Drip irrigation krishihonda subsidy : ತೋಟಗಾರಿಕೆ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ತೋಟಗಾರಿಕೆ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ಇಲಾಖೆಯ ಕೆಡಕಂಡ ವಿವಿಧ ಯೋಜನೆಗಳಡಿ ಸಹಾಯಧನ ಪಡಯಲು ಕಲಬುರಗಿ ಜಿಲ್ಲೆಯ ರೈತರಿದಂ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗಳಡಿ (ಪಿಎಂಕೆಎಸ್.ವೈ) ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್.ಹೆಚ್.ಎಮ್) ಹೊಸ ಪ್ರದೇಶ ವಿಸ್ತರಣೆ ಯೋಜನೆಯಡಿ ಹಣ್ಣು, ಹೂವು ಮತ್ತು ತರಕಾರಿ ಬೆಳೆಗಳಿಗೆ ಹೊಸ ಪ್ರದೇಶ ವಿಸ್ತರಣೆ, ನೀರು ಸಂಗ್ರಹಣ ಘಟಕದಡಿ ವೈಯಕ್ತಿಕ ಕೃಷಿ ಹೊಂಡ, ಕೋಯ್ಲೋತ್ತರ ನಿರ್ವಹಣೆ, ಫಾರ್ಮ್ ಗೇಟ್, ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಠಕ, ಸಂರಕ್ಷಿತ ಬೇಸಾಯದಡಿ ಪಾಲಿಮನೆ ಹಾಗೂ ನೆರಳು ಪರದೆ ಘಟಕ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆವಿ.ವೈ) ಯಡಿ ಸೋಲಾರ ಪಂಪ್ ಸೆಟ್, ಈರುಳ್ಳಿ ಶೇಖರಣ ಘಟಕ ಮತ್ತು ತಾಳೆ ಬೆಳೆ ಯೋಜನೆಯಡಿ ತಾಳೆಬೆಳೆ ಹೊಸ ಪ್ರದೇಶ ವಿಸ್ತೀರ್ಣ, ನೀರು ಸಂಗ್ರಹಣ ಘಟಕ ಹಾಗೂ ಇನ್ನಿತರೆ ಯೋಜನೆಗಳಡಿ ಅರ್ಜಿ ಸಲ್ಲಿಸಬಹುದು.
ರೈತರು ಅರ್ಜಿ ಸಲ್ಲಿಕೆಗೆ ಜೂನ್ 30 ಕೊನೆಯ ದಿನಾವಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ಸಂಬಂಧಪಟ್ಟ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಮತ್ತು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಹಾಗೂ ಮೊಬೈಲ್ ಸಂಖ್ಯೆಗಳಾದ ಅಫಜಲ್ಪುರ- 7760969088 ಆಳಂದ-8095143035, ಚಿಂಚೋಳಿ – 9916874287, ಚಿತ್ತಾಪುರ, 9611250501 ಕಲಬುರಗಿ 9900108196, ಜೇವರ್ಗಿ, 9986516251 ಹಾಗೂ ಸೇಡಂ 9164570011 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
Drip irrigation krishihonda subsidy ಹನಿ ನೀರಾವರಿಗೆ ಅರ್ಜಿ ಆಹ್ವಾನ
2026-27ನೇ ಸಾಲಿನ ಪ್ರಧಾನಮಂತ್ರಿ ಕೃಶಿ ವಿಕಾಸ ಯೋಜನೆ ಅಡಿಯಲ್ಲಿ ತುಂತುರು ಹನಿ ನೀರಾವರಿ ಘಟಕಕ್ಕೆ ಸಹಾಯಧನ ನೀಡಲು ಬೆಳಗಾವಿ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹನಿ ನೀರಾವರಿ ಮತ್ತು ತುಂತುರು ಹಾಗೂ ಹನಿ ನೀರಾವರಿ ಅಳವಡಿಕೆಗೆ ರೈತರ ಹೆಸರಿಗೆ 5 ಹೆಕ್ಟೇರ್ ಗರಿಷ್ಠ ಜಮೀನು ಇರಬೇಕು. ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ವರಿಗೆ ಸಹಾಯಧನ ನೀಡಲಾಗುವುದು. ಶೇ. 45 ರಿಂದ 90 ರವರೆಗೆ ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿಗೆ ಸಂಪರ್ಕಿಸುವಂತೆ ಮಹಾಂತೇಶ ಮುರಗಡ, ತೋಟಗಾರಿಕೆ ಜಂಟಿ ನಿರ್ದೇಶಕ (ಜಿಪಂ) ಬೆಳಗಾವಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು
ಅರ್ಜಿ ಸಲ್ಲಿಸಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಪಡಿತರ ಚೀಟಿ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ ಹೊಂದಿರಬೇಕು. ರೈತರ ನೀರಾವರಿ ಸೌಲಭ್ಯ ಹೊಂದಿರಬೇಕು. ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ನೊಂದಿಗೆ ಲಿಂಕ್ ಆಗಿರಬೇಕು.
ಇದನ್ನೂ ಓದಿ ಪಿಎಂ ಕಿಸಾನ್ ಹಣ ಜಮೆಗೆ ಫ್ರೂಟ್ಸ್ ಐಡಿ ನೋಂದಣಿ ಹೀಗೆ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೆ ಕಾಯಬಾರದು. ಬೇಗನೆ ಅರ್ಜಿ ಸಲ್ಲಿಸಿದರೆ ಲಭ್ಯತೆಯ ಆಧಾರದ ಮೇಲೆ ಕೃಷಿ ಉಪಕರಣಗಳನ್ನ ವಿತರಿಸಲಾಗುವುದು. ಹಾಗಾಗಿ ಕೂಡಲೇ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು
ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಲು ಕೋರಲಾಗಿದೆ.





