Karnataka land Survey sketch : ರೈತರು ಈಗ ಮನೆಯಲ್ಲಿಯೇ ಕುಳಿತು ತಮ್ಮ ಜಮೀನುಗಳ ಸ್ಕೆಚ್ ನ್ನು ಮೊಬೈಲ್ ನಲ್ಲೇ ಪಡೆಯಬಹುದು.
ಇಂತಹ ಮಾಹಿತಿ ಪಡೆಯಲು ನಮ್ಮ ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ
ಹಿಂದೆ ಜಮೀನುಗಳ ಸ್ಕೆಚ್ ಪಡೆಯಲು ತಹಶೀಲ್ದಾರ್ ಕಚೇರಿಗಳಿಗೆ ಹೋಗಬೇಕಿತ್ತು. ಈಗ ಎಲ್ಲಿಯೂ ಹೋಗಬೇಕಿಲ್ಲ. ಯಾರ ಬಳಿಯೂ ಕೈ ಕಟ್ಟಿ ಕುಳಿತುಕೊಳ್ಳಬೇಕಿಲ್ಲ.ನಿಮಗೆ ಸಮಯ ಸಿಕ್ಕಾಗಲೆಲ್ಲಾ ಮನೆಯಲ್ಲಿಯೇ ಜಮೀನಿನ ಸ್ಕೆಚ್ ನ್ನು ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.
Karnataka land Survey sketch ರೈತರು ತಮ್ಮ ಮೊಬೈಲ್ ನಲ್ಲಿ ಸರ್ವೆ ಸ್ಕೆಚ್ ಪಡೆಯುವುದು ಹೇಗೆ?
ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಜಮೀನಿನ ಸರ್ವೆ ಸ್ಕೆಚ್ ಪಡೆಯಲು ಈ
https://rdservices.karnataka.gov.in/service84/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಡಿಜಿಟೈಸ್ಡ್ ಸರ್ವೆ ಸ್ಕೆಚ್ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ಸರ್ವೆ ಸ್ಕೆಚ್ ಹೇಬೆ ಪಡೆಯಬಹುದು ಎಂಬುದರ ಕುರಿತು ಮಾಹಿತಿ ನೀಡಲಾಗಿರುತ್ತದೆ. ಅದನ್ನು ಸರಿಯಾಗಿ ಓದಿಕೊಂಡು ನೀವು ಅತೀ ಸುಲಭವಾಗಿ ಸರ್ವೆ ಸ್ಕೆಚ್ ಪಡೆಯಬಹುದು. ಆದರೂ ನಿಮಗೆ ಅನುಕೂಲವಾಗಲೆಂದು ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿ ನೀಡಲಾಗಿದೆ.
ತೆರೆದುಕೊಳ್ಳುವ ಪೇಜ್ ನಲ್ಲಿ ನೀವು ಗ್ರಾಮವನ್ನು ಆಯ್ಕೆ ಮಾಡಲು ಕ್ಲಕ್ ಮಾಡಿ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಯಾವ ಸರ್ವೆ ನಂಬರಿನ ಸ್ಕೆಚ್ ನೋಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಬೇಕು.
ಇದನ್ನೂ ಓದಿ : ಯಾವ ಯಾವ ಸರ್ವೆ ನಂಬರಿಗೆ FID ಲಿಂಕ್ ಆಗಿವೆ? ಇಲ್ಲೇ ಚೆಕ್ ಮಾಡಿ
ಸರ್ವೆ ನಂಬರ್ ಹಾಕಿದ ನಂತರ ಸರ್ನಾಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹಿಸ್ಸಾ ನಂಬರ್ ನಲ್ಲಿಯೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಮಾಲಿಕರ ವಿವರಗಳು ಕಾಣಿಸುತ್ತವೆ. ಅಂದರೆ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿಯಾವ ಯಾವ ಜಮೀನಿನ ಮಾಲಿಕರು ಇದ್ದಾರೆ ಎಂಬ ಹೆಸರುಗಳು ಕಾಣಿಸುತ್ತವೆ.
