echawadi : ರೈತರಿಗೆ ಸಹಕಾರಿಯಾಗುವ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಮೊಬೈಲ್ ಆ್ಯಪ್ ಗಳು ಇನ್ನೂ ಮುಂದೆ ಇ ಚಾವಡಿ ಎಂಬ ಒಂದೇ ವೆಬ್ಸೈಟ್ ನಲ್ಲಿ ಲಭ್ಯವಾಗಲಿದೆ.
ನಮ್ಮ ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಇಂತಹ ಮಾಹಿತಿ ಪಡೆಯಿರಿ
ರೈತರಿಗೆ ಅನುಕೂಲವಾಗುವಂತಹ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಮೊಬೈಲ್ ಅಪ್ಲಿಕೇಶನ್ ಗಳನ್ನು ಇ ಚಾವಡಿ ವೆಬ್ಸೈಟ್ ನಲ್ಲಿ ಕಲ್ಪಿಸಲಾಗುವುದು.
echawadi ಇ ಚಾವಡಿಯಿಂದ ಯಾವ ಯಾವ ಮಾಹಿತಿ ಸಿಗಲಿದೆ?
ಕೃಷಿ ಭೂಮಿಯ ಮೇಲಿನ ವಹಿವಾಟಿನ ವಿವರಗಳು ಒಂದೇ ಸೂರಿನಡಿ ಜಿಪಿಎಸ್ ಪ್ಲಾಟ್ ಫಾರ್ಮ್ ನಲ್ಲಿ ಸಿಗಲಿದೆ. ಹೌದು, ರೈತರು ಈ
https://rdservices.karnataka.gov.in/echawadi/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕಂದಾಯ ಇಲಾಖೆಯ ಇ ಚಾವಡಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Advanced Search ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch Detail ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ನಿಮ್ಮ ಊರಿನ ಸುತ್ತಮುತ್ತಲಿರುವ ಸರ್ವೆ ನಂಬರ್ ಗಳು ಕಾಣಿಸುತ್ತವೆ.
ಗ್ರಾಮದ ನಕ್ಷೆಯಲ್ಲಿ ಕೆಂಪು ಬಣ್ಣದಲ್ಲಿ ಗುರುತಿಸಲಾದ ಸಂಖ್ಯೆಯು ವಹಿವಾಟಿನಲ್ಲಿ ಸಂಪೂರ್ಣ ಅಥವಾ ಹಿಸ್ಸಾ ನಂಬರ್ ಒಳಗೊಂಡಿರುತ್ತದೆ. ಅಲ್ಲಿ ನಿಮ್ಮ ಊರಿನ ಮ್ಯಾಪ್ ಸಹ ಕಾಣಿಸುತ್ತದೆ. ನಿಮ್ಮಊರಿನಲ್ಲಿ ಗುಡುಗುಂಡಾರ ಅಥವಾ ಇನ್ಯಾವುದೇ ಪ್ರಮುಖ ಸ್ಥಳಗಳಿದ್ದರೆ ಕಾಣಿಸುತ್ತದೆ. ಅಲ್ಲಿ ಊರಿನ ಮನೆಗಳು ಕಾಣಿಸುತ್ತವೆ. ನೀವು ಝೂಮ್ ಮಾಡಿ ನೋಡಬಹುದು. ನಿಮ್ಮಊರಿನ ಮೂಲಕ ಹಾದು ಹೋಗುವ ರಸ್ತೆಗಳು ಸಹ ಕಾಣಿಸುತ್ತವೆ.
ನಿಮ್ಮ ಊರಿನ ಸುತ್ತಮುತ್ತಲಿರುವ ಸರ್ವೆ ನಂಬರ್ ಗಳು ಹಾಗೂ ಬಾರ್ಡರ್ ಲೈನ್ ಸಹ ಕಾಣಿಸುತ್ತದೆ.
ದರಖಾಸ್ತು ಪೋಡಿ ವಿತರಣೆ
ಮೂರು ದಶಕಗಳಿಂದ ಕಾಯುತ್ತಿರುವ ರೈತರಿಗೆ ಕೊನೆಗೂ ದರಖಾಸ್ತು ಪೋಡಿ ಸಿಕ್ತು. ಹೌದು, ಕಲಬುರಗಿ ಜಿಲ್ಲೆಯ ತಾವರಗೇರಾ ರೈತರಿಗೆ ದರಖಾಸ್ತು ಪೋಡಿ ವಿತರಿಸಲಾಯಿತು.
