weather forecast three days rain alert ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮೂರು ದಿನಗಳಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು ಹಾಗೂ ಮೈಸೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡಿನಲ್ಲಿ ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು ಗ್ರಾಮಾಂತರ,ಮೈಸೂರು ಹಾಗೂ ಮಂಡ್ಯದಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಂಭವವಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ ಈ ಪಟ್ಟಿಯಲ್ಲಿದ್ದವರಿಗೆ ಮಾತ್ರ ಬರಗಾಲ ಹಣ ಜಮೆ- ಹೆಸರು ಇಲ್ಲೇ ಚೆಕ್ ಮಾಡಿ
weather forecast three days rain alert ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಗೆ
ಕರೆ ಮಾಡಿದರೆ ಸಾಕು, ನಿಮ್ಮೂರಿನ ಸುತ್ತಮುತ್ತ ಮಳೆಯಾಗುತ್ತೋ ಇಲ್ಲವೋ? ಮುಂದೆ ಮಳೆ ಯಾವಾಗ ಆಗುತ್ತದೆ ಎಂಬ ಮಾಹಿತಿ ಪಡೆಯಬಹುದು.ಇದರೊಂದಿಗೆ ಗಾಳಿಯ ವೇಗ, ಗಾಳಿ ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಬೀಸುತ್ತದೆ ಎಂಬ ಮಾಹಿತಿಯನ್ನು ಸಹ ರೈತರು ಮೊಬೈಲ್ ನಲ್ಲೇ ಪಡೆಯಬಹುದು. ಇದಕ್ಕಾಗಿ ರೈತರು ಯಾವ ಶುಲ್ಕವನ್ನು ನೀಡಬೇಕಾಗಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ. ಈ ಉಚಿತ ಸಹಾಯವಾಣಿ ನಂಬರ್ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ರೈತರು ತಮಗೆ ಅನುಕೂಲವಾದಾಗ ಕರೆ ಮಾಡಿ ಮಳೆಯ ಮಾಹಿತಿಯನ್ನು ಪಡೆಯಬಹುದು.
ಗುಡುಗು ಸಿಡಿಲಿನ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯುವುದು ಹೇಗೆ?
ರೈತರು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಡಿಲು ಬೀಳುವ ಮೊದಲೇ ಮಾಹಿತಿಯನ್ನು ಪಡೆಯಬಹುದು. ಹೌದು, ರೈತರು ದಾಮಿನಿ ಆ್ಯಪ್ ಮೊಬೈಲ್ ನಲ್ಲೇ ಇನಸ್ಟಾಲ್ ಮಾಡಿಕೊಂಡರೆ ಸಾಕು, ಐದು ನಿಮಿಷ ಮೊದಲೇ ಸಿಡಿಲಿನ ಮಾಹಿತಿಯನ್ನು ಪಡೆಯಬಹುದು. ಈ ಆ್ಯಪ್. ಎಲ್ಲೆಲ್ಲಿ ಮಳೆ, ಗುಡುಗು, ಸಿಡಿಲು ಬಡಿಯಲಿದೆ ಎನ್ನುವ ಸೂಚನೆ ನೀಡಲಿದೆ ಈ ಮಾಹಿತಿ ಆಧರಿಸಿ ರೈತರು ಸುರಕ್ಷಿತ ಸ್ಥಳಗಳಿಗೆ ತಲುಪಬಹುದು. ಹಾಗಾದರೆ ಸಿಡಿಲಿನ ಮಾಹಿತಿ ಹೇಗೆ ಪಡೆಯಬಹುದು.
ಸಿಡಿಲಿನ ಮಾಹಿತಿ ಐದು ನಿಮಿಷ ಮೊದಲೇ ಪಡೆಯಲು ಈ
https://play.google.com/store/apps/details?id=com.lightening.live.damini
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ದಾಮಿನಿ ಆ್ಯಪ್ ಓಪನ್ ಆಗುತ್ತದೆ. ರೈತರು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ರೈತರ ಮೊಬೈಲ್ ನಲ್ಲಿ ದಾಮಿನಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರಿ ಮೇಲೆ ಕ್ಲಿಕ್ ಮಾಡಬೇಕು.
ಆಗ ನೀವು ಸಕ್ರಿಯಗೊಳಿಸಿದರೆ ಜಿಪಿಎಸ್ ಎಂಬ ಸಂದೇಶ ಕಾಣಿಸುತ್ತದೆ. ಜಿಪಿಎಸ್ ಆನ್ ಇದ್ದರೆ ಸಿಡಿಲಿನ ಸ್ಥಳ ಗುರುತಿಸಲು ಸುಲಭವಾಗುತ್ತದೆ. ಇದಕ್ಕೆ ನಾನು ಒಪ್ಪುತ್ತೇನೆ ಬಾಕ್ಸ್ ಆಯ್ಕೆ ಮಾಡಿಕೊಂಡು ಜಿಪಿಎಸ್ ನ್ನು ಸಕ್ರಿಯಗೊಳಿಸಿ ಮೇಲೆ ಕ್ಲಿಕ್ ಮಾಡಬೇಕು. ನಂತರ ವೈಲ್ ಯೂಸಿಂಗ್ ದಿ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ ಒಂದು ಸರ್ಕಲ್ ಕಾಣಿಸುತ್ತದೆ. ಅಲ್ಲಿಎ ಷ್ಟು ನಿಮಿಷದೊಳಗೆ ನೀವು ಇರುವ ಸುತ್ತಮತ್ತಲಿನ ಪ್ರದೇಶದ ಎಲ್ಲೆಲ್ಲಿ ಸಿಡಿಲು ಬೀಳುವ ಸಾಧ್ಯತೆ ಎಂಬುದು ಕಾಣಿಸುತ್ತದೆ. ಕೆಳಗಡೆ ನಿಮಿಷ ಕಾಣಿಸುತ್ತದೆ. ಅದಕ್ಕೆ ಬಣ್ಣವನ್ನು ಸಹ ಗುರುತಿಸಲಾಗಿರುತ್ತದೆ. ಆ ಆಧಾರದ ಮೇಲೆ 7 ನಿಮಿಷದೊಳಗೆ ಎಲ್ಲೆಲ್ಲಿ 14 ನಿಮಿಷದೊಳಗೆ ಎಲ್ಲೆಲ್ಲಿ ಹಾಗೂ 21 ನಿಮಿಷದೊಳಗೆ ಎಲ್ಲೆಲ್ಲಿ ಸಿಡಿಲು ಬೀಳುತ್ತವೆ ಎಂಬ ಮಾಹಿತಿ ಕಾಣಿಸುತ್ತದೆ.