Suryaghar scheme subsidy : ಸೂರ್ಯಘರ್ ಯೋಜನೆಯಡಿಯಲ್ಲಿ ಸಾರ್ವಜನಿಕರು, ರೈತರು 78 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ಪಡೆಯಬಹುದು. ಹೌದು, ಸೂರ್ಯಘರ್ ಯೋಜನೆ ಅಂದರೆ ಏನು? ಈ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಎಂಬುದರ ಮಾಹಿತಿ ಇಲ್ಲಿದೆ.
ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಕೃಷಿ ಮಾಹಿತಿ ಪಡೆಯಿರಿ
ದೇಶದ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವುದಕ್ಕಾಗಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯನ್ನು ಆರಂಭಿಸಲಾಗಿದೆ. ಹೌದು ಈ ಯೋಜನೆಯಡಿಯಲ್ಲಿ ಜನರು ತಮ್ಮ ನೆಯ ಛಾವಣೆಯ ಮೇಲೆ ಸೌರ ಫಲಕಗಳನ್ನು ಹಾಕಲು ಸಹಾಯಧನ ನೀಡಲಾಗುವುದು.
ಸೌರ ಫಲಕಗಳನ್ನು ಹಾಕಿಕೊಳ್ಳುವವರಿಗೆ ಶೇ. 40 ರಷ್ಟು ಸಬ್ಸಿಡಿ ನೀಡಲಾಗುವುದು. ಈಗಾಗಲೇ ಸೋಲಾರ್ ಪ್ಯಾನಲ್ ಹೊಂದಿರುವವರಿಗೆ ಈ ಯೋಜನೆ ಅಡಿಯಲ್ಲಿ ಸಬ್ಸಿಡಿ ಸಿಗುವುದಿಲ್ಲ. ಆಯಾಯಾ ಎಸ್ಕಾಂಗಳಿಂದ ಮಾನ್ಯವಾಗಿರುವ ವಿದ್ಯುತ್ ಸಂಪರ್ಕವನ್ನು ಹೊಂದಿರುವ ಕುಟುಬದವರು ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು.
ಸೂರ್ಯ ಘರ್ ಯೋಜನೆ ಅಡಿಯಲ್ಲಿ 3 ಕೆವಿ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ 78 ಸಾವಿರ ರೂಪಾಯಿ ಸಬ್ಸಿಡಿ ನೀಡಲಾಗುವುದು. ಇದರೊಂದಿಗೆ ಬ್ಯಾಂಕ್ ಸಾಲ ಸೌಲಭ್ಯ ಇರುತ್ತದೆ. ಸಾಮಾನ್ಯವಾಗಿ 3 ಕೆವಿ ಘಟಕ 300 ಯೂನಿಯ್ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಸೂರ್ಯಘರ್ ಘಟಕಕ್ಕೆ ಮೇಲ್ಛಾವಣಿ ಸ್ಥಾಪನೆಗೆ 1.5 ಲಕ್ಷ ರೂಪಾಯಿ ವೆಚ್ಚವಾಗಲಿದೆ. 300 ಯೂನಿಟ್ ಗಿಂದ ಕಡಿಮೆ ವಿದ್ಯುತ್ ಬಳಸಿದಲ್ಲಿ ಹೆಚ್ಚುವರಿ ವಿದ್ಯುತ್ ಅನ್ನುಮಾರಾಟ ಮಾಡಿಕೊಳ್ಳಲು ಅವಕಾಶವಿದೆ.
ಇದನ್ನೂ ಓದಿ : ಪಿಎಂ ಕಿಸಾನ್ 19ನೇ ಕಂತು ಈ ರೈತರ ಖಾತೆಗೆ ಈ ದಿನ ಜಮೆ
ಸಾಮಾನ್ಯವಾಗಿ 5 ಜನರಿರುವ ಮಧ್ಯಮ ವರ್ಗದ ಮನೆಗಳಿಗೆ 300 ಯೂನಿಟ್ ವಿದ್ಯುತ್ ಸಾಕಾಗುತ್ತದೆ.
