ಪ್ರಸಕ್ತ 2021-22ನೇ ಸಾಲಿನ ಮುಂಗಾರು ಹಂಗಾಮಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯಲ್ಲಿ ಭತ್ತ ಬೆಳೆಯುವ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜ (Paddy seeds subsidy) ದಾಸ್ತಾನು ಲಭ್ಯವಿದ್ದು, ಅಗತ್ಯ ದಾಖಲೆ ನೀಡಿ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆದುಕೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ರಂಜೀತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ, ಕೊಕ್ಕಡ ಹಾಗೂ ವೇಣೂರು ಹೋಬಳಿ ಕೇಂದ್ರದಲ್ಲಿ ಭತ್ತದ ಬಿತ್ತನೆ ಬೀಜಗಳು ಸಿಗುತ್ತದೆ. ಬಿತ್ತನೆ ಬೀಜವನ್ನು ಪಡೆಯುವ ಸಾಮಾನ್ಯ ವರ್ಗದ ರೈತರು ತಮ್ಮ ಭತ್ತದ ಕೃಷಿ ಜಮೀನಿನ ಪಹಣಿ(ಆರ್ಟಿಸಿ), ಆಧಾರ್ ಜೆರಾಕ್ಸ್ ಮತ್ತು ಬ್ಯಾಂಕ್ ಪಾಸ್ ಪುಸ್ತಕ ಪ್ರತಿಯನ್ನು ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ವರ್ಗದ ರೈತರು ತಮ್ಮ ಭತ್ತದ ಕೃಷಿ ಜಮೀನಿನ ಪಹಣಿ(ಆರ್ಟಿಸಿ), ಆಧಾರ್ ಜೆರಾಕ್ಸ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಿ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜವನ್ನು ಪಡೆದುಕೊಳ್ಳಬಹುದು.
Paddy seeds subsidy ಮೂರು ವಿಧದ ತಳಿ ಪ್ರತಿ ಹೋಬಳಿಗಳಲ್ಲಿ ಲಭ್ಯ
ಎಂ.ಓ.4 ತಳಿಯ ಭತ್ತದ ಬಿತ್ತನೆ ಬೀಜ ಬೆಳ್ತಂಗಡಿ ಕೇಂದ್ರದಲ್ಲಿ 40.25 ಕ್ವಿಂಟಾಲ್, ಕೊಕ್ಕಡ ಕೇಂದ್ರದಲ್ಲಿ 10 ಕ್ವಿಂಟಾಲ್ ಹಾಗೂ ವೇಣೂರು ಕೇಂದ್ರದಲ್ಲಿ 10 ಕ್ವಿಂಟಾಲ್ ಇದ್ದು ಒಟ್ಟು 60.25 ಕ್ವಿಂಟಾಲ್ ದಾಸ್ತಾನು ಇದೆ. 25 ಕೆ.ಜಿ.ಯ ಒಂದು ಚೀಲಕ್ಕೆ 775 ರೂಪಾಯಿ ದರವಿದ್ದು, ಸಾಮಾನ್ಯ ವರ್ಗಕ್ಕೆ 200 ರೂಪಾಯಿ ಹಾಗೂ ಪ. ಜಾತಿ. ಪ. ಪಂಗಡಕ್ಕೆ 300 ರೂಪಾಯಿ ಸಹಾಯಧನ ಸಿಗುತ್ತದೆ.
ಇದನ್ನೂ ಓದಿ ನಿಮ್ಮ ಮಕ್ಕಳಿಗೆ ಎಷ್ಟು ಸ್ಕಾಲರ್ ಶಿಪ್ ಬರುತ್ತಿದೆ? ಇಲ್ಲೇ ಚೆಕ್ ಮಾಡಿ
ಜಯ ತಳಿಯ ಭತ್ತದ ಬಿತ್ತನೆ ಬೀಜ ಬೆಳ್ತಂಗಡಿ ಕೇಂದ್ರದಲ್ಲಿ 5 ಕ್ವಿಂಟಾಲ್, ಕೊಕ್ಕಡ ಕೇಂದ್ರದಲ್ಲಿ 5 ಕ್ವಿಂಟಾಲ್ ಹಾಗೂ ವೇಣೂರು ಕೇಂದ್ರದಲ್ಲಿ 5 ಕ್ವಿಂಟಾಲ್ ಇದ್ದು ಒಟ್ಟು 15 ಕ್ವಿಂಟಾಲ್ ದಾಸ್ತಾನು ಇದೆ. 25 ಕೆ.ಜಿ.ಯ ಒಂದು ಚೀಲಕ್ಕೆ 750 ರೂಪಾಯಿ ದರವಿದ್ದು, ಸಾಮಾನ್ಯ ವರ್ಗಕ್ಕೆ 200 ರೂಪಾಯಿ ಹಾಗೂ ಪ. ಜಾತಿ. ಪ. ಪಂಗಡಕ್ಕೆ 300 ರೂಪಾಯಿ ಸಹಾಯಧನ ಸಿಗುತ್ತದೆ.
ಜ್ಯೋತಿ ತಳಿಯ ಭತ್ತದ ಬಿತ್ತನೆ ಬೀಜ ಬೆಳ್ತಂಗಡಿ ಕೇಂದ್ರದಲ್ಲಿ 5 ಕ್ವಿಂಟಾಲ್, ಕೊಕ್ಕಡ ಕೇಂದ್ರದಲ್ಲಿ 5 ಕ್ವಿಂಟಾಲ್ ಹಾಗೂ ವೇಣೂರು ಕೇಂದ್ರದಲ್ಲಿ 5 ಕ್ವಿಂಟಾಲ್ ಇದ್ದು ಒಟ್ಟು 15 ಕ್ವಿಂಟಾಲ್ ದಾಸ್ತಾನು ಇದೆ. 25 ಕೆ.ಜಿಯ ಒಂದು ಚೀಲಕ್ಕೆ 825 ರೂಪಾಯಿ ದರವಿದ್ದು, ಸಾಮಾನ್ಯ ವರ್ಗಕ್ಕೆ 200 ರೂಪಾಯಿ ಹಾಗೂ ಪ. ಜಾತಿ. ಪ. ಪಂಗಡಕ್ಕೆ 300 ರೂಪಾಯಿ ಸಹಾಯಧನ ಸಿಗುತ್ತದೆ. ತಾಲೂಕಿನ ರೈತರು ಸೂಕ್ತ ದಾಖಲೆಯನ್ನು ನೀಡಿ ಭತ್ತದ ಬಿತ್ತನೆ ಬೀಜವನ್ನು ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ತಿಳಿಸಿದ್ದಾರೆ.