Gruhalakshmi status ಗೃಹಲಕ್ಷ್ಮೀ ಹಣ ನಿಮಗೆಷ್ಟು ಕಂತು ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ

Written by Ramlinganna

Published on:

Gruhalakshmi status : ಗೃಹಲಕ್ಷ್ಮೀ ಯೋಜನೆ, ಪಿಎಂ ಕಿಸಾನ್, ಬೆಳೆ ಪರಿಹಾರ, ಬೆಳೆ ವಿಮೆ ಸೇರಿದಂತೆ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳು ನಿಮ್ಮ ಖಾತೆಗೆ ಜಮೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ರೈತರು, ಫಲಾನುಭವಿಗಳು ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದು.

ಹೌದು, ಮಿತ್ರರೆ, ಸರ್ಕಾರವು ಜಾರಿಗೆ ತಂದ ವಿವಿಧ ಯೋಜನೆಗಳ ಸೌಲಭ್ಯ ನಿಮಗೆ ಸಿಗುತ್ತಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ನೀವು ಈಗ ಯಾರ ಬಳಿಯೂ ಹೋಗಿ ನಿಂತುಕೊಳ್ಳಬೇಕಿಲ್ಲ. ಕಚೇರಿಗಳಿಗೂ ಅಲೆದಾಡಬೇಕಿಲ್ಲ, ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ  ಇಲ್ಲಿ ತಿಳಿಸಿದ ಮಾಹಿತಿ ಪ್ರಕಾರ ಅತೀ ಸುಲಭವಾಗಿ ಸ್ಟೇಟಸ್ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

Gruhalakshmi status ಗೃಹಲಕ್ಷ್ಮೀ ಯೋಜನೆಯ ಸ್ಟೇಟಸ್ ಹೀಗೆ ಚೆಕ್ ಮಾಡಿ

ಗೃಹಲಕ್ಷ್ಮೀ ಯೋಜನೆಯ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳು ನಿಮಗೆ ಸಿಗುತ್ತಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://play.google.com/store/apps/details?id=com.dbtkarnataka&hl=en_IN&pli=1

ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಡಿಬಿಟಿ ಯಾಪ್ ಓಪನ್ ಆಗುತ್ತದೆ. ಅಲ್ಲಿ ನೀವು install ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ನಂತರ ನೀವು ನೀಡಿದ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿ ಲಾಗಿನ್ ಆಗಬೇಕು. ನಂತರ ನೀವು ಸರ್ಕಾರದ ವಿವಿಧ ಯೋಜನೆಗಳಿಂದ ನಿಮಗೆ ಹಣ ಜಮೆಯಾಗಿರುವ ಸ್ಥಿತಿಯನ್ನು (ಸ್ಟೇಟಸನ್ನು) ಚೆಕ್ ಮಾಡಬಹುದು.

ಗೃಹಲಕ್ಷ್ಮೀ ಯೋಜನೆಯಿಂದ ಇಲ್ಲಿಯವರೆಗೆ ಒಟ್ಟು 21 ಕಂತುಗಳು ಹಣ ಬಿಡುಗಡೆಯಾಗಿದೆ. ಅಂದರೆ 44 ಸಾವಿರ ರೂಪಾಯಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ.ಈ ಹಣ ನಿಮಗೆ ಜಮೆಯಾಗಿದೆಯೋ ಇಲ್ಲವೋ ಇದರೊಂದಿಗೆ ಇಲ್ಲಿಯವರೆಗೆ ಎಷ್ಟು ಕಂತುಗಳ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ಇದನ್ನೂ ಓದಿ : ರೈತರಿಗೆ ಗುಡ್ ನ್ಯೂಸ್ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯಡಿ ತಿಂಗಳಿಗೆ 3 ಸಾವಿರ ಪೆನ್ಶನ್ ಸಿಗಲಿದೆ ಇಲ್ಲಿದೆ ಮಾಹಿತಿ

ಒಂದು ವೇಳೆ ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುವುದನ್ನು ತಡೆ ಹಿಡಿಯಲಾಗಿದ್ದರೆ ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂಬುದನ್ನು ನೀವು ವಿಚಾರಿಸಬಹುದು.

ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗದಿದ್ದರೆ ಏನು ಮಾಡಬೇಕು?

ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆಯಾಗುತ್ತಿಲ್ಲವಾದರೆ ನೀವು ಸ್ಥಳೀಯ ಸಿಡಿಪಿಒ ಕಚೇರಿಗೆ ಭೇಟಿ ನೀಡಬೇಕು. ಅಲ್ಲಿ ಹೋಗುವಾಗ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಶನ್ ಕಾರ್ಡ್, ಆಧಾರ್ ಲಿಂಕ್ ಮಾಡಿದ ಮೊಬೈಲ್ ನಂಬರ್ ತೆಗದುಕೊಂಡು ಹೋಗಬೇಕಾಗುತ್ತದೆ. ಒಂದು ವೇಳೆ ಎನ್.ಪಿ.ಸಿ.ಐ ಫೇಲಿಯರ್ ಅಥವಾ ಇಕೆವೈಸಿ ಫೆಲಿಯರ್ ಆಗಿದ್ದರೆ ಮಾತ್ರ ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುತ್ತಿಲ್ಲ. ಅಥವಾ ನೀವು ಗೃಹಲಕ್ಷ್ಮೀ ಯೋಜನೆಗೆ ಅರ್ಹತೆ ಪಡೆಯಿದಿದ್ದರೂ ಸಹ ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ 08022279954, 8792662814 ಅಥವಾ 8792662816 ಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ವಿಚಾರಿಸಿಕೊಳ್ಳಬಹುದು.

ನೀವು ಗೃಹಲಕ್ಷ್ಮೀ ಯೋಜನೆಗೆ ಅರ್ಹತೆ ಪಡೆದಿದ್ದೀರೋ ಇಲ್ಲವೋ ಚೆಕ್ ಮಾಡಿಕೊಳ್ಳಿ

ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆಯಬೇಕಾದರೆ ನೀವು ಆ ಯೋಜನೆಗೆ ಅರ್ಹತೆ ಪಡೆದಿದ್ದಿರೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಹೌದು, ಈ ಯೋಜನೆ ಸೌಲಭ್ಯ ಪಡೆಯಬೇಕಾದರೆ ನಿಮ್ಮಲ್ಲಿ ಬಿಪಿಎಲ್ ಕಾರ್ಡ್ ಇರಬೇಕು.ನಿಮ್ಮ ಕುಟುಂಬದಲ್ಲಿ ಯಾರಿಗೂ ಸರ್ಕಾರಿ ನೌಕರಿ ಇರಬಾರದು. ಇದರೊಂದಿಗೆ ನಿಮ್ಮ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್ ನಲ್ಲಿ ಒಂದೇ ರೀತಿ ಹೆಸರು ಇರಬೇಕು. ಹೆಸರು ವ್ಯತ್ಯಾಸವಿದ್ದರೆ ಸರ್ಕಾರದ ಸೌಲಭ್ಯ ಜಮಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.

Leave a Comment