Operation sindoor : ಹೆಣ್ಣಿನ ಸಿಂಧೂರ ಮುಟ್ಟಿದವರು ಪೂರಾಣದಲ್ಲಿಯೂ ಉಳಿದಿಲ್ಲ. ಈಗಲೂ ಉಳಿಯವುದಿಲ್ಲವೆಂಬುದನ್ನು ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಎಚ್ಚರಿಕೆ ನೀಡಿದೆ.
ಹೌದು ಮಿತ್ರರೆ, ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ‘ಆಪರೇಷನ್ ಸಿಂಧೂರ’ ನಡೆಸಿ ಸೇಡು ತೀರಿಸಿಕೊಂಡಿದೆ. ತಮಗೆಲ್ಲಾ ಗೊತ್ತಿದ್ದ ಹಾಗೆ ಏಪ್ರೀಲ್ 22 ರಂದು ಉಗ್ರರ ಗುಂಪು ಪಹಲ್ಗಾಂ ನಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು.
Operation sindoor ಏನಿದು ಆಪರೇಶನ್ ಸಿಂಧು?
ಧರ್ಮ ಯಾವುದು ಎಂದು ಕೇಳಿ ಗುಂಡು ಹಾರಿಸಿ ಹಿಂದೂ ಮಹಿಳೆಯರ ಕುಂಕುಮವನ್ನು ಅಳಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತದ ಸೇನೆ ಪಾಕಿಸ್ತಾನದ 9 ಕಡೆ ಉಗ್ರರ ನೆಲೆಗಳ (Terrorist Hideouts) ಮೇಲೆ ವಾಯು ದಾಳಿ ನಡೆಸಿದ್ದುಈ ದಾಳಿಗೆ (Operation Sindoor) ಎಂದು ಹೆಸರಿಡಲಾಗಿದೆ.
ಇದು ಪಹಲ್ಗಾಂ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಮಹಿಳೆಯರ ಕುಂಕುಮ ಅಳಿಸಿದವರ ಮೇಲೆ ತೀರಿಸಿಕೊಂಡ ಪ್ರತಿಕಾರವಾಗಿದೆ. ಭಾರತದಲ್ಲಿ ಹೆಣ್ಣನ್ನು ದೇವಿ ರೂಪದಲ್ಲಿ ಪೂಜೆ ಮಾಡಲಾಗುತ್ತದೆ.
ಅಂತವರ ಮುತ್ತೈದೆ ಭಾಗ್ಯವನ್ನು ಕಿತ್ತುಕೊಂಡಿದ್ದು ಸಾಮಾನ್ಯ ವಿಷಯವಲ್ಲ. ನಮ್ಮ ಇತಿಹಾಸ ಪುಟ ತಿರುವಿ ನೋಡಿದರೂ ಕೂಡ ಹೆಣ್ಣಿನ ಕಣ್ಣೀರಿನ ಮುಂದೆ ಯಾರೂ ಗೆದ್ದಿಲ್ಲ. ಹೆಣ್ಣಿನ ಶಕ್ತಿಯೇ ಅಂತದ್ದು. ಅದರಲ್ಲಿ ಅವರ ಸೌಭಾಗ್ಯವನ್ನು ಅವರ ಮುಂದೆಯೇ ಕಿತ್ತುಕೊಂಡವರನ್ನು ಬಿಟ್ಟಿತೇ? ಭಾರತೀಯ ನಾರಿಗೆ ಸಿಂಧೂರ ಅಥವಾ ಕುಂಕುಮ ಕೇವಲ ಹಣೆ ಮೇಲಿಡುವ ಬಣ್ಣವಲ್ಲ.
ಅದು ಆಕೆಯ ಶಕ್ತಿ. ಮದುವೆಯ ಸಮಯದಲ್ಲಿ ಇಟ್ಟ ಸಿಂಧೂರ ಕೊನೆಯವರೆಗೂ ಅವಳೊಂದಿಗೆ ಇರಬೇಕು ಎಂಬುದು ಪದ್ಧತಿ ಸಿಂಧೂರ ಸ್ತ್ರೀ ಶಕ್ತಿಯ ಸಂಕೇತ. ಬೆಂಕಿ, ರಕ್ತ ಮತ್ತು ಶಕ್ತಿಯ ಬಣ್ಣ, ಆಕೆಯನ್ನು ಶಕ್ತಿ ಸ್ವರೂಪಿಯಾಗಿ ಗೌರವಿಸಬೇಕು ಎಂಬುದರ ಸಂಕೇತ. ಅವಳನ್ನು ಕೆಣಕಿದರೆ ತನ್ನ ತಾಯ್ನಾಡನ್ನು ರಕ್ಷಿಸಲು ಬೆಂಕಿಯ ಕಿಡಿಯಾಗಬಹುದು ಎಂಬುದು ಇಂದಿನ ದಾಳಿಯೇ ಸಾಕ್ಷಿಯಾಗಿದೆ. ಹಿಂದೂ ಪುರಾಣಗಳಲ್ಲಿ, ಸಿಂಧೂರವು ಅಗಾಧವಾದ ಸಂಕೇತಗಳನ್ನು ಹೊಂದಿದೆ. ದಂತಕಥೆಗಳ ಪ್ರಕಾರ, ಮುತ್ತೈದೆಯರು ತಮ್ಮ ಹಣೆಯ ಮೇಲೆ ಯಾವಾಗಲೂ ಸಿಂಧೂರವಿಡುತ್ತಿದ್ದರು ಎಂಬ ನಂಬಿಕೆ ಇದೆ. ಈ ಕ್ರಮ ಗಂಡನ ಆಯುಷ್ಯ, ಆರೋಗ್ಯವನ್ನು ಹೆಚ್ಚಿಸುವುದರ ಸಂಕೇತವಾಗಿದೆ. ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂಬುದರ ಪ್ರತೀಕವಾಗಿದೆ.
ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ
ಸೀತೆಯನ್ನು ಅಪಹರಿಸಿದ ರಾವಣನಿಗೆ, ದ್ರೌಪದಿಯ ಸೀರೆ ಎಳೆದ ದುಶ್ಯಾಸನಿಗೆ ಕ್ಷಣಿಕ ಜಯ ಸಿಕ್ಕರೂ ಸಹ ಊಹೆಗೂ ನಿಲುಕದ ಸೋಲು ಪ್ರಾಪ್ತವಾಗಿತ್ತು. ಇದೇ ರೀತಿ ಕಲಿಯುಗದಲ್ಲಿಯೂ ಹೆಣ್ಣಿಗೆ ಅನ್ಯಾಯವಾಗಿದೆ. ಹಿಂದೆ ಹೆಣ್ಣಿಗೆ ಅವಮಾನ ಮಾಡಿಯೇ ಉಳಿದಿಲ್ಲ ಎಂದ ಮೇಲೆ ಹೆಣ್ಣಿನ ಸೌಭಾಗ್ಯವನ್ನೇ ಕಿತ್ತುಕೊಂದವರು ಉಳಿಯುತ್ತಾರೆಯೇ.
ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯ ಹದಿನೈದು ದಿನಗಳ ನಂತರ, ಮಂಗಳವಾರ-ಬುಧವಾರದ ಮಧ್ಯರಾತ್ರಿ ಭಾರತವು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ವಿರುದ್ಧ ದಾಳಿ ಮಾಡಿ ಉಗ್ರರ ಅಡಗುತಾಣಗಳನ್ನು ನಾಶ ಮಾಡಿದೆ. ಪಹಲ್ಗಾಮ್‌ನಲ್ಲಿ 26 ಮಹಿಳೆಯರ ಸಿಂಧೂರ (ಕುಂಕುಮ ಭಾಗ್ಯ) ಅಳಿಸಿದ ಉಗ್ರರ ದಾಳಿಗೆ ಪ್ರತೀಕಾರ ಆಗಿದೆ. ಮತ್ತೊಂದು ಕಾಶ್ಮೀರ ಭಾರತದ ಮುಕುಟಮಣಿ, ಭಾರತದ ತಿಲಕವಿದ್ದಂತೆ ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಎಚ್ಚರಿಕೆಯ ದಾಳಿಯೂ ಇದಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಸಿಂಧೂರ ಅಳಿಸಿದ ಉಗ್ರರು ಮತ್ತು ಪಾಕ್ ವಿರುದ್ಧ ಕೈಗೊಂಡ ಅತೀ ದೊಡ್ಡ ಮಿಲಿಟರಿ ಕಾರ್ಯಾಚರಣೆಯೇ ಈ ‘ಆಪರೇಷನ್ ಸಿಂಧೂರ್’ ಆಗಿದೆ. ಭಾರತೀಯ ಸೇನೆ ಪ್ರತೀಕಾರದ ದಾಳಿ ಬಳಿಕ ಪಾಕಿಸ್ತಾನಿಯರು ʻಸಿಂಧೂರʼದ ಬಗ್ಗೆ ತಿಳಿದುಕೊಳ್ಳಲು ಗೂಗಲ್‌ನಲ್ಲಿ ʻಆಪರೇಷನ್ ಸಿಂಧೂರ್ʼ ಬಗ್ಗೆ ಹುಡುಕಾಡುತ್ತಿದ್ದಾರಂತೆ. ಆಪರೇಷನ್ ಸಿಂಧೂರ್, ಇಂಡಿಯಾ ಆಪರೇಷನ್ ಸಿಂಧೂರ್, ಸಿಂಧೂರ್ ಅಟ್ಯಾಕ್, ವಾಟ್ ಈಸ್ ಆಪರೇಷನ್ ಸಿಂಧೂರ್ ಮುಂತಾದ ಪದಗಳನ್ನು ಸರ್ಚಿಂಗ್ ಮಾಡುತ್ತಿದ್ದಾರಂತೆ.