ಅದರ ಕೆಳಗಡೆ ನಿಮಗೆ ನೀವ ನಮೂದಿಸಿದ ಸರ್ವೆ ನಂಬರಿನ ಸ್ಕೆಚ್ ಕಾಣಿಸುತ್ತದೆ. ನೀವು ನಮೂದಿಸಿದ ಸರ್ವೆ ನಂಬರಿನ ಸ್ಕೆಚ್ ಕಾಣಿಸುತ್ತದೆ. ಜಮೀನಿನ ಮ್ಯಾಪ್ ಕಾಣಿಸುತ್ತದೆ. ಇದನ್ನು ನೀವು ವೀಕ್ಷಿಸಲು ಬಳಸಬಹದು.
ಗಮನಿಸಿ ಅಳತೆಗಳು ಸ್ಕೇಲ್ ಮಾಪನ ಅನುಗುಣವಾಗಿರುವುದಿಲ್ಲ.(ಎಲ್ಲಾ ಅಳತೆಗಳು ಮೀಟರಗಳಲ್ಲಿವೆ) ಇದು ವೀಕ್ಷಣೆಯ ಉದ್ದೇಶಕ್ಕಾಗಿ ಮಾತ್ರವೇ ಹೊರತು ಕಾನೂನು ಉದ್ದೇಶಕ್ಕಾಗಿ ಅಲ್ಲ. ಡಿಜಿಟೈಸ್ ಸ್ಕೆಚ್ ಅನ್ನು ಮುದ್ರಿಸಲು ಪ್ರಿಂಟ್ ಬಟನ್ ಬಳಸಿ ಪ್ರಿಂಟ್ ಪಡೆಯಬಹುದು.
ವಿವ್ ಸ್ಕೆಚ್ ಆನ್ ಮ್ಯಾಪ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮಗೆ ಮ್ಯಾಪ್ ಕಾಣಿಸುತ್ತದೆ. ಅದರ ಅಕ್ಕಪಕ್ಕದ ಸರ್ವೆ ನಂಬರ್ ಗಳು ಸಹ ಕಾಣಿಸುತ್ತವೆ.
ಭೂ ಸುರಕ್ಷಾ ಯೋಜನೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಭೂ ಸುರಕ್ಷಾ ಯೋಜನೆಯೂ ಒಂದಾಗಿದೆ. ಈ ಯೋಜನೆಯ ರಾಜ್ಯದಾದ್ಯಂತ ಲೋಕಾರ್ಪಣೆ ಆಗಿದೆ.
ಈ ಯೋಜನೆಗಳಡಿಯಲ್ಲಿ ಭೂ ದಾಖೆಲೆಗಳು ಡಿಜೀಟಲೀಕರಣ ಮಾಡಲಾಗುತ್ತದೆ. ಹಳೆಯ ದುಸ್ಥಿತಿಯಲ್ಲಿ ಇರುವ ಭೂ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸರಿಪಡಿಸುವುದೇ ಭೂ ಸುರಕ್ಷಾ ಯೋಜನೆ ಆಗಿದೆ. ದಾಖಲೆಗಳ ಕೊಠಡಿಯಲ್ಲಿ ಜನರಿಗೆಭೂ ದಾಖಲೆಗಳನ್ನುವಿತರಣೆ ಮಾಡುವ ಕೆಲಸ ಮಾಡಲಾಗುತ್ತದೆ.
ಏನಿದು ಭೂ ಸುರಕ್ಷಾ ಯೋಜನೆ?
ಹಳೆಯ ಶಿಥಿಲದಗೊಂಡ ದಾಖಲೆಗಳನ್ನು ಶಾಸ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು ನಕಲಿ ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟಲು ಮತ್ತು ಅವುಗಳನ್ನು ಆನ್ಲೈನ್ ನಲ್ಲಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭೂ ಸುರಕ್ಷಾ ಯೋಜನೆಯನ್ನುಅನುಷ್ಠಾನಗೊಳಿಸಲಾಗಿದೆ.