ಕಡಿಮೆ ದರದಲ್ಲಿ ನಿವೇಶನ ಪಡೆಯಲು ಅರ್ಜಿ ಆಹ್ವಾನ

Written by Ramlinganna

Published on:

Application invited for allotment plots: ಕರ್ನಾಟಕ ಗೃಹ ಮಂಡಳಿ ಬೆಂಗಳೂರು ದಕ್ಷಿಣ ತಾಲೂಕು, ತಾವರಕೆರೆ ಹೋಬಳಿ ಬ್ಯಾಲಾಳು ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿರುವ 828 ನಿವೇಶನಗಳ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

20/30, 30/40, 30/50, 40/60 ಮತ್ತು 50/80 ಅಳತೆಯ ನಿವೇಶನಗಳು ಲಭ್ಯ ಇವೆ. ಕಡಿಮೆ ಆದಾಯದ ಗುಂಪಿಗೆ (ಎಲ್.ಐ.ಜಿ) 197 ನಿವೇಶನ, ಮಧ್ಯಮ ಆದಾಯದ ಗುಂಪು (ಎಂಐಜಿ) 555 ನಿವೇಶನ ಹಾಗೂ ಹೆಚ್ಚು ಆದಾಯದ ಗುಂಪಿಗೆ (ಎಚ್ಐಜಿ-1)  67 ನಿವೇಶನಗಳು ಲಭ್ಯ ಇವೆ. ಪ್ರತಿ ಚದರಡಿಗೆ 1750 ರೂಪಾಯಿ ದರ ನಿಗದಿಪಡಿಸಲಾಗಿದೆ.

Application invited for allotment plots ಎಷ್ಟು ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?

ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲೂಎಸ್) 9 ನಿವೇಶನ ಲಭ್ಯವಿದ್ದು, ಪ್ರತಿ ಚದರಡಿಗೆ 875 ರೂಪಾಯಿ ದರ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸಾಮಾನ್ಯ ವರ್ಗಗಳ ಜೊತೆಗೆ ಎಸ್.ಸಿ, ಎಸ್ಟಿ, ರಕ್ಷಣಾ ಇಲಾಖೆ, ಮಾಜಿ ಸೈನಿಕ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಹಿರಿಯ ನಾಗರಿಕರು, ಅಂಗವಿಕಲರ ಕೋಟಾದಲ್ಲಿ ನಿವೇಶನಗಳನ್ನು ಹಂಚಿಕೆ  ಮಾಡಲಾಗುತ್ತದೆ. ಬಡಾವಣೆಗೆ  24 ಮೀಟರ್ ವಿಸ್ತೀರ್ಣದ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರು ರಸ್ತೆಯಿಂದ 8 ಕಿ. ಮೀ ಮತ್ತುಮಾಗಡಿ ಮುಖ್ಯ ರಸ್ತೆಯಿಂದ 6 ಕಿ.ಮೀ ಅಂತರದಲ್ಲಿದೆ. ಈಗಾಗಲೇ ಸುಮಾರು 900 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನೀಯರ್ ಸಾಹುಕಾರ್ ಹಾಲೇಶಪ್ಪ ತಿಳಿಸಿದರು.

ಇದನ್ನೂ ಓದಿ ಯಾವ ಯಾವ ಸರ್ವೆ ನಂಬರಿಗೆ FID ಲಿಂಕ್ ಆಗಿವೆ? ಇಲ್ಲೇ ಚೆಕ್ ಮಾಡಿ

2800 ಕ್ಕೂ ಹೆಚ್ಚು ನಿವೇಶನಗಳ ಈ ಯೋಜನೆಯು 7 ವರ್ಷಗಳ ಹಿಂದೆ ಯೋಜನೆ ಆರಂಭವಾಗಿದ್ದು, ಎರಡು ಬಾರಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆಅರ್ಜಿಗಳು ಕಡಿಮೆ ಬಂದಿದ್ದವು. ಇತ್ತೀಚೆಗೆ 1400 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಉಳಿದ ನಿವೇಶನಗಳ ಹಂಚಿಕೆಗಾಗಿ ಮತ್ತೆಅರ್ಜಿ ಕರೆಯಲಾಗಿದೆ ಎಂದು ಹಾಲೇಶಪ್ಪ ತಿಳಿಸಿದರು.

