ಇಂದು ಈ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ಜಮೆಯಾಯಿತು

Written by Ramlinganna

Published on:

Gruhalakshmi 26th installment credited : ಮಹಿಳೆಯರಿಗೆ ಗುಡ್ ನ್ಯೂಸ್, ಗೃಹಲಕ್ಷ್ಮೀ ಹಣ ಬಿಡುಗಡೆ ನಿಮ್ಮ ಖಾತೆಗೆ ಜಮೆಯಾಯಿತೇ ಹೀಗೆ ಚೆಕ್ ಮಾಡಿ

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ಏನಪಾ ಅಂದ್ರೆ, ಇಂದು ಗೃಹಲಕ್ಷ್ಮೀ ಯೋಜನೆಯ 26ನೇ ಕಂತಿನ ಹಣ ಜಮೆಯಾಯಿತು.  ಹೌದು, ಕಲಬುರಗಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 26ನೇ ಕಂತಿನ ಹಣ ಜಮೆಯಾಯಿಗಿದೆ. ನಿಮ್ಮ ಖಾತೆಗೆ ಹಣ ಜಮೆಯಾಯಿತೋ ಇಲ್ಲವೋ ಹಾಗೂ ಜಮೆಯಾಗದಿದ್ದರೆ ಯಾರಿಗೆ ಕರೆ ಮಾಡಬೇಕು ಹಾಗೂ ಜಮೆ ಮಾಡುವುದನ್ನು ತಡೆದಿದ್ದರೆ ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂಬುದನ್ನು ಫಲಾನುಭವಿಗಳು ತಮ್ಮ ಬಳಿ ಇರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

Gruhalakshmi 26th installment credited ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗದಿದ್ದರೆ ಯಾರಿಗೆ ಕರೆ ಮಾಡಬೇಕು?

ಗೃಹಲಕ್ಷ್ಮೀ ಯೋಜನೆಯ 26ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವಾದರೆ ಕೂಡಲೇ ನೀವು 181 ನಂಬರಿಗೆ ಕರೆ ಮಾಡಬಹುದು.ಈ ಉಚಿತ ಸಹಾಯವಾಣಿ ನಂಬರಿಗೆ ಕರೆ ಮಾಡಿದರೆ ಸಾಕು ನಿಮ್ಮ ಖಾತೆಗೆ ಯಾವಾಗ ಜಮೆಯಾಗುತ್ತದೆ ಯಾವ ಕಾರಣಕ್ಕಾಗಿ ಹಣ ಜಮೆ ಮಾಡುವುದನ್ನು ತಡಿಹಿಡಿಯಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ? ಹೀಗೆ ಚೆಕ್ ಮಾಡಿ

ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯ ಸ್ಟೇಟಸ್  ಚೆಕ್ ಮಾಡಲು ಈ

https://play.google.com/store/apps/details?id=com.dbtkarnataka&hl=en_IN

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆದ ನಿಮಗೆ ಡಿಬಿಟಿ ಯಾಪ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಸಂಖ್ಯೆ ಬರುತ್ತದೆ. ಈ ಓಟಿಪಿ ಸಂಖ್ಯೆನ್ನು ನಮೂದಿಸಿದ ನಂತರ ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಗೃಹಲಕ್ಷ್ಮೀ ಬಟನ್ ಒತ್ತಿದರೆ ಸಾಕು ನಿಮ್ಮ ಖಾತೆಗೆ  ಇಲ್ಲಿಯವರೆಗೆ ಗೃಹಲಕ್ಷ್ಮೀ ಯೋಜನೆಯಿಂದ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಸಿಗುತ್ತದೆ.

ಇಲ್ಲಿಯವರೆಗೆ ನಿಮಗೆಷ್ಟು ಕಂತುಗಳು ಬಂದಿವೆ? ಎಷ್ಟು ಹಣ ಜಮೆಯಾಗಿದೆ?

ಗೃಹಲಕ್ಷ್ಮೀ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಫಲಾನುಭವಿಗಳ ಖಾತೆಗೆ ಒಟ್ಟು 26 ಕಂತುಗಳ ಹಣ ಜಮೆಯಾಗಿದೆ.

ಇದನ್ನೂ ಓದಿ SSLC ಮಾದರಿ ಉತ್ತರ ಪತ್ರಿಕೆ ಬಿಡುಗಡೆ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ

ಹೌದು, 26 ಕಂತುಗಳು ಒಟ್ಟು ಹಣ 54 ಸಾವಿರ ರೂಪಾಯಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ.

ಗೃಹಲಕ್ಷ್ಮೀ ಹಣ ಪಡೆಯಲು ಹೊಸ ರೂಲ್ಸ್

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಪಡೆಯಲು ಈಘ ಜೀವತ ಪ್ರಮಾಣ ಪತ್ರ ಸಲ್ಲಿಸಬೇಕೆಂದು ತಿಳಿಸಲಾಗುತ್ತಿದೆ. ಹೌದು, ಮಹಿಳೆಯರು ಜೀವತ ಪ್ರಮಾಣ ಪತ್ರ ಸಲ್ಲಿಸಿದರೆ ಮಾತ್ರ ಮುಂದಿನ ಕಂತು ಜಮೆಯಾಗಲಿದೆ.

ಗೃಹಲಕ್ಷ್ಮೀ ಹಣ ಕೆಲವರಿಗೇಕೆ ಜಮೆಯಾಗುತ್ತಿಲ್ಲ?

ಗೃಹಲಕ್ಷ್ಮೀ ಯೋಜನೆಯ ಹಣ ಖಾತೆಗೆ ಜಮೆಯಾಗಬೇಕಾದರೆ ಅರ್ಹತೆ ಪಡೆದಿರಬೇಕು. ಅಂದರೆ ಮಹಿಳೆಯ ಹೆಸರು ರೇಶನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಎಂದು ನಮೂದಾಗಿರಬೇಕು. ಇದರೊಂದಿಗೆ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಹಣ ಜಮೆಯಾಗಲಿದೆ. ಕುಟುಂಬದ ಮಹಿಳೆಯರು ಸರ್ಕಾರಿ ನೌಕರಿಯಲ್ಲಿರಬಾರದು. ಮಹಿಳೆಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ಹಾಗೂ ಹಾಗೂ ಆಧಾರ್ ಕಾರ್ಡ್ ನಲ್ಲಿ ಹೆಸರು ಒಂದೇ ರೀತಿಯಾಗಿರಬೇಕು. ಸ್ವಲ್ಪವೂ ವ್ಯತ್ಯಾಸವಿದ್ದರೂ ಹಣ ಜಮೆಯಾಗುವುದಿಲ್ಲ.

Leave a Comment