Bara parihara payment status : ಬರ ಪರಿಹಾರ ಹಣ ನಿಮಗೆಷ್ಟು ಜಮೆಯಾಯಿತು? ಮೊಬೈಲ್ ನಂಬರ್ ಹಾಕಿ ಮೊಬೈಲ್ ನಲ್ಲಿ ಸ್ಟೇಟಸ್ ಹೀಗೆ ಚೆಕ್ ಮಾಡಿ
ರೈತ ಬಾಂಧವರೇ ರಾಜ್ಯ ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಮೊದಲು ಯಾದಗಿರಿ ಜಿಲ್ಲೆಯ ರೈತರ ಖಾತೆಗೆ ಮೊದಲ ಕಂತಿನ 2500 ರೂಪಾಯಿ ಜಮೆ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿತ್ತು. ಆದರೆ ರೈತರ ಖಾತೆಗೆ 2500 ರ ಬದಲಾಗಿ ಕೆಲವು ರೈತರ ಖಾತೆಗೆ 1500 ರೂಪಾಯಿ ಇನ್ನೂ ಕೆಲವು ರೈತರ ಖಾತೆಗೆ 2000 ರೂಪಾಯಿ ಜಮೆ ಮಾಡಲಾಗುತ್ತಿರುವುದರಿಂದ ರೈತರಲ್ಲಿ ನಿರಾಶೆ ಉಂಟಾಗಿದೆ. ಉಳಿದ ಜಿಲ್ಲೆಗಳ ರೈತರ ಖಾತೆಗೂ ಜಮೆಯಾಗುತ್ತಿದೆಯೇ ಎಂಬುದರನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.
Bara parihara payment status ಬರ ಪರಿಹಾರ ಜಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?
ಬರ ಪರಿಹಾರ ಜಮೆಯಾಗಿದೆಯೇ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/service92/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ BHOOMI ONLINE PARIHARA INPUT SUBSIDY PAYMENT DETAILS ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷ ಆಯ್ಕೆ ಮಾಡಿ ಎಂಬುದರಲ್ಲಿ 2026-27 ಆಯ್ಕೆಮಾಡಿಕೊಳ್ಳಬೇಕು. ನಂತರ ಋತು ವಿನಲ್ಲಿ kharif ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ವಿಪತ್ತು ಆಯ್ಕೆ ಮಾಡಿಯಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ Aadhaar Number ಆಧಾರ್ ಸಂಖ್ಯೆ, Farmer ID ರೈತರ ಗುರುತಿನ ಸಂಖ್ಯೆ (FID), Mobile Number / ಮೊಬೈಲ್ ಸಂಖ್ಯೆ, Survey Number /ಸರ್ವೆ ನಂಬರ್ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೊಬೈಲ್ ನಂಬರ್ ನಮೂದಿಸಬೇಕು ನಂತರ Fetch / ಪಡೆಯಿರಿ. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
Bara parihara payment status ಹಣ ಸಂದಾಯದ ವಿವರಗಳು Payment Details
ಕ್ರಮ ಸಂಖ್ಯೆ, ಜಿಲ್ಲೆಯ ಹೆಸರು, ಬ್ಯಾಂಕಿನ ಹೆಸರು, ಮೊತ್ತ, ಖಾತೆದಾರನ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಹಣ ಸಂದಾಯದ ಸ್ಥಿತಿ, ಸಂದಾಯವಾದ ದಿನಾಂಕ, ಸಂದಾಯ ವಿಪತ್ತಿನ ರೀತಿ, ಸಂದಾಯ ಕಾಲ ವರ್ಷ ಎಲ್ಲವೂ ಮಾಹಿತಿ ಇರುತ್ತದೆ. ಇನ್ನೂ ಜಮೆಯಾಗಿಲ್ಲವಾದರೆ ಅಲ್ಲಿ No Data Found ಎಂಬ ಮಾಹಿತಿ ಕಾಣಿಸುತ್ತದೆ.
ಪರಿಹಾರ ನಮೂದಿಸಿದ ವಿವರಗಳು
ಅಲ್ಲಿ ಕ್ರಮ ಸಂಖ್ಯೆ, ಆಧಾರ್ ನಂಬರ್ ಕೊನೆಯ ನಾಲ್ಕು ನಂಬರ್ ಗಳು, ಜಿಲ್ಲೆ, ತಾಲೂಕು, ಮುಧೋ ನಿಮ್ಮ ಊರು ಕಾಣಿಸುತ್ತದೆ.ಇದಾದ ನಂತರ ನಿಮ್ಮ ಸರ್ವೆ ನಂಬರ್ ಕಾಣಿಸುತ್ತದೆ. ಇದಾದ ನಂತರ ನೀವು ಯಾವ ಬೆಳೆ ಹಾಕಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಎಷ್ಟು ಎಕೆ ಜಮೀನು ಇದೆ ಎಂಬ ಮಾಹಿತಿ ಕಾಣಿಸುತ್ತದೆ.
ಈಗಾಗಲೇ ಯಾದಗಿರಿ ಜಿಲ್ಲೆಯ ರೈತರ ಖಾತೆಗೆ ಹಣ ಜಮೆ
ರಾಜ್ಯ ಸರ್ಕಾರವು ಬರ ಪರಿಹಾರ ಹಣದ ಮೊದಲ ಕಂತನ್ನು ಈಗಾಗಲೇ ಯಾದಗಿರಿ ಜಿಲ್ಲೆಯ ರೈತರ ಖಾತೆಗೆ ಜಮೆ ಮಾಡಲಾಗಿದೆ. ಆದರೆ ಕೆಲವು ರೈತರ ಖಾತೆಗೆ 2000 ಇನ್ನೂ ಕೆಲವು ರೈತರ ಖಾತೆಗೆ 2500 ರೂಪಾಯಿ ಕೆಲವು ರೈತರ ಖಾತೆಗೆ 1500 ರೂಪಾಯಿ ಜಮೆ ಮಾಡಿದೆ.
ಇದನ್ನೂ ಓದಿ ನಿಮ್ಮ ಜಮೀನಿನ ಮೇಲೆ ಬೆಳೆ ಸಾಲವಿದೆಯೇ ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ಹೀಗಾಗಿ ಉಳಿದ ರೈತರಲ್ಲಿ ಆತಂಕ ಎದುರಾಗಿದೆ. ತಮ್ಮ ಖಾತೆಗೆ ಹಣ ಜಮೆಯಾಗುತ್ತೋ ಇಲ್ಲವೋ ಅಥವಾ ಎಷ್ಟು ಹಣ ಜಮೆಯಾಗುತ್ತೋ ಎಂಬ ಸಂಶಯದಲ್ಲಿದ್ದಾರೆ.





