Subsidy seeds : ಮುಂಗಾರು ಹಂಗಾಮಿಗೆ ಸಬ್ಸಿಡಿಯಲ್ಲಿ ಬಿತ್ತನೆ ಬೀಜಗಳು ಬೇಕೆ? ಈಗಲೇ ಸಬ್ಸಿಡಿಯಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀಜಗಳು ಸಿಗುವ ಸಾಧ್ಯತೆ ಕಡಿಮೆ ಇರುತ್ತದೆ. ಯಾವ ಯಾವ ಬೀಜಗಳು ಲಭ್ಯವಿದೆ? ಎಲ್ಲಿ ಬೀಜಗಳು ಸಿಗುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ರೈತರಿಗೆ ಪ್ರಸಕ್ತ ಸಾಲಿನಲ್ಲಿ ಗುಡ್ ನ್ಯೂಸ್ ದೊರೆತಿದೆ. ಮುಂಗಾರು ಪ್ರವೇಶ ಸರಿಯಾದ ಸಮಯಕ್ಕೆ ಪ್ರವೇಶ ಮಾಡುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಮುಂಗಾರು ಪೂರ್ವ ಮಳೆಯೂ ಆಗುತ್ತಿದೆ. ಇದರಿಂದಾಗಿ ರೈತರು ತಮ್ಮ ಜಮೀನಿನ ಪೂರ್ವ ಸಿದ್ದತೆ ಸಹ ಮಾಡಿಕೊಳ್ಳುತ್ತಿದ್ದಾರೆ.
ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆಗೆ ಕೃಷಿ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ. ಜೂನ್ ಮೊದಲ ವಾರದಿಂದ ಬಿತ್ತನೆ ಆರಂಭವಾಗುವ ನಿರೀಕ್ಷೆ ಇದ್ದು, ರಾಜ್ಯದ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿಯಲ್ಲಿ ಬಿತ್ತನೆ ಬೀಜಗಳನ್ನು ಒದಗಿಸಲಾಗುತ್ತಿದೆ.
ಷಿರಾಜ್ಯದ ಎಲ್ಲಾ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ಸಿಗುತ್ತವೆ. ಹೌದು, ರೈತರು ತಮ್ಮ ಆಧಾರ್ ಕಾರ್ಡ್ ಜಮೀನಿನ ಪಹಣಿಯೊಂದಿಗೆ ಸಬ್ಸಿಡಿಯಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ : FID ಗೆ ನಿಮ್ಮ ಎಷ್ಟು ಸರ್ವೆ ನಂಬರ್ ಲಿಂಕ್ ಆಗಿವೆ? ಇಲ್ಲೇ ಚೆಕ್ ಮಾಡಿ
ಕೃಷಿ ಇಲಾಖೆಯಿಂದ ರಾಜ್ಯ ಬೀಜ ನಿಗಮದಿಂದ ಪ್ರಮಾಣೀಕೃತ ಹಾಗೂ ನಿಜ ಚೀಟಿ ಬಿತ್ತನೆ ಬೀಜಗಳನ್ನು ದಾಸ್ತಾನು ಪಡೆದು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ.
ಮಂಗಳೂರು ಜಿಲ್ಲೆಯಲ್ಲಿ ಕೆಂಪಕ್ಕಿ ತಳಿಯ ಭತ್ತದ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, ರಾಜ್ಯ ಬೀಜ ನಿಗಮದಲ್ಲಿ ಲಭ್ಯವಿರುವ ಕೆಂಪಕ್ಕಿ ತಳಿಗಳಾದ ಜಯ (140-150 ದಿನಗಳು), ಜ್ಯೋತಿ (115-120 ದಿನಗಳ) ಎಮ್ಓ-4 (130 -135 ದಿನಗಳು) ಸಹ್ಯಾದ್ರಿ ಕೆಂಪುಮುಕ್ತಿ (120-135 ದಿನಗಳು) ಸಿಗಲಿವೆ.
