Karnataka govt extended lockdown ರಾಜ್ಯದಲ್ಲಿ ಜೂನ್ 14 ರವರೆಗೆ ಲಾಕ್ಡೌನ್ ವಿಸ್ತರಣೆ (Karnataka govt extended lockdown ) ಮಾಡಿರುವ ಜೊತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮತ್ತೇ 500 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಹೌದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೋವಿಡ್ -19 ಸೋಂಕು ನಿಯಂತ್ರಿಸುವ ಕಾರಣದಿಂದ ಈ ಹಿಂದೆ ಜಾರಿಮಾಡಿದ್ದ ಲಾಕ್ಡೌನ್ ನ್ನು ಜೂನ್ 14ರವರೆಗೆ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದರು.
ಇದನ್ನೂ ಓದಿ ಅನ್ನಭಾಗ್ಯ ಹಣ ನಿಮಗೆ ಜಮೆಯಾಗಿಲ್ಲವೇ? ಸ್ಟೇಟಸ್ ಚೆಕ್ ಮಾಡಿ
ನೇಕಾರರು, ಚಲನಚಿತ್ರ, ಮೀನುಗಾರರು, ದೂರದರ್ಶನ ನೋಂದಾಯಿತ ಕಾರ್ಮಿಕರಿಗೆ, ಮುಜರಾಯಿ ಇಲಾಖೆಯ ಅರ್ಚಕರು ಮತ್ತು ಅಡುಗೆ ಸಿಬ್ಬಂದಿ, ಮಸೀದಿ ಬೇಸಿಮಾ ಮೌಜಿನ್ ಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂಪಾಯಿ, ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 2 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ತಲಾ ಐದು ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಹೆಚ್ಚುವರಿಯಾಗಿ ಜೂನ್ ಮತ್ತು ಜುಲೈನಲ್ಲಿ ಹಾಲಿನ ಪುಡಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬೆಳೆ ಯಾವ ಹಂತದಲ್ಲಿ ಎಷ್ಟು ನಷ್ಟವಾದರೆ ಎಷ್ಟು ಪರಿಹಾರ ನೀಡಲಾಗುವುದು?
ತೊಗರಿ ಬೆಳೆ ಮೊಳಕೆ ಹಂತದಲ್ಲಿ ನಷ್ಟವಾದರೆ ವಿಮಾ ಮೊತ್ತದ ಶೇ. 46 ರಷ್ಟು ಪರಿಹಾರ ನೀಡಲಾಗುವುದು. ಬೆಳವಣಿಗೆ ಹಂತದಲ್ಲಿ ಶೇ. 29, ಮೊಗ್ಗುವ ಹಂತದಲ್ಲಿ ಕೊಯ್ಲು ಹಂತದಲ್ಲಿ ಶೇ. 25 ರಷ್ಟು ಪರಿಹಾರ ನೀಡಲಾಗುವುದು.
ಹೆಸರು ಬೆಳೆಯನ್ನು ಮೊಳಕೆ ಹಂತದಲ್ಲಿ ಶೇ. 60, ಬೆಳೆವಣಿಗೆ ಹಂತದಲ್ಲಿ ಶೇ. 19, ಕೊಯ್ಲು ಹಂತದಲ್ಲಿ ಶೇ. 80 ರಷ್ಟು ಪರಿಹಾರ ನೀಡಲಾಗುವುದು.
ಸೊಯಾಬಿನ್ ಮತ್ತು ಅವರೆ ಮೊಳಕೆ ಹಂತದಲ್ಲಿ ಶೇ. 54, ಬೆಳವಣಿಗೆ ಹಂತದಲ್ಲಿ ಶೇ. 22, ಕೊಯ್ಲು ಹಂತದಲ್ಲಿ ಶೇ. 22 ಪರಿಹಾರ ನೀಡಲಾಗುವುದು.
ಸೂರ್ಯಕಾಂತಿ ಮೊಳಕೆ ಹಂತದಲ್ಲಿ ಶೇ. 68, ಬೆಳವಣಿಗೆ ಹಂತದಲ್ಲಿ ಶೇ. 18, ಕೊಯ್ಲು ಹಂತದಲ್ಲಿ ಶೇ. 13 ರಷ್ಟು ಪರಿಹಾರ ನೀಡಲಾಗುವುದು.
ಹತ್ತಿ ಮೊಳಕೆ ಹಂತದಲ್ಲಿ ಶೇ. 44, ಬೆಳವಣಿಗೆ ಹಂತದಲ್ಲಿ ಶೇ. 25, ಕೊಯ್ಲು ಹಂತದಲ್ಲಿ ಶೇ. 21 ರಷ್ಟು ಪರಿಹಾರ ನೀಡಲಾಗುವುದು. ಅದೇ ರೀತೆ ಎಳ್ಳು ಮೊಳಕೆ ಹಂತದಲ್ಲಿ ಶೇ. 58, ಬೆಳವಣಿಗೆ ಹಂತದಲ್ಲಿ ಶೇ. 18 ಹಾಗೂ ಕೊಯ್ಲು ಹಂತದಲ್ಲಿ ಶೇ. 24 ರಷ್ಚು ಪರಿಹಾರ ನೀಡಲಾಗುವುದು. ಹಾಗಾಗಿ ರೈತರು ಕಡ್ಡಾಯವಾಗಿ ಬೆಳೆ ವಿಮಾ ಸೌಲಭ್ಯವನ್ನು ಪಡೆಯಲು ಕೋರಲಾಗಿದೆ.
ರೈತರು ಪಾವತಿಸಬೇಕಾದ ವಿಮಾ ಮೊತ್ತದ ಮಾಹಿತಿ ಇಲ್ಲಿದೆ
ರೈತರು ಪ್ರತಿ ಹೆಕ್ಟೇರಿಗೆ ತೊಗರಿ 800 ರಿಂದ 850 ರೂಪಾಯಿ ಹೆಸರು 580 ರೂಪಾಯಿ ಉದ್ದು 560 ರೂಪಾಯಿ, ಸಜ್ಜೆ 580 ರೂಪಾಯಿ ಸೋಯಾ ಮತ್ತು ಅವರೆ 580 ರೂಪಾಯಿ ರೈತರ ವಂತಿಗೆ ಪಾವತಿಸಬೇಕಾಗುತ್ತದೆ.ಸೂರ್ಯಕಾಂತಿ 840 ರೂಪಾಯಿ ಹತ್ತಿ ನೀರಾವರಿ 3350, ಎಳ್ಳು 500 ರೂಪಾಯಿ ವಿಮಾ ಮೊತ್ತ ಪಾವತಿಸಬೇಕಾಗುತ್ತದೆ.