ಅರ್ಜಿ ನೋಂದಣಿ ಮತ್ತು ಆರಂಭಿಕ ಠೇವಣಿ ಹಣವನ್ನು ಇ ಪೇಮೆಂಟ್ ಮೂಲಕ ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು ನಗರ ಜಿಲ್ಲಾಯೋಜನಾ ಕಚೇರಿ, ಮೊಬಲ್ ನಂಬರ್ 9845600099 ಹಾಗೂ ಸಹಾಯಕ ಕಂದಾಯ ಅಧಿಕಾರಿ, ಹಂಚಿಕೆ ಶಾಖೆ, ಕರ್ನಾಟಕ ಗೃಹ ಮಂಡಳಿ, 4ನೇ ಮಹಡಿ, ಕಾವೇರಿ ಭವನ, ಬೆಂಗಳೂರು ಇವರನ್ನು ಖುದ್ದಾಗಿ  ಅಥವಾ ಮೊಬೈಲ್ ನಂಬರ್ 9164839817, ದೂರವಾಣಿ ಸಂಖ್ಯೆ 080 22273511 ಗೆ ಸಂಪರ್ಕಿಸಲು ಕೋರಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ

https://khb.karnataka.gov.in/

ವೆಬ್ಸೈಟ್ ಮೂಲಕ ಮಾಹಿತಿ ಪಡೆಯಬಹುದು.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನ್ಮೂಲಕ ಅರ್ಜಿ ಸಲ್ಲಿಸಲು

https://khbepay.com/NEWAPPLICANT/pAYUAPPLICANTFORM.ASPX?PRJ=813

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಆಗ ಕರ್ನಾಟಕ ಗೃಹ ಮಂಡಳಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಅರ್ಜಿದಾರರ ಹುಟ್ಟಿದ ದಿನಾಂಕ. ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ, ಪ್ರವರ್ಗ, ಧರ್ಮ, ವಿಳಾಸ ಭರ್ತಿ ಮಾಡಬೇಕು

ಇದರೊಂದಿಗೆ ನಿಮ್ಮ ಬ್ಯಾಂಕಿನ ವಿವರ ನೀಡಬೇಕು. ಬ್ಯಾಂಕಿನ ಹೆಸರು, ಶಾಖೆಯ ಹೆಸರು, ಐಎಫ್ಎಸ್ಸಿ ಕೋಡಿ, ಅಕೌಂಟ್ ನಂಬರ್ ನೀಡಬೇಕು. ಅರ್ಜಿದಾರರ ಭಾವಚಿತ್ರ ಅಪ್ಲೋಡ್ ಮಾಡಬೇಕು. ನಂತರ ನೋಂದಣಿ ಶುಲ್ಕವನ್ನುನಮೂದಿಸಿ ರೆಜಿಸ್ಟರ್ ಅದರೆ ನೋಂದಣಿ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮುನ್ನ  ಎಲ್ಲಾ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು.ನಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.

ಸೂಚನೆ ನಿವೇಶನ ಹಂಚಿಕೆಗೆ ಹಾಗೂ ನೋಂದಣಿಗೆ ಯಾವುದೇ ವಧ್ಯವರ್ತಿಗಳಿಗೆ ದಲ್ಲಾಳಿಗಳಿಗೆ ಹಣ ಕೊಡಬೇಕಿಲ್ಲ. ಇಲ್ಲಿ ಯಾರೂ ಮಧ್ಯವರ್ತಿಗಳು ಹಣ ಪಡೆಯುವುದಿಲ್ಲ.

 

Leave a Comment