ಇಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

Written by By: janajagran

Updated on:

weather forecast yellow alert ದಕ್ಷಿಣ ಹಾಗೂ ಮಲೆನಾಡಿನ ಐದು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗುವ ಮುನ್ಸೂಚನೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಏಪ್ರೀಲ್ 21 ರಂದು (ಬುಧವಾರ) ಮಳೆಯಾಗುವ ನಿರೀಕ್ಷೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

weather forecast yellow alert ಯಾವ ಜಿಲ್ಲೆಯಲ್ಲಿ ಎಂದಿನಿಂದ ಮಳೆ ಇರಲಿದೆೆ?

ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ಐದು ದಿನ ಮುಂದುವರೆಯಲಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗಾಳಿ ಒತ್ತಡ ಕಡಿಮೆಯಾಗಿರುವ ಪರಿಣಾಮ ತೇವಾಂಶ ಭರಿತ ಮೋಡಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಯಾಗುತ್ತಿದೆ. ಉಳಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಪ್ರೀಲ್ 25 ರವರೆಗೆ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳ ಕಾಲ ಮೋಡಕವಿದ ವಾತಾವರಣ ಇರಲಿದ್ದು, ದಕ್ಷಿಣ ಒಳನಾಡಿ ವಿವಿಧೆಡೆ ಅಲ್ಲಲ್ಲಿ ಚದುರಿದಂತೆ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ವಿವಿಧೆಡೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ.

ಇದನ್ನೂ ಓದಿ ಗೃಹಲಕ್ಷ್ಮೀ, ಅನ್ನಭಾಗ್ಯ ಹಣ ಈ ಲಿಸ್ಟ್ ನಲ್ಲಿದ್ದವರಿಗೆ ಜಮೆ- ಚೆಕ್ ಮಾಡಿ

ಮಂಗಳವಾರ ರಾಜ್ಯ ಕೆಲ ಭಾಗಗಳಲ್ಲಿ ಮಳೆ ಅಬ್ಬರ ಜೋರಾಗಿತ್ತು. ದಕ್ಷಿಣ ಕನ್ನಡದಲ್ಲಿ 70  ಮಿಮೀ, ಉಡುಪಿಯಲ್ಲಿ 66 ಮಿಮೀ, ರಾಮನಗರದಲ್ಲಿ 62 ಮಿಮೀ, ಶಿವಮೊಗ್ಗದಲ್ಲಿ 49 ಮಿಮೀ, ತುಮಕೂರಿನಲ್ಲಿ 25 ಮಿಮೀ, ಚಿಕ್ಕಮಗಳೂರಿನಲ್ಲಿ 35 ಮಿಮೀ, ದಾರವಾಡದಲ್ಲಿ 35 ಮಿಮೀ, ದಾವಣಗೆರೆಯಲ್ಲಿ 15 ಮಿಮೀ ಮಳೆಯಾಗಿದೆ.

ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ದಿನದಂದು ಮಳೆಯಾಗುತ್ತದೆ? ಇಲ್ಲೆ ಚೆಕ್ ಮಾಡಿ

ನಿಮ್ಮ ಜಿಲ್ಲೆಯಲ್ಲಿ ಮುಂದಿನ ಐದು ದಿನ ಯಾವಾಗ ಮಳೆಯಾಗುತ್ತದೆ ಮಳೆಯು ಗುಡುಗು ಸಿಡಿಲನಿಂದ ಕೂಡಿರುತ್ತದೆಯೋ ಅಥವಾ ಸಾಧಾರಣ ಮಳೆಯಾಗಿದೆಯೋ ಎಂಬುದನ್ನು ಚೆಕ್ ಮಾಡಲು ಈ

https://mausam.imd.gov.in/responsive/districtWiseWarning.php?day=Day_2

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹವಾಮಾನ ಇಲಾಖೆಯ (ಐಎಂಡಿ) ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಜಿಲ್ಲಾವಾರು ಎಚ್ಚರಿಕೆ ಕಾಣಿಸುತ್ತದೆ. ಅಂದರೆ ಜುಲೈ, 18, ಜುಲೈ 19, ಜುಲೈ 20, ಜುಲೈ 21 ಹಾಗೂ ಜುಲೈ 22 ಹೀಗೆ ಐದು ದಿನಗಳ ಪೇಜ್ ಕಾಣಿಸುತ್ತದೆ. ಉದಾಹರಣೆಗೆ ನೀವು ಜುಲೈ 19 ಆಯ್ಕೆ ಮಾಡಿಕೊಂಡಾಗ ನಮ್ಮ ಕರ್ನಾಟಕ ಜಿಲ್ಲೆಯ ಮ್ಯಾಪ್ ನಲ್ಲಿ ಜಿಲ್ಲೆಗಳು ಕಾಣಿಸುತ್ತವೆ. ಆ ಜಿಲ್ಲೆ ಹತ್ತಿರ ಯಾವ ಪ್ರಮಾಣದಲ್ಲಿಮಳೆಯಾಗುತ್ತದೆ ಎಂಬುದು ಕಾಣಿಸುತ್ತದೆ. ಅದೇ ರೀತಿ ದಿನಾಂಕ ಬದಲಾವಣೆ ಮಾಡಿ ನೀವು ಮುಂದಿನ ಐದು ದಿನಗಳ ಮಳೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಒಂದು ಕರೆ ಮಾಡಿ ಮಳೆಯ ಮಾಹಿತಿ ಪಡೆಯುವುದು ಹೇಗೆ?      

ಮನೆಯಲ್ಲಿಯೇ ಕುಳಿತು ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಯಾವಾಗ ಮಳೆಯಾಗುತ್ತದೆ ಇದರೊಂದಿಗೆ ನಿಮ್ಮೂರಿನಲ್ಲಿ ಯಾವಾಗ ಮಳೆಯಾಗುತ್ತದೆ ಎಂಬುದರ ಮಾಹಿತಿ ಪಡೆಯಲು ವರುಣಮಿತ್ರ ಸಹಾಯವಾಣಿಯನ್ನು ಕರೆ ಮಾಡಬೇಕಾಗುತ್ತದೆ.

ಆಗ ವರುಣಮಿತ್ರ ಸಿಬ್ಬಂದಿಗಳು ಕರೆ ಸ್ವೀಕರಿಸಿ ನಿಮಗೆ ಯಾವ ದಿನಾಂಕದಂದು ಯಾವ ಪ್ರಮಾಣದಲ್ಲಿ ಮಳೆಯಾಗುತ್ತದೆ ಎಂಬ ಮಾಹಿತಿ ನೀಡಲಾಗುವುದು.

Leave a Comment