ತೌಕ್ತೇ ಚಂಡಮಾರುತದ ( taukte effect yellow alert ) ಪರಿಣಾಮ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮೇ 19ರವರೆಗೆ ಮಳೆ ಯಾಗುವ ಸಾಧ್ಯತೆಯಿರುವುದರಿಂದ ರಾಜ್ಯದ ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (yellow alert ) ಘೋಷಿಸಲಾಗಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ.
taukte effect yellow alert ತೌಕ್ತೆ ಚಂಡಮಾರುತ ಪರಿಣಾಮ ಎಲ್ಲೆಲ್ಲಿ ಮಳೆ
ಕರಾವಳಿ ಭಾಗದಲ್ಲಿ ಚಂಡಮಾರುತದ ಅಬ್ಬರ ತುಸು ಕಡಿಮೆಯಾಗಿದೆ. ಆದರೂ, ಮುಂದಿನ ಎರಡು ದಿನ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬುಧವಾರದವರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಳಿದ ಜಿಲ್ಲೆಗಳಲ್ಲಿ ಮಳೆ ತಗ್ಗಿದ್ದು, ಗುಡುಗು ಮತ್ತು ಸಿಡಿಲು ಹೆಚ್ಚಾಗಿ ಇರಲಿದೆ. ಕೆಲವು ಜಿಲ್ಲೆಗಳಲ್ಲೇ ಮೇ 22 ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ ಗೃಹಲಕ್ಷ್ಮೀ ಯೋಜನೆೆಯ 7 ನೇ ಕಂತಿನ ಹಣ ಈ ಮಹಿಳೆಯರಿಗೆ ಜಮೆ
ತೌಕ್ತೆ ಚಂಡಮಾರುತದ ಪರಿಣಾಮವಾಗಿ ಬೆಂಗಳೂರಿನ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಸೋಮವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆ ಧಾರಾಕಾರ ಮಳೆಯಾಯಿತು. ಮೇ 21ರವರೆಗೆ ಬೆಂಗಳೂರನಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ:
ಚಂಡಮಾರುತ ಪರಿಣಾಮ ಕರಾವಳಿಯಲ್ಲಿ ಗರಿಷ್ಠ 5.0 ಮೀಟರ್ ಗಳಷ್ಟು ಎತ್ತರದ ಅಲೆಗಳು ಏಳುತ್ತಿದೆ, ವೇಗವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಮೇ 19 ರ ವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ.
ಚಂಡಮಾರುತ ಸಂದರ್ಭದಲ್ಲಿ ಮಳೆಯ ಪ್ರಮಾಣ ಹೆಚ್ಚಿರುತ್ತದೆ. ಇದರೊಂದಿಗೆ ಗಾಳಿಯ ವೇಗವೂ ಹೆಚ್ಚಿರುತ್ತದೆ. ಗಾಳಿ ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಬೀಸುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಗಾಳಿಯ ವೇಗ ಹೆೆೆೆೆೆೆಚ್ಚಿರುವುದರಿಂದ ವಯೋವೃದ್ಧರು, ಮಕ್ಕಳು, ಬಾಲಕರು ಮನೆಯ ಹೊರಗಡೆ ಬರಬಾರದು. ಗುಡುಗು ಸಿಡಿಲಿನ ಆರ್ಭಟ ಇರುವಾಗ ಮನೆಯಲ್ಲಿರುವ ಎಲ್ಲಾ ಸ್ವಿಚ್ ಆಪ್ ಮಾಡಬೇಕು. ಟಿ. ವಿ ಫ್ಯಾನ್ ಬಂದ್ ಮಾಡಿರಬೇಕು. ಮನೆಯ ಹೊರಗಡೆ ಅಂದರೆ ಕಿಡಿಕಿ ಬಾಗಿಲು ಬಳಿ ಬಂದು ಇಣುಕಿ ನೋಡಬಾರದು. ಕಬ್ಬಿಣದ ಸಾಮಾನಗಳು ಹಿಡಿಯಬಾರದು.
ರೈತರು, ಕುರಿಗಾಹಿಗಳು ಮನೆಯ ಹೊರಗಡೆ ಇದ್ದಾಗ ಸಿಡಿಲು ಗುಡುಗು ಇದ್ದಾಗ ಮರಗಳ ಕೆಳಗಡೆ ನಿಲ್ಲಬಾರದು. ತಗ್ಗುಪ್ರದೇಶಗಳಲ್ಲಿ ಇರಬೇಕು.
ಸಮುದ್ರದ ಅಲೆಗಳ ಆರ್ಭಟ ಹೆೆೆೆೆೆೆೆೆೆೆೆೆಚ್ಚಿರುತ್ತದೆ. ಆಗ ಸಮುದ್ರದ ತೀರದಲ್ಲಿ ಮೋಜಿಗಾಗಿ ಹೋಗುವ ಕೆಲಸ ಮಾಡಬಾರದು. ಸಮುದ್ರದ ಅಲೆಗಳಿಗೆ ಕೊಚ್ಚಿಹೋಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮೀನುಗಾರರು ಮೀನು ಹಿಡಿಯಲು ಇಳಿಯಬಾರದು. ಮೀನುಗಾರಿಕೆ ಕೆಲಸವನ್ನು ನಿಲ್ಲಿಸಿ ವಿಶ್ರಾಂತಿ ಪಡೆಯಬಹುದು. ಮೀನುಗಾರರಿಗೆ ಅಪಾಯ ಹೆಚ್ಚಿರುವುದರಿಂದ ಸಮುದ್ರದಲ್ಲಿ ಇಳಿಯಬಾರದು.
ಚಂಡಮಾರುತದ ಪರಿಣಾಮದಿಂದಾಗಿ ಮಳೆಯ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ಕೃಷಿ ಚಟುವಟಿಕೆ ಮಳೆಯ ಪ್ರಮಾಣ ನೋಡಿ ಮುಂದುವರೆಸಬೇಕು.