ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Check your Aadhaarcard  history : ರೈತರು, ಸಾರ್ವಜನಿಕರು ಈಗ ತಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಹೌದು,  ರೈತರು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಇಂತಹ ಮಾಹಿತಿ ಪಡೆಯಿರಿ

ಆಧಾರ್ ಕಾರ್ಡ್ ಪ್ರತಿಯೊಂದಕ್ಕೂ ಬಳಕೆಯಾಗುತ್ತಿದೆ.  ಹೌದು, ಬ್ಯಾಂಕ್ ಅಕೌಂಟ್, ಹೊಸ ಸಿಮ್ ಖರೀದಿ, ಸರ್ಕಾರಿ ಸೌಲಭ್ಯ ಪಡೆಯಲು, ರೇಶನ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್ ಹೀಗೆ ಎಲ್ಲಾ ದಾಖಲೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ನಮ್ಮ ಆಧಾರ್ ಕಾರ್ಡ್  ಎಲ್ಲೆಲ್ಲಿ ಬಳಕೆಯಾಗಿದೆ. ಎಂಬ ಮಾಹಿತಿ ಗೊತ್ತಾಗುತ್ತದೆ.. ಹೌದು, ಕೇವಲ ಒಂದೇ ನಿಮಿಷದಲ್ಲಿ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಕೆಳಗೆ ನೀಡಲಾದ ಮಾಹಿತಿಯಂತೆ ಚೆಕ್ ಮಾಡಿ.

Check your Aadhaarcard  history  ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ? ಹೀಗೆ ಚೆಕ್ ಮಾಡಿ

ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://uidai.gov.in/en/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮೆಗ ಆಧಾರ್ ಕಾರ್ಡ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು My Aadhaar ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Aadahar services ಕಾಣುತ್ತದೆ. ಅದರ ಕೆಳಗಡೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು Aadhaar authentication history ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು Login ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.

ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು, ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Login with OTP ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿದ ನಂತರ Login ಮೇಲೆ ಕ್ಲಿಕ್ ಮಾಡಬೇಕು.  ನಂತರ ಆಲ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ Fetch Authentication History ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮಗೆ ಕಳೆದ ಆರು ತಿಂಗಳಿನಿಂದ ನಿಮ್ಮ ಆಧಾರ್ ಕಾರ್ಡ್ ಬಳಸಿ ಏನೇನು ಖರೀದಿ ಮಾಡಲಾಗಿದೆ. ಹಾಗೂ ಎಲ್ಲೆಲ್ಲಿ ನಿಮ್ಮ ಆಧಾರ್ ಕಾರ್ಡ್ ಬಳಕಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ ನಿಮ್ಮ ಜಮೀನಿನ ಸರ್ವೆ ಸ್ಕೆಚ್ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ

ಇತ್ತೀಚೆಗೆ ನಮಗೆ ಗೊತ್ತಿಲ್ಲದೆ ಕೆಲವರು ಆಧಾರ್ ಕಾರ್ಡ್ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಇದನ್ನೂ ನೀವು ಒಮ್ಮೆ ಪರಿಶೀಲಿಸಿ ಚೆಕ್ ಮಾಡಿಕೊಳ್ಳಬಹುದು.  ಒಮ್ಮೆ ಚೆಕ್ ಮಾಡಿಕೊಂಡರೆ ಸಾಕು ಕಳೆದ ಆರು ತಿಂಗಳಲ್ಲಿ ನಮ್ಮ ಆಧಾರ್ ಕಾರ್ಡ್ ಎಲ್ಲಿ ಬಳಕೆಯಾದಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆಯೇ? ನಿಮಗೆ ಉಪಯುಕ್ತವಾಗಿದ್ದರೆ ಕೂಡಲೇ ಕಾಮೆಂಟ್ ಮಾಡಿ ತಿಳಿಸಿ. ಅಥವಾ ನಿಮಗೆ ಸಮಸ್ಯೆಯಾಗುತ್ತಿದ್ದರೂ ಕಾಮೆಂಟ್ ಮಾಡಿ ತಿಳಿಸಿದರೆ ನಿಮಗೆ ರಿಪ್ಲೈ ಮಾಡುತ್ತೇವೆ

ಯಾವ ಯಾವ ಕಾರಣಕ್ಕೆ ಆಧಾರ್ ಕಾರ್ಡ್ ಪಡೆಯಲಾಗುತ್ತಿದೆ?

ಆಧಾರ್ ಕಾರ್ಡ್ ಓಟರ್ ಐಡಿ, ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಜಮೀನಿನ ದಾಖಲೆಗಳು ಹೀಗೆ ವಿವಿಧ ಕಾರಣಗಳಿಂದಾಗಿ ಆಧಾರ್ ಕಾರ್ಡ್ ಪಡೆಯಲಾಗುತ್ತಿದೆ. ಇದರೊಂದಿಗೆ ಮೊಬೈಲ್ ಗಳ ಖರೀದಿಗೂ ಆಧಾರ್ ಕಾರ್ಡ್ ಪಡೆಯಲಾಗುತ್ತಿದೆ. ಏನೇ ಆಗಲಿ, ನೀವು ನಿಮ್ಮ ಆಧಾರ್ ಕಾರ್ಡ್ ನ್ನು ಯಾರಿಗೆ ಯಾವ ಕಾರಣಕ್ಕೆ ನೀಡುತ್ತಿದ್ದೀರಿ ಎಂಬುದು ಗೊತ್ತಿರಬೇಕು. ನಿಮಗೆ ಗೊತ್ತಿಲ್ಲದೆ ಬೇರೆ ಕಾರಣಕ್ಕೆ ಬಳಕೆಯಾಗಿದ್ದರೆ ಕೂಡಲೇ ಚೆಕ್ ಮಾಡಿಕೊಳ್ಳಬಹುದು.

Leave a Comment