ಗಂಗಾ ಕಲ್ಯಾಣ ಯೋಜನೆ 4 ಲಕ್ಷ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

Gangakalyana  4 lakh subsidy : ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ನಿಗಮ ಕರ್ನಾಟಕ ಭೋವಿ ಅಭಿವೃದ್ಧಿ ನಿಮಗ ಸೇರಿ ವಿವಿಧ ನಿಗಮಗಳ ಪರಿಶಿಷ್ಟ ಜಾತಿಗೆ ಸೇರಿದ ಜನನರ ಆರ್ಥಿಕ ಅಭಿವೃದ್ಧಿಗಾಗಿ 2024-25ನೇ ಸಾಲಿಗೆ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿಯೋಜನೆಯಡಿ ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಹಾಗೂ ಸ್ವಾವಲಂಬಿ ಸಾರಥಿ ಯೋಜನಯಡಿ ಸರಕು ಸಾಕಾಣಿಕೆ, ಟ್ಯಾಕ್ಸಿ ಹಳದಿ ಬೋರ್ಡ್ ವಾಹನ ಖರೀದಿ, ಸೇರ ವಿವಿಧ ಕಾರ್ಯಗಳಿಗೆ ಮೇಲ್ಕಂಡ ನಿಗಮಗಳ ವತಿಯಿಂದ ಸಾಲಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಸೇವಾ ಕೇಂದ್ರಗಳಲ್ಲಿ ಅಕ್ಟೋಬರ್ 10 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ನಿಗಮದ ಜಿಲ್ಲಾ ಕಚೇರಿ ಮತ್ತು ನಿಗಮಗಳ ವೆಬ್ಸೈಟ್ ದಲ್ಲಿ ಅಥವಾ ಕಲ್ಯಾಮ ಮಿತ್ರ ಸಹಾಯವಾಣಿ9482300400 ಗೆ ಸಂಪರ್ಕಿಸಬಹುದು.

ಅಗತ್ಯ ದಾಖಲಾತಿಗಳೊಂದಿಗೆ ಆಯಾ ನಿಗಮದ ವ್ಯಾಪ್ತಿಗೆ ಒಳಪಡುವ ಜನಾಂಗದವರು ನಿಗದಿತ ದಿನಾಂಕದೊಳಗೆ ಅರ್ಜಿಗಳನ್ನು ಆನೈಲನ್ ಮೂಲಕ ಸಲ್ಲಿಸಲು ಪ್ರಕಟಣೆ ತಿಳಿಸಿದೆ.

ಗಂಗಾ ಕಲ್ಯಾಣ ಯೋಜನೆಯಡಿ ಯಾವ ಜಿಲ್ಲೆಯ ರೈತರಿಗೆ ಎಷ್ಟು ಸಬ್ಸಿಡಿ ನೀಡಲಾಗುವುದು?

ಪರಿಶಿಷ್ಟ ಜಾತಿಯ ಸಣ್ಣ ಮತ್ತು ಅತೀ ಸಣ್ಣ ರೈತರು ಹೊಂದಿರುವ 1 ಅಥವಾ ಒಂದುವರೆ ಎಕರೆಯಿಂದ 5 ಎಕರೆ ವಿಸ್ತೀರ್ಣದ ಖು ಷ್ಕಿ ಜಮೀನಿನಲ್ಲಿ ಕೊಳವೆ ಬಾವಿ ಅಥವಾ ತೆರೆದ ಬಾವಿ ನಿರ್ಮಿಸಿ ಪಂಪ್ ಮೋಟಾರ್ ಅಳವಡಿಸಿ ವಿದ್ಯೀದೀಕರಣಗೊಳಿಸಿ ನೀರಾವರಿ ಸೌಲಭ್ಯವನ್ನುಒದಗಿಸಲಾಗುವುದು. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರುವ ರೈತರಿಗೂ ಈ ಯೋಜನೆಯಡಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಬೆಂಗಳೂರು ನಗರ,  ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕುರ ಜಿಲ್ಲೆಗಳಿಗೆ ಘಟಕ ವೆಚ್ಚ 4.75 ಲಕ್ಷ  ಅದರಲ್ಲಿ 4 ಲಕ್ಷ ಸಬ್ಸಿಡಿ  ನೀಡಲಾಗುವುದು. ಮೇಲೆ ತಿಳಿಸಿದ ಜಿಲ್ಲೆಗಳನ್ನು ಹೊತರು ಪಡಿಸಿ ಉಳಿದ 24 ಜಿಲ್ಲೆಗಳಿಗೆ ಘಟಕ ವೆಚ್ಚ 3.75 ಲಕ್ಷ ಗರಿಷ್ಠ 3ಲಕ್ಷ ರೂಪಾಯಿಯವರೆಗೆಸಬ್ಸಿಡಿ ನೀಡಲಾಗುವುದು.

