ಬೆಳೆಹಾನಿಯಾದ ರೈತರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಚೆಕ್ ಮಾಡಿ

Written by Ramlinganna

Published on:

Bele hani farmers list: ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಮಳೆಯಿಂದಾಗಿ 473 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಜುಲೈ 1 ರಿಂದಆಗಸ್ಟ್31 ರವರೆಗೆ ಅತೀವೃಷ್ಟಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಯಾಗುತ್ತಿವೆ.

ಹಾನಿಗೊಳಗಾದ ಬೆಳೆಗಳಿಗೆ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ಪಾವತಿ ಸಂಬಂಧ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದೆ. ಜಂಟಿ ಸಮೀಕ್ಷೆಯಂತೆ ತಾಲೂಕುವಾರು ಬೆಳೆ ಹಾನಿಯಾಗಿದೆ.

ಮೈಸೂರು ತಾಲೂಕಿನಲ್ಲಿ 6.9 ಹೆಕ್ಟೇರ್ ನಂಜನೂಗುಡು 125.68, ಟಿ. ನರಸಿಪುರ 45.78, ಹುಣಸೂರು 116.8, ಕೆ.ಆರ್. ನಗರ 7.66, ಸಾಲಿಗ್ರಾಮ 55.83, ಪಿರಿಯಾಪಟ್ಟಣ 66.65, ಎಚ್.ಡಿ. ಕೋಟೆ 37.97 ಮತ್ತು ಸರಗೂರು 10.13 ಹೆ.ಸೇರಿ ಒಟ್ಟಾರೆ 473.6 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಜಂಟಿ ಸಮೀಕ್ಷೆಯಂತೆ ಬೆಳೆ ಹಾನಿ ವಿವರವನ್ನು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ ಕಚೇರಿ, ಕೃಷಿ ತೋಟಗಾರಿಕೆ ಕಚೇರಿ, ಗ್ರಾಪಂ ರೈತ ಸಂಪರ್ಕ ಕೇಂದ್ರ ಹಾಗೂ ಜಿಲ್ಲಾ ವೆಬ್ಸೈಟ್ http://mysore.nic.in

ನಲ್ಲಿ ಪ್ರಕಟಿಸಿದೆ.

ಈ ಸಂಬಂಧ ಆಕ್ಷೇಪಣೆ ಇದ್ದಲ್ಲಿ ಸಂಬಂಧಿಸಿದ ತಹಶೀಲ್ದಾರರ, ಕೃಷಿ ತೋಟಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ 7 ದಿನಗಳೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮೀ ಕಾಂತರೆಡ್ಡಿ ಸೂಚಿಸಿದ್ದಾರೆ.

Bele hani farmers list ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಕಳೆದ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರ ವಿಮೆ ಹಣ ಜಮೆಯಾಗಲು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/        

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗನಿಮಗೆ ಬೆಳೆ ವಿಮೆ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷದ ಆಯ್ಕೆ  2023-2024 ಆಯ್ಕೆ ಮಾಡಿಕೊಳ್ಳಬೇಕು.ನಂತರ ಮುಂದೆ / ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗಿದ್ದು ಕಾಣಿಸುತ್ತದೆ. ಅಲ್ಲಿ ನೀವು check Status ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. Proposal Mobile No and Aadhaar ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ.

ಅದರಲ್ಲಿ ನೀವು Mobile No. ಆಯ್ಕೆ ಮಾಡಿಕೊಳ್ಳಬೇಕು.  ನಂತರ ನಿಮ್ಮ ಮೊಬೈಲ್ ನಂಬರ್ ಬರೆಯಬೇಕು. ಇದಾದ ನಂತರ ಅಲ್ಲಿ ಕಾಣುವ Captcha ಕೋಡ್ ಹಾಕಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಅರ್ಜಿ ವಿಮಾ ಕಂಪನಿಯಿಂದ ಸ್ವೀಕೃತವಾಗಿರುವ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ Panchatantra 2.0: ನಿಮ್ಮ ಗ್ರಾಪಂ ಮಾಹಿತಿ Mobileನಲ್ಲೇ ಚೆಕ್ ಮಾಡಿ

ಇದಾದ ನಂತರ ಅಲ್ಲಿ ಕಾಣುವ Select ಮೇಲೆ ಕ್ಲಿಕ್ ಮಾಡಬೇಕು.  ಇದಾದ ನಂತರ View Details ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿನೀವು ಯಾವ ಸರ್ವೆ ನಂಬರಿಗೆ ವಿಮೆ ಮಾಡಿಸಿದ್ದೀರಿ ಎಷ್ಟು ವಿಮೆ ಹಣ ಪಾವತಿಸಿದ್ದೀರಿ?ನಿಮ್ಮ ಬೆಳೆ ಸಂಪೂರ್ಣ ಹಾನಿಯಾದರೆ ಎಷ್ಟುವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿ ಕಾಣಿಸುತ್ತದೆ.

ಬೆಳೆ ಹಾನಿಯಾದಾಗ ರೈತರೇನು ಮಾಡಬೇಕು?

ಅತೀವೃಷ್ಟಿ, ಅನಾವಷ್ಟಿ, ಪ್ರವಾರ, ಗುಡುಗು, ಮಿಂಚಿನಿಂದಾಗು ಬೆಂಕಿ ಅವಘಡ, ಭೂ ಕುಸಿತದಿಂದಾಗಿ ಬೆಳ ಹಾನಿಯಾದರೆ ರೈತರೂ 72 ಗಂಟೆಯೊಳಗೆ ವಿಮಾ ಕಂಪನಿಗೆ ದೂರು ನೀಡದ ನಂತರವೇ ಬೆಳೆ ವಿಮೆ ಜಮೆಯಾಗುವುದು.  ಹಾಗಾಗಿ ರೈತರು ಬೆಳೆ ಹಾಳಾಗಿರುವ ಕುರಿತು ವಿಮಾ ಕಂಪನಿಗೆ ತಿಳಿಸುವುದು ಕಡ್ಡಾಯವಾಗಿದೆ.

Leave a Comment