ಭಾಗದಲ್ಲಿರುವ ಬಡ ರೈತರಿಗೆ ಸಬ್ಸಿಡಿ ನೀಡಲು ಸರ್ಕಾರಕ್ಕೆ ಸುಲಭವಾಗುತ್ತದೆ ಎಂದು ಹೇಳಿದ್ದಾರೆ.
ರೈತರ ಪಂಪ್ ಸೆಟ್ಗಳಿಗೆ ನಿರಂತರವಾಗಿ ಏಳು ತಾಸು ವಿದ್ಯುತ್ ಪೂರೈಕೆ ಮಾಡುವುದು ಸರ್ಕಾರದ ಆದ್ಯತೆಯಾಗಿದೆ. ಇದಕ್ಕಾಗಿ ರಾಜ್ಯದ 60 ಕಡೆಗಳಲ್ಲಿ ಸಬ್ ಸ್ಟೇಷನ್ ಗಳ ಸ್ಥಾಪನೆ ಮಾಡಲಾಗುತ್ತಿದೆ. ಈ ಕುರಿತಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಜೊತೆಗೆ ಚರ್ಚೆ ನಡೆಸುತ್ತಿದ್ದು, ನಿರಂತರ ಏಳು ತಾಸು ವಿದ್ಯುತ್ ಪೂರೈಕೆ ಕುರಿತಂತೆ ಶಾಶ್ವತ ಯೋಜನೆ ರೂಪಿಸುವುದು ಸರ್ಕಾದ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.