Today also rain alert : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಹಾಗಾದರೆ ಯಾವ ಯಾವ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ ಮಳೆ ನಿಮ್ಮೂರಲ್ಲಿ ಬರುತ್ತೋ ಇಲ್ಲವೋ ಯಾವ ನಂಬರಿಗೆ ಕರೆ ಮಾಡಬೇಕು ಎಂಬುದರ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.
ರಾಜ್ಯದ ಕೆಲವೆಡೆ ಗುರುವಾ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರೊಂದಿಗೆ ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದ.
ಬೀದರ್, ಕಲಬುರಗಿ, ಗದಗ, ವಿಜಯಪುರ, ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಈ ಜಿಲ್ಲೆಗಳಿಗೆ ಯೆಲ್ಲೋ ಎಚ್ಚರಿಕೆ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಒಂದೆರಡು ಕಡೆ ಗುಡುಗು ಸಹಿತಿ ಭಾರಿ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾದ್ಯತೆಯಿದೆ ಇದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ.
ಕರಾವಳಿಯ ದಕ್ಷಿಣ ಕನ್ನಡದ ಒಂದೆರಡು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಒಂದೆರಡು ಕಡೆ ಸಾಧಾರಣ ಮಳೆಯಾಗುವ ಸಂಭವವಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ಬುಧವಾರ ಎಲ್ಲೆಲ್ಲಿ ಮಳೆಯಾಗಿದೆ
ಬುಧವಾರ ಬೆಳಗ್ಗೆ 8.30 ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಮಳೆಯಾಗಿದೆ. ಚಾಮರಾಜನಗರದ ಬಂಡೀಪುರದಲ್ಲಿ 3 ಸೆಂ.ಮೀ ಮಳೆಯಾಗಿದೆ. ಅದೇ ರೀತಿ ಉತ್ತರ ಕನ್ನಡದ ಯಲ್ಲಾಪುರ, ಮೈಸೂರಿನ ಸುತ್ತೂರು ಹಾಗೂ ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರ ಸೇರಿ ಕೆಲವೆಡೆ 1 ಸೆಂ.ಮೀ ಹಾಗೂ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Today also rain alert ನಿಮ್ಮೂರಿನ ಮಳೆಯ ಮಾಹಿತಿ ಬೇಕೆ?
ನಿಮ್ಮೂರಿನಲ್ಲಿ ಮಳೆಯಾಗುವ ಬರುತ್ತದೆ ಎಂಬ ಮಾಹಿತಿ ಬೇಕೆ? ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿದರೆ ಸಾಕು, ನಿಮಗೆ ಮಳೆಯ ಮಾಹಿತಿ ದೊರೆಯಲಿದೆ. ಮುಂದಿನ ದಿನಗಳಲ್ಲಿ ಮಳೆ ಯಾವಾಗ ಬರುತ್ತದೆ ಎಂಬುದನ್ನು ಸಹ ತಿಳಿದುಕೊಳ್ಳಬಹುದು.
Today also rain alert ಐದು ದಿನ ಮೊದಲೇ ಮಳೆಯ ಮಾಹಿತಿ ಇಲ್ಲಿ ಪಡೆಯಿರಿ
ಮೇಘದೂತ್ ಆ್ಯಪ್ ಮೂಲಕ ರೈತರು ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ. ಮಳೆಯ ಮಾಹಿತಿ ಪಡೆಯಲು ಈ
https://play.google.com/store/apps/details?id=com.aas.meghdoot&hl=en_IN&gl=US&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ SSLC ಮಾದರಿ ಉತ್ತರ ಪತ್ರಿಕೆ ಬಿಡುಗಡೆ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ
ಆಗ ನಿಮಗೆ ನಿಖರವಾದ ಬೆಳೆ ಸಲಹೆ ಪಡೆಯಿರಿ ಎಂಬ ಸಂದೇಶ ಕಾಣಿಸುತ್ತದೆ. ಅದರ ಕೆಳಗಡೆಯಿರುವ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿವಿಧ ಭಾಷೆಗಳಲ್ಲಿ ದಾದನಂತರ ಹವಾಮಾನ ಮುನ್ಸೂಚನೆ ಎಂಬ ಸಂದೇಶ ಕಾಣಿಸುತ್ತದೆ.
ಈ ಆಪ್ ನಿಮ್ಮ ಮೊಬೈಲ್ ನಲ್ಲಿದ್ದರೆ ಸಾಕು, ನೀವು ಯಾವುದೇ ಕ್ಷಣದಲ್ಲಿ ಮಳೆಯ ಮಾಹಿತಿಯನ್ನು ಪಡೆಯಬಹುದು. ಇದಕ್ಕೆ ಯಾರ ಸಹಾಯವೂ ಬೇಕಿಲ್ಲ. ಎಲ್ಲವೂ ಉಚಿತವಾಗಿ ಮಾಹಿತಿ ಸಿಗಲಿದೆ.





