Today rain yellow alert : ರಾಜ್ಯದ ಕೆಲವೆಡೆ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೌದು, ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಆ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಯೂಟೂಬ್ ಚಾನೆಲಿಗೆ ಸಬಸ್ಕ್ರೈಬ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಹಾಗೂ ಮಂಡ್ಾಯ ಜಿಲ್ಲೆಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಈ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳು ಹಾಗೂ ಕರಾವಳಿಯ ಹಲವೆಡೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹೆಚ್ಚಿನ ಸ್ಥಳಗಳಲ್ಲಿ ಜಿಟಿಜಿಟಿ ಮಳೆ ಹಾಗೂ ಕೆಲ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ್ಲಿ ಹಾಸನ ಹಾಗೂ ತುಮಕೂರು ಜಿಲ್ಲೆಗೆ ಶುಕ್ರವಾರ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ನಿಮ್ಮ ಜಿಲ್ಲೆಯಲ್ಲಿ ಯಾವಾಗ ಮಳೆಯಾಗಲಿದೆ? ಈ ವೀಡಿಯೋ ನೋಡಿ
ಇನ್ನೂ ಮುಂದೆ ಸಿಡಿಲು ಬೀಳುವ ಮೊದಲೇ ಮೊಬೈಲಿಗೆ ಮುನ್ಸೂಚನೆ ನೀಡಲಿದೆ
ಇನ್ನೂ ಮುಂದೆ ಸಾರ್ವಜನಿಕರಿಗೆ ಸಿಡಿಲಿನ ಮೂನ್ಸೂಚನೆ ನೀಡಲಿದೆ ಸಿಡಿಲು ಆ್ಯಪ್? ಹೇಗೆ ಮುನ್ಸೂಚನೆ ನೀಡಲಿದೆ? ಎಂಬ ಮಾಹಿತಿಯನ್ನುತಿಳಿದುಕೊಳ್ಳೋಣ ಬನ್ನಿ
Today rain yellow alert ಸಿಡಿಲು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ಸಿಡಿಲು ಎಂಬ ಆ್ಯಪ್ ನ್ನು ನಿಮ್ಮ ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಿಕೊಳ್ಳಲು ಈ
https://play.google.com/store/apps/details?id=com.moserptech.sidilu&hl=en&gl=US&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಅಲ್ಲಿ ಕಾಣುವ install ಮೇಲೆ ಕ್ಲಿಕ್ ಮಾಡಬೇಕು.ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. Allow Sidilu to access this devices location ಕೆಳಕಡೆ While using the App ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಇದ್ದ ಸ್ಥಳದ ಸುತ್ತಮುತ್ತ ಎಲ್ಲಲ್ಲಿ ಸಿಡಿಲು ಬಡಿಯುವ ಸಾಧ್ಯತೆಯಿದೆ ಎಂಬು ಕಾಣಿಸುತ್ತದೆ.
ಒಂದು ವೇಳೆ ನಿಮ್ಮ ಸುತ್ತಮುತ್ತ ಸಿಡಿಲು ಬಡಿಯುವ ಸಾಧ್ಯತೆಯಿಲ್ಲದಿದ್ದಲ್ಲಿ No lightning activity in your area ಎಂಬ ಮೆಸೇಜ್ ಗೋಚರಿಸುತ್ತದೆ. ನೀವು ಇದ್ದ ಸ್ಥಳ ತೋರಿಸಲಾಗಿರುತ್ತದೆ. ನಿಮ್ಮ ಸುತ್ತಮುತ್ತ 1 ಕಿ.ಮೀ ದಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಸಿಡುಲು ಬೀಳುವ ಸಾಧ್ಯತೆಯಿದ್ದರೆ ಅಲ್ಲಿ ನಿಮಗೆ ಮೆಸೇಜ್ ಗೋಚರಿಸುತ್ತದೆ.
Thunder (ಗುಡುಗು) ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಇರುತ್ತದೆಯೋ ಇಲ್ಲವೋ ಎಂಬ ಮೆಸೆಜ್ ಗೋಚರಿಸುತ್ತದೆ.
ಗುಡುಗು ಸಿಡಿಲಿನ ಆರ್ಭಟವಿದ್ದಾಗ ನಾಗಕಿಕರು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು
ಸಿಡಿಲು ಮೊಬೈಲ್ ಆ್ಯಪ್ ಬಳಸುವ ಮೂಲಕ ನಾಗರಿಕರು ಸಿಡಿಲಿನ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆಯಬಹುದು. ಸಿಡಿಲಿನ ಸಂಭವನೀಯತೆ ಇದ್ದಲ್ಲಿ ಬಯಲಿನಲ್ಲಿ ಮಾಡಬೇಕಾದ ಕೆಲಸಗಳನ್ನು ಮುಂದೂಡಿ. ಮನೆಯಲ್ಲಿಯ ಸುರಕ್ಷಿತವಾಗಿ ಇರಲು ಸಹಾಯವಾಗುತ್ತದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಅಕ್ಕಪಕ್ಕದ ರೈತರಿಗೆ ಎಷ್ಟು ಎಕರೆ ಜಮೀನಿದೆ? ಚೆಕ್ ಮಾಡಿ
ಸಿಡಲು ಬಡಿಯುವ ಮುನ್ಸೂಚನೆ ಇದ್ದಾಗಮನೆಯ ಕಿಟಕಿಯಿಂದ ದೂರ ಇರಬೇಕು. ಸಿಡಿಲು ಬಡಿಯುವ ಸಂದರ್ಭದಲ್ಲಿ ದೂರವಾಣಿ, ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಾರದು.
ಗೃಹಪಯೋಗಿ ಉಪಕರಣಗಳ ಪ್ಲಗ್ ಗಳನ್ನು ತೆಗೆದಿರಿಸಬೇಕು. ಸಿಡಿಲಿನ ಸಂದರ್ಭದಲ್ಲಿ ಮನೆಯ ಹೊರಗಡೆ ಸ್ಟಾನ ಮಾಡುವುದು ಸುರಕ್ಷಿತವಲ್ಲ. ಹೊರಾಂಗಣದಲ್ಲಿದ್ದವರು ಸುರಕ್ಷಿತ ಕಟ್ಟಡಗಳ ಒಳಗೆ ಹೋಗಬೇಕು. ಎತ್ತರದ ಪ್ರದೇಶಗಳಲ್ಲಿ ಸಿಡಿಲು ಬಡಿಯುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಸಾದ್ಯವಾದಷ್ಟು ತಗ್ಗು ಪ್ರದೇಶಗಳಿಗೆ ತೆರಳಬೇಕು.
ವಾಹನ ಚಲಿಸುವಾಗ ಸಿಡಿಲು ಬಂದಾಗ ಮರ ಹಾಗೂ ವಿದ್ಯುತ್ ಕಂಬಗಳಿಂದ ವಾಹನವನ್ನು ಸಾಧ್ಯವಾದಷ್ಟು ದೂರ ನಿಲ್ಲಿಸಬೇಕು. ಮರಗಳ ಕೆಳಗಡೆ ನಿಲ್ಲದೆ ವಾಹನದೊಳಗೆ ಇರುವುದು ಸೂಕ್ತ. ಬಸ್ ಗಳಲ್ಲಿ ಪ್ರಯಾಣಿಸುವಾಗ ಕಿಟಕಿಗಳ ಗಾಜುಗಳನ್ನು ಮುಚ್ಚಬೇಕು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಸಲಹೆ ನೀಡಿದೆ.