Rain rain heavy rain : ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಿಡಿಲು ಸಹಿತ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೌದು, ಮೇ 8 ರಂದು ಕೊಡಗು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗುಡುಗು ಸಹಿತ ಬಾರಿ ಮಳೆಯಾಗಲಿದೆ.
ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ , ಚಿತ್ರದುರ್ಗ,ಹಾಸನ, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ರಾಮನಗರ ಜಿಲ್ಲೆಗಳಲ್ಲಿಯೂ ಇದೇ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.
ಬೀದರ್, ಕಲಬುರಗಿ,ಯಾದಗಿರಿ, ರಾಯಚೂರು , ತುಮಕೂರು ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ.
ಇದನ್ನೂ ಓದಿ : Pm kisan farmers list ಈ ರೈತರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆ
ಇದೇ ಹವಾಮಾನ ಮುಂದಿನ ದಿನ ಎರಡು ದಿನ ಮುಂದುವರೆಯಲಿದೆ. ತಾಪಮಾನದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಇರುವುದಿಲ್ಲ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಮಳೆ ಪ್ರಮಾಣ
ಸೋಮವಾರ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಮೈಸುರು ಜಿಲ್ಲೆಯನಂಜನಗೂಡಿನಲ್ಲಿ ಅತೀ ಹೆಚ್ಚು 7 ಸೆಂ.ಮೀ ಮಳೆ ದಾಖಲಾಗಿದೆ.
ಮಂಡ್ಯ ಜಿಲ್ಲೆಯ ಕೃಷ್ಣ ರಾಜಸಾಗರದಲ್ಲಿ 5 ಸೆಂ.ಮೀ, ಚಾಮರಾಜನಗರ, ಮಂಡ್ಯ ಜಿಲ್ಲೆಯ ಹೊನಕೆರೆಯಲ್ಲಿ ತಲಾ 3 ಸೆಂ.ಮೀ, ಕೋಲಾರ, ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತುಮಕೂರು ಜಿಲ್ಲೆಯ ಮಿಡಿಗೇಶಿ, ಗುಬ್ಬಿ,ಕೊಡಗು ಜಿಲ್ಲೆಯಭಾಗಮಂಡಲಗಳಲ್ಲಿ 2 ಸೆಂ.ಮೀ ಮಳೆಯಾಗಿದೆ. ಚಾಮರಾಜನಗರದ ಎಂಎಂ ಹಿಲ್ಸ್ ಕೊಳ್ಳೇಗಾಲ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವಹನಹಳ್ಳಿಯಲ್ಲಿ ತಲಾ 1 ಸೆಂ.ಮೀ ಮಳೆ ಸುರಿದಿದೆ ಎಂದು ವರದಿಯಾಗಿದೆ.
Rain rain heavy rain ಯಾವ ಯಾವ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ?
ಬೆಂಗಳೂರು ಸೇರಿ ರಾಜ್ಯದ 16 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಹಾಸನ, ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ,ಕೋಲಾರ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.
ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯಲಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೈಸೂರು ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ.
ಮೇಘದೂತ್ ಆ್ಯಪ್ ನಲ್ಲಿ ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ
ಮೇಘದೂತ್ ಆ್ಯಪ್ ಮೂಲಕ ರೈತರು ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ. ಮಳೆಯ ಮಾಹಿತಿ ಪಡೆಯಲು ಈ
https://play.google.com/store/apps/details?id=com.aas.meghdoot&hl=en_IN&gl=US&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ ನಿಖರವಾದ ಬೆಳೆ ಸಲಹೆ ಪಡೆಯಿರಿ ಎಂಬ ಸಂದೇಶ ಕಾಣಿಸುತ್ತದೆ. ಅದರ ಕೆಳಗಡೆಯಿರುವ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿವಿಧ ಭಾಷೆಗಳಲ್ಲಿ ದಾದನಂತರ ಹವಾಮಾನ ಮುನ್ಸೂಚನೆ ಎಂಬ ಸಂದೇಶ ಕಾಣಿಸುತ್ತದೆ.
ಮಳೆ ಮಾಹಿತಿ ಬೇಕೆ? ಈ ನಂಬರಿಗೆ ಕರೆ
ನಿಮ್ಮೂರಿನಲ್ಲಾಗುವ ಮಳೆಯ ಮಾಹಿತಿ ಬೇಕೆ? ವರುಣಮಿತ್ರ ಉಚಿತ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ಹೌದು, 92433 45433 ಗೆ ಕರೆ ಮಾಡಿದರೆ ಸಾಕು, ನಿಮಗೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬ ಮಾಹಿತಿ ಸಿಗುತ್ತದೆ. ಇದರೊಂದಿಗೆ ಗಾಳಿಯ ವೇಗ ಮಳೆಯ ಪ್ರಮಾಣ ಸೇರಿದಂತೆ ಹವಾಮಾನ ವರದಿಯ ಇನ್ನಿತರ ಮಾಹಿತಿ ಸಿಗಲಿದೆ.