ಇದನ್ನೂ ಓದಿ ನಿಮ್ಮSurvey Numberನಲ್ಲಿ ಯಾರ ಹೆಸರಿದೆ? ಇಲ್ಲೇ ಚೆಕ್ ಮಾಡಿ

ಈ ಯೋಜನೆಯನ್ನು ನದಿ, ನಾಲೆ ಮತ್ತು ನೈಸರ್ಗಿಕ ಹಳ್ಳಕೊಳ್ಳಗಳ ಅಕ್ಕಪಕ್ಕದಲ್ಲಿನ ಪರಿಶಿಷ್ಠ ಜಾತಿಗೆ ಸೇರಿದವರು ಸಣ್ಣ ಮತ್ತುಅತೀ ಸಣ್ಣ ರೈತರು ಹೊಂದಿರುವ ಒಣ ಭೂಮಿಗೆ ನೆಲದಲ್ಲಿ ಪಿವಿಸಿ ಪೈಪ್ ಗಳನ್ನು ಅಳವಡಿಸಿ ನೀರಿನ ಮೂಲದಿಂದ ಪೈಪ್ ಮೂಲಕ ನೀರನ್ನು ಹಾಯಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.ಈ ಯೋಜನೆಯಡಿ ಕನಿಷ್ಠ 3 ಅಥವಾ ಗರಿಷ್ಠ 4 ಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆಕನಿಷ್ಠ 8 ಎಖರೆಿಯಿಂದ ಗರಿಷ್ಠ 15 ಎಕರೆವರೆಗಿನ ಜಮೀನುಗಳಿಗೆ 9 ಲಕ್ಷ ಸಬ್ಸಿಡಿ ಸಾಮೂಹಿಕವಾಗಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು

Gangakalyana  4 lakh subsidy ಅರ್ಜಿಸಲ್ಲಿಸಲು ಬೇಕಾಗುವ ಅರ್ಹತೆಗಳು

ಅರ್ಜಿದಾರರು  ಪರಿಶಿಷ್ಠ ಜಾತಿಗೆ ಸೇರಿಸದವರಾಗಿರಬೇಕು. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು 21 ವರ್ಷ ಮೇಲ್ಪಟ್ಟ ವಯೋಮಾನದವರಾಗಿರಬೇಕು. ಅರ್ಜಿದಾರರು ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಅರೆ ಸರ್ಕಾರಿ ನೌಕರಿಯಲ್ಲಿರಬಾರದು. ಅರ್ಜಿದಾದರು ಅಥವಾಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈಹಿಂದೆ ನಿಗಮದಿಂದ ಸೌಲಭ್ಯ ಪಡೆದಿದ್ದಲ್ಲಿ ಅಂತಹ ಫಲಾನುಭವಿಗಳು ಅರ್ಹರಿರುವುದಿಲ್ಲ.

ಆಯ್ಕೆಹೇಗೆ ಮಾಡಲಾಗುವುದು?

ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ 1.50 ಲಕ್ಷ ನಗರ ಪ್ರದೇಶದಲ್ಲಿ 2 ಲಕ್ಷ ಮಿತಿಯೊಳಗಿರಬೇಕು. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡುಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲಾಗುವುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಅರ್ಜಿ, ಭಾವಚಿತ್ರ,  ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿ, ಸಣ್ಣ ರೈತ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಇರಬೇಕು.

Leave a Comment