ಕಲಬುರಗಿ ತಾಲೂಕಿನ ತಾವರಗೇರಾ ಗ್ರಾಮದ 12 ಜನ ರೈತರಿಗೆ ಬುಧವಾರ ಹೊಸ ವರ್ಷದ ದಿನದಂದೇ ಕಲಬುರಗಿ ಜಿಲ್ಲಾಡಳಿತ ದರಖಾಸ್ತು ಪೋಡಿ ವಿತರಿಸುವ ಮೂಲಕ ನೂತನ ವರ್ಷದ ಗಿಫ್ಟ್ ನೀಡಿದೆ.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು, ತಾವರಗೇರಾ ಗ್ರಾಮದ 12 ರೈತರಿಗೆ ಒಟ್ಟಾರೆ 46.36 ಎಕರೆ ಜಮೀನಿನ ಪ್ರತ್ಯೇಕ ಪಹಣಿ ಪತ್ರಿಕೆ, ಫಾರ್ಮ್ -10, ಆಕಾರ್ ಬಂದ್, ಸ್ಕೇಚ್ ನಕಾಶೆ ವಿತರಣೆ ಮಾಡಿದರು.
ತಾವರಗೇರಾ ಗ್ರಾಮದ 50.36 ಎಕರೆ ಸರ್ಕಾರಿ ಗೈರಾಣು ಜಮೀನಿನ್ನು 1993-94ರ ಅವಧಿಯಲ್ಲಿ ಲ್ಯಾಂಡ್ ಗ್ರ್ಯಾಂಟ್ ಕಮಿಟಿಯಿಂದ ರೈತರಿಗೆ ಉಳುಮೆ ಮಾಡಲು ಜಮೀನು ಮಂಜೂರು ಮಾಡಲಾಗಿತ್ತಾದರೂ, ಪ್ರತಿ ರೈತನಿಗೆ ಪ್ರತ್ಯೇಕ ಪಹಣಿ, ಹಿಸ್ಸಾಪೋಡಿ ಇದುವರೆಗೂ ಇರಲಿಲ್ಲ. ಒಟ್ಟಾಗಿ ಜಂಟಿ ಪಹಣಿ ಹೆಸರಿನಲ್ಲಿಯೇ ಅವರೆಲ್ಲರೂ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಇತ್ತೀಚೆಗೆ ರಾಜ್ಯ ಸರ್ಕಾರ ತನ್ನ ಆಯವ್ಯಯದಲ್ಲಿ ಘೋಷಿಸಿದಂತೆ ಕಳೆದ ನವೆಂಬರ್ 25 ರಂದು ದರಖಾಸ್ತು ಪೋಡಿ ದುರಸ್ತಿಯ ಕಾರ್ಯವಿಧಾನಗಳಲ್ಲಿ ಸರಳೀಕರಣಗೊಳಿಸಿದ ಪರಿಣಾಮ ಇಂದಿಲ್ಲಿರೈತರು ತಮ್ಮ ಹೆಸರಿಗೆ ಪ್ರತ್ಯೇಕ ಪಹಣಿ ಪತ್ರಿಕೆ, ಫಾರ್ಮ 10, ಆಕಾರ್ ಬಂದ್, ಸ್ಕೆಚ್ ನಕಾಶೆ ಪಡೆಯುವ ಭಾಗ್ಯ ದೊರೆಯಿತು. ಪ್ರಾಯೋಗಿಕವಾಗಿ ಹಾಸನ ಜಿಲ್ಲೆ ಹೊರತುಪಡೆಸಿದರೆ ನಾನ್ ಪೈಲೆಟ್ ಯೋಜನೆಯಡಿ ಕಲಬುರಗಿ ಜಿಲ್ಲೆಯ ತಾರಗೇರಾ ಗ್ರಾಮದ ರೈತರಿಗೆ ತಮ್ಮ ಜಮೀನಿನ ಹಕ್ಕಿನ ದಾಖಲೆಗಳು ಸಿಕ್ಕಂತಾಗಿದೆ. ಇದರಿಂದ ಮೂರು ದಶಕದ ಸಮಸ್ಯೆ ನಿವಾರಣೆಯಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ : ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ
ಗ್ರಾಮದ ರೈತರಾದ ಶ್ಯಾಮರಾವ್ ದೇವಪ್ಪ ನಿಪ್ಪಾಣಿ, ಹಣಮಂತ ದೇವಪ್ಪ ನಿಪ್ಪಾಣಿ, ರಾಣಪ್ಪ ಕಾಶಪ್ಪ, ಮಲ್ಲಪ್ಪಗುಂಡಪ್ಪಾ, ಬಸಪ್ಪ ಮರಗಪ್ಪಾ, ಸುಭಾಶ್ಚಂದ್ರ ಮಲ್ಲಪ್ಪ, ನಾಗಪ್ಪ ಮಲ್ಲಪ್ಪಾ, ನಾಗಪ್ಪ ಸಂಬಣ್ಣಾ, ಬಂಡೆಪ್ಪಾ ಸಂಬಣ್ಣಾ, ಭೀಮಶ್ಯಾ ದೇವಪ್ಪ, ಸಂಬಣ್ಣ ನಾಗಪ್ಪ, ದಶರಥ ಕಾಶಪ್ಪಾ ಎಂಬುವರೇ ಪಹಣಿ ಸೇರಿದಂತೆ ಪೋಡಿ ದಾಖಲೆಗಳು ಪಡೆದು ಭಾಗ್ಯವಂತರಾಗಿದ್ದಾರೆ.