ಈ ಮಹಿಳೆಯರಿಗೆ ಕೊನೆಗೂ ಜಮೆಯಾಯಿತು ಗೃಹಲಕ್ಷ್ಮೀ 30ನೇ ಕಂತಿನ ಹಣ

Written by Ramlinganna

Published on:

Gruhalakshmi 30th installment credited: ಮಹಿಳೆಯರಿಗೆ ಗುಡ್ ನ್ಯೂಸ್, ಹೌದು, ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳಿಗೆ ಕೊನೆಗೂ 30ನೇ ಕಂತಿನ ಹಣ ಜಮೆಯಾಯಿತು. 31ನೇ ಕಂತಿನ ಹಣವೂ ಅತೀ ಶೀಘ್ರದಲ್ಲಿ ಜಮೆಯಾಗಲಿದೆ.

ಯಾವ ಯಾವ ಮಹಿಳೆಯರ ಖಾತೆಗೆ ಹಣ ಜಮೆಯಾಗಿದೆ.  ಸ್ಟೇಟಸ್ ಹೇಗೆ ಚೆಕ್ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.

ಗೃಹಲಕ್ಷ್ಮೀ ಯೋಜನೆಯ ಮಾರ್ಚ್ ತಿಂಗಳ ಕಂತಿನ ಹಣ ಮುಂದಿನ ನಾಲ್ಕೈದು ದಿನಗಳಲ್ಲಿ ಫಲಾನುಭವಿಗಳ ಜಮೆಯಾಗಲಿದೆ ಎಂದು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು  ಬೆಳಗಾವಿ ತಾಲೂಕಿನ ಬಾಕನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದೇ ಯೋಜನೆಯ ಏಪ್ರೀಲ್ ಕಂತಿನ ಹಣವೂ ಅತೀ ಶೀಘ್ರದಲ್ಲಿ ಜಮೆಯಾಗಲಿದೆ.

Gruhalakshmi 30th installment credited ಹಣ ಜಮೆಯಾಗದಿದ್ದರೆ ಏನು ಮಾಡಬೇಕು ?

ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದರೂ ಹಣ ಜಮೆಯಾಗದಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಪಡಿತರ ಚೀಟಿಯಲ್ಲಿ ಮುಖ್ಯಸ್ಥರಾಗಿರುವ ಮಹಿಳೆಯ ಆಧಾರ್ ಸಕ್ರೀಯವಾಗಿರಬೇಕು. ಬ್ಯಾಂಕ್ ಖಾತೆಯಲ್ಲಿ ಇಕೆವೈಸಿ ಅಪ್ಡೇಟ್ ಆಗಿರಬೇಕು.

ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗದಿದ್ದರೆ ಯಾರಿಗೆ ಕರೆ ಮಾಡಬೇಕು?

ಗೃಹಲಕ್ಷ್ಮೀ ಯೋಜನೆಯ 27ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವಾದರೆ ಕೂಡಲೇ ನೀವು 181 ನಂಬರಿಗೆ ಕರೆ ಮಾಡಬಹುದು.ಈ ಉಚಿತ ಸಹಾಯವಾಣಿ ನಂಬರಿಗೆ ಕರೆ ಮಾಡಿದರೆ ಸಾಕು ನಿಮ್ಮ ಖಾತೆಗೆ ಯಾವಾಗ ಜಮೆಯಾಗುತ್ತದೆ ಯಾವ ಕಾರಣಕ್ಕಾಗಿ ಹಣ ಜಮೆ ಮಾಡುವುದನ್ನು ತಡಿಹಿಡಿಯಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಹೀಗೆ ಚೆಕ್ ಮಾಡಿ

ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯ ಸ್ಟೇಟಸ್  ಚೆಕ್ ಮಾಡಲು ಈ

https://play.google.com/store/apps/details?id=com.dbtkarnataka&hl=en_IN

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆದ ನಿಮಗೆ ಡಿಬಿಟಿ ಯಾಪ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಸಂಖ್ಯೆ ಬರುತ್ತದೆ. ಈ ಓಟಿಪಿ ಸಂಖ್ಯೆನ್ನು ನಮೂದಿಸಿದ ನಂತರ ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಗೃಹಲಕ್ಷ್ಮೀ ಬಟನ್ ಒತ್ತಿದರೆ ಸಾಕು ನಿಮ್ಮ ಖಾತೆಗೆ  ಇಲ್ಲಿಯವರೆಗೆ ಗೃಹಲಕ್ಷ್ಮೀ ಯೋಜನೆಯಿಂದ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಸಿಗುತ್ತದೆ. ಇದರೊಂದಿಗೆ ಗೃಹಲಕ್ಷ್ಮೀ ಹಣ ಜಮೆ ಮಾಡುವ ಪ್ರಕ್ರಿಯೆ ನಿಂತಿದ್ದರೆ ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂಬ ಮಾಹಿತಿಯೂ ಕಾಣಿಸುತ್ತದೆ.

ಅತೀ ಶೀಘ್ರದಲ್ಲಿ ಎಲ್ಲಾ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ಜಮೆ

ಗೃಹಲಕ್ಷ್ಮೀ ಯೋಜನೆಯ ಹಣವನ್ನು ಜಿಲ್ಲಾವಾರು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯ ಫಲಾನುಭವಿಗಳ ಖಾತೆಗೆ ಈಗಾಗಲೇ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಇದರೊಂದಿಗೆ ಹಾವೇರಿ, ಕೊಡಗು, ದಾವಣಗೆರೆ, ವಿಜಯಪುರ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಅತೀ ಶೀಘ್ರದಲ್ಲಿ ಎಲ್ಲಾ ಫಲಾನುಭವಿಗಳ ಖಾತಗೆ ಹಣ ಜಮೆ ಮಾಡಲಾಗುವದು.

ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್. ರೇಶನ್ ಕಾರ್ಡ್ ನಲ್ಲಿ ಹೆಸರು ಒಂದೇ ರೀತಿಯಾಗಿರಬೇಕು. ಹೆಸರು ಸ್ವಲ್ಪ ವ್ಯತ್ಯಾಸವಾಗಿದ್ದರೆ ಅಂತಹ ಮಹಿಳೆಯರ ಖಾತೆಗೆ ಜಮೆ ಮಾಡುವುದನ್ನು ತಡೆಹಿಡಿಯಲಾಗಿದೆ ಹಾಗಾಗಿ ನಿಮ್ಮ ಹೆಸರು ಸರಿಪಡಿಸಿಕೊಳ್ಳಿ.

ಇದನ್ನೂ ಓದಿ ಭಾಗ್ಯಲಕ್ಷ್ಮೀ ಯೋಜನೆ 18 ವರ್ಷ ಪೂರ್ಣಗೊಂಡ ಮಕ್ಕಳ ಖಾತೆಗೆ ಹಣ ಜಮಾ

 

Leave a Comment