Suryaghar scheme subsidy ಸೂರ್ಯಘರ್ ಯೋಜನೆ ಪಡೆಯಲು ಅರ್ಹತೆಗಳು
ಈ ಯೋಜನೆಯ ಸೌಲಭ್ಯ ಪಡೆಯುವವರು ಭಾರತೀಯ ಪ್ರಜೆಯಾಗಿರಬೇಕು. ಮನೆಯ ಮೇಲ್ಛಾವಣಿ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಛಾವಣಿಯನ್ನುಹೊಂದಿರಬೇಕು. ಈ ಯೋಜನೆಯ ಸೌಲಭ್ಯ ಪಡೆಯಲು ವಿದ್ಯುತ್ ಸಂಪರ್ಕ ಹೊಂದಿರಬೇಕು. ಸೌರ ಫಲಕಗಳಿಗೆ ಯಾವುದೇ ಇತರ ಸಬ್ಸಿಡಿ ಪಡೆದಿರಬಾರದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಸೂರ್ಯ ಘರ್ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ
https://www.pmsuryaghar.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ Apply for Rooftop Solar ಮೇಲೆ ಕ್ಲಿಕ್ ಮಾಡಬೇಕು. ನಂತರ ತಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ನೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ವಿದ್ಯುತ್ ಗ್ರಾಹಕ ಸಂಖ್ಯೆಯನ್ನು ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು. ನಂತರ ಅಲ್ಲಿಕೇಳಲಾದ ಒಂದೊಂದು ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿಸಲ್ಲಿಸಬಹುದು.
ಆನ್ಲೈನ್ ಮೂಲಕ ನಿಮಗೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದ್ದರೆ ನೀವು ಹೆಚ್ಚಿನ ಮಾಹಿತಿಗಾಗಿ 15555 ಗೆ ಕರೆ ಮಾಡಿ ವಿಚಾರಿಸಬಹುದು. ಅಥವಾ ನಿಮ್ಮ ಜೆಸ್ಕಾಂ ಕಂಪನಿಯಲ್ಲಿ ವಿಚಾರಿಸಬಹುದು.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು?
ಸೂರ್ಯ ಘರ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಇರಬೇಕು. ವಿದ್ಯುತ್ ಬಿಲ್ ಇರಬೇಕು. ಮನೆ ಹೊಂದಿರುವ ದಾಖಲೆ ಇರಬೇಕು.
ಸೂರ್ಯ ಘರ್ ಯೋಜನೆಯಡಿ 5.14 ಲಕ್ಷ ನೋದಣಿ
ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಕರ್ನಾಟಕದಲ್ಲಿ 5,14,000 ಜನರ ನೋಂದಣಿಯಾಗಿದೆ. ಈ ಪೈಕಿ 1,17,000 ಅರ್ಜಿಗಳು ಸ್ವೀಕೃತವಾಗಿವೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೂಡಿಯಲ್ಲಿರುವ ಕೆಪಿಟಿಸಿಎಲ್ ನ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಬೆಸ್ಕಾಂ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಯೋಜನೆ ಕಾರ್ಯಗತಗೊಳಿಸಲು, ಎಂಎನ್ಆರ್ ಇ ಪೋರ್ಟಲ್ ನಲ್ಲಿ353 ಖಾಸಗಿ ಏಜೆನ್ಸಿಗಳು ಹೆಸರು ನೋಂದಾಯಿಸಿವೆ ಎಂದರು.
ಗ್ರೀಡ್ ಸಂಪರ್ಕಿತ ಮೇಲ್ಛಾವಣೆ ಸ್ಥಾವರಗಳಿಗೆ ಕೇಂದ್ರ ಸರ್ಕಾರವು 30 ಸಾವಿರ ರೂಪಾಯಿಯಿಂದ 78 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡುತ್ತದೆ.