ಬದುಗಳಲ್ಲಿ ಮರಗಳನ್ನು ಬೆಳೆಸಿ 40 ಸಾವಿರ ಪಡೆಯುವುದು ಹೇಗೆ?

Written by By: janajagran

Updated on:

Grow tree Get subsidy ಹೊಲಗಳಲ್ಲಿ, ಹೊಲದ ಬದುವಿನಲ್ಲಿ ಅರಣ್ಯ ಕೃಷಿ ಮಾಡಿದರೆ ಸರ್ಕಾರವೇ ರೈತರಿಗೆ ಪ್ರೋತ್ಸಾಹ ಧನ (Grow tree Get subsidy )ನೀಡುತ್ತದೆ. ಹೌದು, ಅರಣ್ಯ ಇಲಾಖೆಯ ವತಿಯಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಸಿಗಳನ್ನು ವಿತರಣೆ ಮಾಡಿ ಬದುಕುಳಿದ ಸಸಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು.

ಹೌದು, ಜೂನ್ ತಿಂಗಳಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಪ್ರತಿವರ್ಷ ಮರಗಳನ್ನು ಬೆಳೆಸಲು ಹಾಗೂ ರೈತರಿಗೆ ಪ್ರೋತ್ಸಾಹಧನ ನೀಡಲು ಈ ಯೋಜನೆ ಆರಂಭವಾಗಿದೆ. ಈ ಯೋಜನೆಯಡಿಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಲಾಗುವುದು. ಬದುಕುಳಿದ ಸಸಿಗಳ ಆಧಾರದ ಮೇಲೆ ಪ್ರೋತ್ಸಾಹ ಧನ ನೀಡಲಾಗುವುದು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ರೈತರು ತಮ್ಮ ಸ್ವಂತ ಸಮೀಜನುಗಳಲ್ಲಿ ಸಸಿಗಳನ್ನು ನೆಡಲು ಸ್ಥಳೀಯ ವಲಯದ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ನಿಗದಿತ ವಿವರಗಳನ್ನು ಹಾಗೂ ನೋಂದಾವಣಿ ಶುಲ್ಕವನ್ನು 10 ರೂಪಾಯಿಗೊಳ ಜೊತೆಗೆ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಜಮೀನಿನ ವಿವರಗಳಿರುವ ಪಹಣಿ, ಕೈಬರಹದ ನಕ್ಷೆ, ಜಮೀನಿನ ಚೆಕ್ಕುಂಬದಿ ಹಾಗೂ ರೈತರು ಜಮೀನಿನಲ್ಲಿ ನೆಡಲು ಬೇಕಾಗಿರುವ ಸಸಿಗಳ ಜಾತಿ, ಅಳತೆ, ಸಂಖ್ಯೆಯ ವಿವರಗಳ ದಾಖಲೆಗಳನ್ನು ನೋಂದಾವಣಿ ಸಮಯದಲ್ಲಿ ಅರ್ಜಿಯೊಂದಿಗೆ ಸಲ್ಲಿಸಬೇಕು.

Grow tree Get subsidy ಪ್ರೋತ್ಸಾಹ ಧನ ಪಡೆಯುವುದು ಹೇಗೆ ?

ರೈತರು, ಸಾರ್ಜಜನಿಕರು 1 ರಿಂದ 10 ರೂಪಾಯಿಯವರೆಗೆ ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ರೈತರು ತಮ್ಮ ಜಮೀನಿನನಲ್ಲಿ, ಬದುಗಳಲ್ಲಿ ನೆಟ್ಟು ಪೋಷಿಸಿದರೆ ಪ್ರತಿ ಬದುಕುಳಿದ ಸಸಿಗೆ ಮೊದಲ ವರ್ಷ ಅಂತ್ಯದಲ್ಲಿ 30 ರೂಪಾಯಿ, ಎರಡನೇ ವರ್ಷದಲ್ಲಿ 30 ರೂಪಾಯಿ ಹಾಗೂ ಮೂರನೇ ವರ್ಷದ ಅಂತ್ಯದಲ್ಲಿ 40 ರೂಪಾಯಿ ಹೀಗೆ ಮೂರು ವರ್ಷದಲ್ಲಿ ಒಟ್ಟು 100 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು.

ಇದನ್ನೂ ಓದಿ ಅನ್ನಭಾಗ್ಯ ಹಣ ನಿಮಗೆ ಜಮೆಯಾಗಿಲ್ಲವೇ? ಸ್ಟೇಟಸ್ ಚೆಕ್ ಮಾಡಿ

ಉದಾಹರಣೆಗೆ ನೀವು 100 ಸಸಿ ತೆಗೆದುಕೊಂಡರರೆ 10 ಸಾವಿರ ರೂಪಾಯಿಯವರೆಗೆ ಪ್ರೋತ್ಸಾಹ ಧನ ಪಡೆಯುವುದು. ಹೆಕ್ಟೇರಿಗೆ 400 ಸಸಿಗಳನ್ನು ನೆಟ್ಟರೆ 40 ಸಾವಿರ ರೂಪಾಯಿಯವರೆಗೆ ಪ್ರೋತ್ಸಾಹಧನ ಸಿಗುತ್ತದೆ.

ಒಂದು ವೇಳೆ ಅರ್ಜಿ ಸಲ್ಲಿಸಿದ ಸಸಿಗಳು ಸಮೀಪದ ನರ್ಸರಿಯಲ್ಲಿ ಲಭ್ಯವಿಲ್ಲದಿದ್ದರೆ ಏನು ಮಾಡಬೇಕು?

ಒಂದು ವೇಳೆ ಅರ್ಜಿ ಸಲ್ಲಿಸಿದ ಸಸಿಗಳು ಸಮೀಪದ ನರ್ಸರಿಯಲ್ಲಿ ಲಭ್ಯವಿಲ್ಲದಿದ್ದರೆ, ನರ್ಸರಿಯ ಸಂಬಂಧಿತ ಉಸ್ತುವಾರಿ ಸಿಬ್ಬಂದಿಯಿಂದ ಅದನ್ನು ಸೂಚಿಸುವ ಲಿಖಿತ ಅನುಮೋದನೆಯನ್ನು ಪಡೆದುಕೊಳ್ಳಬೇಕು. ಲಿಖಿತ ಅನುಮೋದನೆಯಲ್ಲಿ ಸಲ್ಲಿಸುವ ಮೂಲಕ, ಸಸಿಗಳು ಲಭ್ಯವಿರುವ ವಲಯ ಅಥವಾ ವಿಭಾಗದ ಇನ್ನೊಂದು ನರ್ಸರಿಯಿಂದ ಸಸಿಗಳನ್ನು ಪಡೆದುಕೊಳ್ಳಬಹುದು.

ದಾಖಲೆಗಳು (document)

ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್ ಬುಕ್, ಪಹಣಿ ಪತ್ರ ನಕಲು ಪ್ರತಿ, ಎರಡು ಪಾಸ್ ಪೋರ್ಟ್ ಅಳತೆಯ ಫೋಟೊ ನೀಡಿ ಸಸಿಗಳನ್ನು ಪಡೆಯಬೇಕು. ರೈತರು ಮರಗಳಿಂದ ಸಿಗುವಂತಹ ಹಣ್ಣು, ಬೀಜ, ಮೇವು, ಉರುವಲು, ಕೋಲು ಇತ್ಯಾದಿ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 1926 ಗೆ ಕರೆ ಮಾಡಿ ಸಂಪರ್ಕಿಸಬಹುದು.

Leave a Comment