ಪ್ರಸಕ್ತ ಸಾಲಿನಲ್ಲಿ ಎಮ್ಒ-4 ತಳಿಯೊಂದಿಗೆ ಇತರ ಪರ್ಯಾಯ ಕೆಂಪಕ್ಕಿ ತಳಿಗಳಾದ ಜಯ, ಜ್ಯೋತಿ, ಸಹ್ಯಾದ್ರಿ, ಕೆಂಪುಮುಕ್ತಿ ತಳಿಗಳ ಬಿತ್ತನೆ ಬೀಜಗಳ ಪೂರೈಕೆಗೂ ವ್ಯವಸ್ಥೆ ಮಾಡಲಾಗಿದೆ.
ಪ್ರಸಕ್ತ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬಿತ್ತನೆ ಬೀಜ ಪಡೆಯುವಾಗ ವಿವಿಧ ತಳಿಯ ಭತ್ತದ ಅವಧಿ ಹಾಗೂ ಸಸ್ಯ ಸಂರಕ್ಷಣಾ ವಿಧಾನಗಳ ಮಾಹಿತಿ ಪಡೆದು ಆಯಾ ಕಾಲಕ್ಕನುಗುಣವಾಗಿ ಬಿತ್ತನೆಗೆ ಉಪಯೋಗಿಸಬೇಕು.
Subsidy seeds ಕರಾವಳಿಗೆ ಹೊಸ ತಳಿ ಕೆಂಪು ಮುಕ್ತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ್ಯಾದ್ರಿ ಕೆಂಪುಮುಕ್ತಿ ತಳಿಯನ್ನು ಹೊಸದಾಗಿ ಬಿತ್ತನೆಗೆ ಪರಿಚಯಿಸಲಾಗುತ್ತಿದೆ. ಇದು ಜ್ಯೋತಿ ತಳಿಗೆ ಪರ್ಯಾಯ ಕೆಂಪಕ್ಕಿ ತಳಿಯಾಗಿದೆ. ಸಹ್ಯಾದ್ರಿ ಕೆಂಪುಮುಕ್ತಿಯು ಅಧಿಕ ಇಳುವರಿ, ಬೆಂಕಿ ಮತ್ತು ಊದುಬತ್ತ ರೋಗ ನಿರೋಧಕ ಮುಂತಾದ ಗುಣಲಕ್ಷಣಗಳನ್ನು ಹೊಂದಿದೆ. ಎಕರೆಗೆ 20 ರಿಂದ 25 ಕ್ವಿಂಟಾಲ್ ಅಂದಾಜು ಇಳುವರಿಯನ್ನು ನೀಡುತ್ತದೆ. ಎಮ್ಒ ತಳಿಗೆ ಹೋಲಿಸಿದರೆ ಸಹ್ಯಾದ್ರಿ ಕೆಂಪುಮುಕ್ತಿಯು 8 ರಿಂದ 10 ದಿನಗಳ ಮುಂಚಿತವಾಗಿ ಕಟಾವಿಗೆ ಬರುತ್ತದೆ.
ರಾಜ್ಯದ ಎಲ್ಲಾ ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳು ಲಭ್ಯವಿರುತ್ತದೆ. ಆಯಾ ಪ್ರದೇಶಗಳಲ್ಲಿ ಬೀಜಗಳ ಬೇಡಿಕೆಗನುಗುಣವಾಗಿ ಬೀಜಗಳು ಲಭ್ಯವಿರುತ್ತದೆ. ಹಾಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕಕ್ಕೆ ತೆರಳಿ ಬೀಜಗಳನ್ನು ಪಡೆದುಕೊಳ್ಳಬಹುದು.
ಸಬ್ಸಿಡಿಯಲ್ಲಿ ಬೀಜ ಪಡೆಯಲು ಯಾವ ಯಾವ ದಾಖಲೆ ಬೇಕು?
ಸಬ್ಸಿಡಿಯಲ್ಲಿ ಬಿತ್ತನೆ ಬೀಜ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಜಮೀನಿಗೆ ಸಂಬಂಧಿಸಿ ಪಹಣಿ ಇರಬೇಕು. ಈ ದಾಖಲೆಗಳನ್ನುಪಡೆದು ರೈತರಿಗೆ ಸಬ್ಸಿಡಿಯಲ್ಲಿ ಬಿತ್ತನೆ ಬೀಜಗಳ್ನು ನೀಡಲಾಗುವುದು.